₹17.72 ಕೋಟಿ ನಕಲಿ ಕರೆನ್ಸಿ ಕೈವಶವಿರಿಸಿಕೊಂಡಿದ್ದ ಜ್ಯೋತಿಷಿ ಪೊಲೀಸರ ವಶಕ್ಕೆ

Fake currency: ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಿದಾಗ ಶರ್ಮಾ ಅವರು ಹಿಂದೆ ಜೈಲು ಶಿಕ್ಷೆ ಅನುಭವಿಸಿದ್ದರು ಎಂದು ಕಂಡು ರಾಚಕೊಂಡ ಪೊಲೀಸರಿಗೆ ತಿಳಿದಿದೆ. ಈ ಹಿಂದೆ ಅವರು 90 ಕೋಟಿ ನಕಲಿ ಕರೆನ್ಸಿಯನ್ನು ಬ್ಯಾಂಕ್ ಮೂಲಕ ವರ್ಗಾಯಿಸಲು ಪ್ರಯತ್ನಿಸಿದ್ದರು

₹17.72 ಕೋಟಿ ನಕಲಿ ಕರೆನ್ಸಿ ಕೈವಶವಿರಿಸಿಕೊಂಡಿದ್ದ ಜ್ಯೋತಿಷಿ ಪೊಲೀಸರ ವಶಕ್ಕೆ
ಪ್ರಾತಿನಿಧಿಕ ಚಿತ್ರ

ಹೈದರಾಬಾದ್: ಹಲವಾರು ಗ್ರಾಹಕರ ಭವಿಷ್ಯದ ಬಗ್ಗೆ ಭವಿಷ್ಯ ನುಡಿಯುತ್ತಿದ್ದ ಜ್ಯೋತಿಷಿಯೊಬ್ಬರ ಮನೆಯಲ್ಲಿ ನಡೆದ ಕಳವು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾಗ ದೂರುದಾತನನ್ನೇ ಪೊಲೀಸರು  ಬಂಧಿಸಿದ ಘಟನೆ ನಡೆದಿದೆ.  ಬೆಲ್ಲಂಕೊಂಡ ಮುರಳಿಕೃಷ್ಣ ಶರ್ಮಾ ಅವರು ಜೂನ್ 15 ರಂದು ನಾಗೋಲೆಯಲ್ಲಿರುವ ನಿವಾಸದಿಂದ ಅಮೂಲ್ಯವಾದ ಕಲ್ಲುಗಳು ಮತ್ತು ನಗದು ಕಳ್ಳತನದ ದೂರು ನೀಡಿದ್ದರು. ಈ ಪ್ರಕರಣದ ಬಗ್ಗೆ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದಾಗ ಶರ್ಮಾ ಅವರು ನಕಲಿ ಕರೆನ್ಸಿ ಪೆಡ್ಲರ್ ಎಂದು ತಿಳಿದುಬಂದಿದೆ.

ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಿದಾಗ ಶರ್ಮಾ ಅವರು ಹಿಂದೆ ಜೈಲು ಶಿಕ್ಷೆ ಅನುಭವಿಸಿದ್ದರು ಎಂದು ಕಂಡು ರಾಚಕೊಂಡ ಪೊಲೀಸರಿಗೆ ತಿಳಿದಿದೆ. ಈ ಹಿಂದೆ ಅವರು 90 ಕೋಟಿ ನಕಲಿ ಕರೆನ್ಸಿಯನ್ನು ಬ್ಯಾಂಕ್ ಮೂಲಕ ವರ್ಗಾಯಿಸಲು ಪ್ರಯತ್ನಿಸಿದ್ದರು. ಕಳ್ಳತನದ ಪ್ರಕರಣದಲ್ಲಿ ವೇಲ್ಪುರಿ ಪವನ್ ಕುಮಾರ್, ದೊಂಡಪತಿ ರಾಮಕೃಷ್ಣ, ನಲ್ಲಬೋತುಲಾ ಸುರೇಶ್ ಗೋಪಿ, ಚಂದುಲೂರಿ ವಿಜಯ್ ಕುಮಾರ್, ಕಂಭಂಪತಿ ಸೂರ್ಯ ಮತ್ತು ಚಂಡಲೂರಿ ನಾಗೇಂದ್ರ ಪ್ರಸಾದ್ ಶರ್ಮಾ ಎಂಬವರನ್ನು ಬಂಧಿಸಿದ್ದಾರೆ.ಜೂನ್ 15 ರಂದು ಆರು ಜನರು ತಮ್ಮ ಮನೆಗೆ ನುಗ್ಗಿ ಲಕ್ಷ ನಗದು ಮತ್ತು ರತ್ನದ ಕಲ್ಲುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಜ್ಯೋತಿಷಿ ಶರ್ಮಾ ಪೊಲೀಸರಿಗೆ ದೂರು ನೀಡಿದ್ದರು.

