ಹಣ, ಕಿಡ್ನಿ ಜೋಪಾನ! ಪ್ರಸಿದ್ಧ ಆಸ್ಪತ್ರೆಯ ಹೆಸರಲ್ಲಿ ಫೇಕ್ ವೆಬ್​ಸೈಟ್; ಕಿಡ್ನಿ ಮಾರಿ 5 ಕೋಟಿ ರೂಪಾಯಿ ಪಡೆಯಿರಿ ಎಂದು ಜಾಹೀರಾತು

ನಗರದ ಒಂದು ಪ್ರಮುಖ ಆಸ್ಪತ್ರೆಯ ಹೆಸರಿನಲ್ಲಿ ನಕಲಿ ವೆಬ್​ಸೈಟ್ ಒಂದನ್ನು ತೆರೆದ ಕ್ರಿಮಿನಲ್​ಗಳು ಕಿಡ್ನಿ ಮಾರಾಟಕ್ಕೆ ವೇದಿಕೆ ಮಾಡಿಕೊಟ್ಟಿದ್ದಾರೆ. ಕಿಡ್ನಿ ಮಾರಾಟ ಮಾಡುವುದಕ್ಕೆ ಬರೋಬ್ಬರಿ 5 ಕೋಟಿ ರೂಪಾಯಿ ನೀಡುವುದಾಗಿ ವಂಚಕರು ನಕಲಿ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಹಣ, ಕಿಡ್ನಿ ಜೋಪಾನ! ಪ್ರಸಿದ್ಧ ಆಸ್ಪತ್ರೆಯ ಹೆಸರಲ್ಲಿ ಫೇಕ್ ವೆಬ್​ಸೈಟ್; ಕಿಡ್ನಿ ಮಾರಿ 5 ಕೋಟಿ ರೂಪಾಯಿ ಪಡೆಯಿರಿ ಎಂದು ಜಾಹೀರಾತು
ಸೈಬರ್ ಕ್ರೈಂ
Follow us
TV9 Web
| Updated By: ganapathi bhat

Updated on: Jun 26, 2021 | 6:25 PM

ಬೆಂಗಳೂರು: ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯ ವೇಳೆ ಬಹಳಷ್ಟು ಸೈಬರ್ ಕ್ರೈಂ ಅಪರಾಧಗಳು ದಾಖಲಾಗಿದ್ದವು. ಕೊವಿಡ್-19 ಸೋಂಕಿತರಿಗೆ ಕೂಡ ಹಲವಷ್ಟು ಸಮಸ್ಯೆಗಳು ಉಂಟಾಗಿದ್ದವು. ವೈದ್ಯಕೀಯ ಆಮ್ಲಜನಕ ಪೂರೈಕೆ, ಆಕ್ಸಿಜನ್ ಕಾನ್ಸನ್​ಟ್ರೇಟರ್, ರೆಮ್​ಡಿಸಿವಿರ್ ಇಂಜೆಕ್ಷನ್, ಬ್ಲಾಕ್ ಫಂಗಸ್ ಔಷಧ ಇವುಗಳ ಬಗ್ಗೆಯೂ ಸೈಬರ್ ಕ್ರೈಂ ಅಪರಾಧಗಳು ನಡೆದಿದ್ದವು. ಆರೋಗ್ಯ ಸಮಸ್ಯೆಯನ್ನೂ ಜನರ ಅಸಹಾಯಕತೆಯನ್ನೂ ದುರ್ಬಳಕೆ ಮಾಡಿಕೊಂಡಂತಹ ಕೆಟ್ಟ ಪ್ರಸಂಗಗಳು ವರದಿಯಾಗಿದ್ದವು. ಇಂತಹುದೇ ಒಂದು ಕೆಟ್ಟ ಸೈಬರ್ ಕ್ರೈಂ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ.

ನಗರದ ಒಂದು ಪ್ರಮುಖ ಆಸ್ಪತ್ರೆಯ ಹೆಸರಿನಲ್ಲಿ ನಕಲಿ ವೆಬ್​ಸೈಟ್ ಒಂದನ್ನು ತೆರೆದ ಕ್ರಿಮಿನಲ್​ಗಳು ಕಿಡ್ನಿ ಮಾರಾಟಕ್ಕೆ ವೇದಿಕೆ ಮಾಡಿಕೊಟ್ಟಿದ್ದಾರೆ. ಕಿಡ್ನಿ ಮಾರಾಟ ಮಾಡುವುದಕ್ಕೆ ಬರೋಬ್ಬರಿ 5 ಕೋಟಿ ರೂಪಾಯಿ ನೀಡುವುದಾಗಿ ವಂಚಕರು ನಕಲಿ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ವರದಿಯ ಪ್ರಕಾರ, ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ ಆಸ್ಪತ್ರೆಯ ಡಾ. ನಿರಂಜನ್ ರೈ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ದಾಖಲಾಗಿರುವ ಪ್ರಕರಣದ ಅನ್ವಯ ಡಾ. ಥಾಮಸ್ ಎಂಬವರ ವಿರುದ್ಧ ವಂಚಕ ವೆಬ್​ಸೈಟ್ ನಡೆಸುತ್ತಿದ್ದ ಆರೋಪದಲ್ಲಿ ದೂರು ದಾಖಲು ಮಾಡಿದ್ದಾರೆ.