ಲೂಟಿ ಮಾಡಿದ್ದು ನಕಲಿ ನೋಟು
ಆರು ಆರೋಪಿಗಳು ಲೂಟಿ ಮಾಡಿದ ಹಣ ತೆಗೆದುಕೊಂಡು ಹೈದರಾಬಾದ್‌ನಿಂದ ವಿಜಯವಾಡಕ್ಕೆ ಪಲಾಯನ ಮಾಡುತ್ತಿರುವಾಗ ತಮ್ಮ ಬ್ಯಾಗ್‌ಗಳನ್ನು ತೆರೆದು ನೋಡಿದರೆ ಅದರಲ್ಲಿ ನಕಲಿ ಕರೆನ್ಸಿ ನೋಟಿತ್ತು. ಇದು ಮತ್ತಷ್ಟು ಸಮಸ್ಯೆ ಉಂಟು ಮಾಡುತ್ತದೆ ಎಂದು ಅರಿತ ಅವರು ನಾರ್‌ಕೆಟ್‌ಪಲ್ಲಿಯಲ್ಲಿ ಪೆಟ್ರೋಲ್ ಖರೀದಿಸಿ ಮತ್ತು ನಕಲಿ ನೋಟುಗಳಿಗೆ ಬೆಂಕಿ ಹಚ್ಚಿದರು. ಈ ಮಧ್ಯೆ ಶರ್ಮಾ ಅವರ ದೂರಿನ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು ಗುಂಟೂರು ಜಿಲ್ಲೆಯ ಪಿಡುಗುರಲ್ಲದ ವೆಲ್ಪುರಿ ಪವನ್ ಕುಮಾರ್ ಅವರನ್ನು ಬಂಧಿಸಿದರು.
ಜ್ಯೋತಿಷಿಯ ಮನೆಯಲ್ಲಿ ನೋಟುಗ ಕಳ್ಳತನದ ಪ್ರಮುಖ ಆರೋಪಿ ಆಗಿದ್ದ ಆತನನ್ನು ವಿಚಾರಿಸಿದ ನಂತರ ಪೊಲೀಸರು ಉಳಿದ ಐವರನ್ನು ಬಂಧಿಸಿ ನಕಲಿ ಕರೆನ್ಸಿಯನ್ನು ಸುಟ್ಟು ಹಾಕಿದ ಬಗ್ಗೆ ತಿಳಿದುಕೊಂಡರು. ನಂತರ ನಕಲಿ ಕರೆನ್ಸಿಯನ್ನು ಕೈವಶವಿರಿಸಿಕೊಂಡಿದ್ದಕ್ಕೆ ಶರ್ಮಾ ಅವರನ್ನು ಪೊಲೀಸರು ಬಂಧಿಸಿದರು.

ಶರ್ಮಾನನ್ನು ವಿಚಾರಿಸಿದಾಗ ಅಮೂಲ್ಯವಾದ ಕಲ್ಲುಗಳು ಸಂಪತ್ತನ್ನು ಸಂಪಾದಿಸಲು ಸಹಾಯ ಮಾಡುತ್ತದೆ ಎಂದು ಆತ ಗ್ರಾಹಕರಿಗೆ ನಂಬಿಸುತ್ತಿದ್ದರು. ಜನರನ್ನು ಮೋಸಗೊಳಿಸಲು ನಕಲಿ ಕರೆನ್ಸಿಯನ್ನು ತೋರಿಸುತ್ತಿದ್ದನು. ಪೊಲೀಸರು ಶರ್ಮಾ ಅವರ ಮನೆಯಲ್ಲಿ ಹುಡುಕಾಟ ನಡೆಸಿದಾಗ 17.72 ಕೋಟಿ ರೂ.ಗಳ ಮುಖಬೆಲೆಯ ನಕಲಿ ಕರೆನ್ಸಿ ಪತ್ತೆಯಾಗಿದೆ. ಗುಂಟೂರು ಜಿಲ್ಲೆಯ ಮಂಗಳಗಿರಿಯಿಂದ ವಿಶಾಖಪಟ್ಟಣಂನ ಸಂಸ್ಥೆಗೆ ಬ್ಯಾಂಕ್ ಮೂಲಕ 90 ಕೋಟಿ ರೂ. ನಕಲಿ ಕರೆನ್ಸಿಯನ್ನು ಬ್ಯಾಂಕ್ ಮೂಲಕ ವರ್ಗಾಯಿಸುವ ಪ್ರಯತ್ನದಲ್ಲಿ ಶರ್ಮಾ ಸಹ ಭಾಗಿಯಾಗಿದ್ದಾನೆ ಎಂದು ಹೆಚ್ಚಿನ ವಿಚಾರಣೆಯಲ್ಲಿ ತಿಳಿದುಬಂದಿದೆ. ಆದರೆ ಫೌಲ್ ಪ್ಲೇ ಎಂದು ಶಂಕಿಸಿದ ಬ್ಯಾಂಕ್ ಅಧಿಕಾರಿಗಳು ವಹಿವಾಟನ್ನು ನಿಲ್ಲಿಸಿ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿದ್ದು ಶರ್ಮಾನನ್ನು ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ಶರ್ಮಾ ತನ್ನ ರತ್ನದ ವ್ಯವಹಾರವನ್ನು ಪುನರಾರಂಭಿಸಿದ್ದರು.

ಇದನ್ನೂ ಓದಿ:  ಕಳೆದ ಎರಡು ವರ್ಷದಿಂದ ಮುದ್ರಣವಾಗಿಲ್ಲ ರೂ. 2000 ಮುಖಬೆಲೆಯ ಕರೆನ್ಸಿ ನೋಟು