ಪ್ರಕರಣದ ವಿಶೇಷ ಏನು ಅಂದರೆ, ಫೇಕ್ ವೆಬ್​ಸೈಟ್ ಕೂಡ ಮಣಿಪಾಲ್ ಆಸ್ಪತ್ರೆಯ ವೆಬ್​ಸೈಟ್​ಗೆ ಬಹಳಷ್ಟು ಹೋಲುವಂತಿದೆ. ಹೀಗೆ ತಯಾರಾಗಿರುವ ಫೇಕ್ ವೆಬ್​ಸೈಟ್​ನಲ್ಲಿ ಡಾ. ಥಾಮಸ್ ಜೋಸೆಫ್ ಎಂಬ ಹೆಸರಿನಲ್ಲಿ ಇರುವ ಸಂದೇಶ ಹೀಗಿದೆ. ನಿಮ್ಮ ಕಿಡ್ನಿಯನ್ನು 5 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿ. ಅದಕ್ಕಾಗಿ ನಮ್ಮನ್ನು ಸಂಪರ್ಕಿಸಿ ಹಾಗೂ ಇಂದೇ ಹಣ ಪಡೆದುಕೊಳ್ಳಿ. ನೀವು ಒಂದು ಕಿಡ್ನಿ ಮಾರಿಯೂ ಸಹಜ ಜೀವನ ನಡೆಸಬಹುದು ಎಂದು ಅದರಲ್ಲಿ ಹೇಳಲಾಗಿದೆ.

ಪೊಲೀಸರ ಮಾಹಿತಿಯ ಪ್ರಕಾರ, ಈ ವೆಬ್​ಸೈಟ್​ಗೆ ಭೇಟಿ ನೀಡಿರುವ ಬಹಳಷ್ಟು ಮಂದಿಯನ್ನು ವೆಬ್​ಸೈಟ್ ಬೇರೆ ಕಡೆಗೆ ರಿಡೈರೆಕ್ಟ್ ಮಾಡಿದೆ. ಇದರಲ್ಲಿ ರಿಜಿಸ್ಟ್ರೇಷನ್ ಫೀಸ್ ಎಂಬ ವಿಭಾಗ ಇರುವುದು ಕೂಡ ಕಂಡುಬಂದಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ನಾವು ವಂಚಕರ ಜಾಲವನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದೇವೆ. ಆರೋಪಿಗಳು ಬೇರೆ ರಾಜ್ಯದವರು ಎಂದು ಕಾಣುತ್ತದೆ. ನಾವು ತನಿಖೆಯ ಆರಂಭಿಕ ಹಂತದಲ್ಲಿ ಇದ್ದೇವೆ. ಯಾರಾದರೂ ಇದರಿಂದಾಗಿ ಹಣ ಕಳೆದುಕೊಂಡವರು ಇದ್ದರೆ ನಮಗೆ ಮಾಹಿತಿ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ಟೈಮ್ಸ್ ನೌ ನ್ಯೂಸ್ ಹಾಗೂ ಟೈಮ್ಸ್ ಆಫ್ ಇಂಡಿಯಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಹೀಗೆ ಮೋಸದ ಜಾಲ ಬೆಳೆಸಿಕೊಂಡು ಹಣ ಕೀಳುವ ಪ್ರಕರಣಗಳು ಹಲವಾರು ವರದಿಯಾಗುತ್ತಿದೆ. ಫೇಸ್ಬುಕ್ ಖಾತೆ ಮೂಲಕವೂ ಹಣ ಕೇಳುವ ಘಟನೆಗಳು ನಡೆದಿದೆ. ಈ ಬಗ್ಗೆ ಜನರೇ ಸ್ವಯಂ ಜಾಗೃತಿ ಇಟ್ಟುಕೊಳ್ಳುವುದು. ಸಾಧ್ಯವಾದಷ್ಟು ಎಚ್ಚರಿಕೆಯಿಂದ ಆನ್​ಲೈನ್ ವ್ಯವಹಾರ ನಡೆಸುವುದು. ಅಪರಿಚಿತರಿಗೆ, ಅಪರಿಚಿತ ವೆಬ್​ಸೈಟ್​ಗಳಿಗೆ, ಅನುಮಾನಾಸ್ಪದ ಸೈಟ್​ಗಳಿಗೆ ಹಣ ನೀಡದಿರುವುದು ಒಳ್ಳೆಯದು.

ಇದನ್ನೂ ಓದಿ: ಅನುಪಮಾ ಪರಮೇಶ್ವರನ್​ ನಕಲಿ ಮಾರ್ಕ್ಸ್​ ಕಾರ್ಡ್​ ವೈರಲ್​; ಈ ಹಗರಣದ ಹಿಂದೆ ಯಾರೆಲ್ಲ ಇದ್ದಾರೆ?

₹17.72 ಕೋಟಿ ನಕಲಿ ಕರೆನ್ಸಿ ಕೈವಶವಿರಿಸಿಕೊಂಡಿದ್ದ ಜ್ಯೋತಿಷಿ ಪೊಲೀಸರ ವಶಕ್ಕೆ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