ನಾನು ಪ್ರತಿ ಬಾರಿ ದೆಹಲಿಗೆ ಬಂದಾಗ ಸುದ್ದಿ ಆಗುತ್ತೆ; ಇದೊಂದು ಖಾಸಗಿ ಭೇಟಿ, ರಾಜಕೀಯ ಉದ್ದೇಶವಿಲ್ಲ: ಸಿ ಪಿ ಯೋಗೇಶ್ವರ್
ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿದ್ದೇನೆಂದು ಸಿ.ಪಿ. ಯೋಗೇಶ್ವರ್ ನೀಡಿದ ಹೇಳಿಕೆಗೆ ಶಾಸಕ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಸಿ.ಪಿ.ಯೋಗೇಶ್ವರ್‌ರದ್ದು ನಕಲಿ ಪರೀಕ್ಷೆ ಎಂದು ತುಮಕೂರಿನಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿ: ನಾನು ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಬಂದಿದ್ದೇನೆ. ನಾನು ಪ್ರತಿ ಬಾರಿ ದೆಹಲಿಗೆ ಬಂದಾಗ ಸುದ್ದಿ ಆಗುತ್ತೆ. ಆದರೆ, ಇದೊಂದು ಖಾಸಗಿ ಭೇಟಿ. ನಾನು ದೆಹಲಿಗೆ ಬಂದಿರುವುದಕ್ಕೆ ರಾಜಕೀಯ ಉದ್ದೇಶವಿಲ್ಲ ಎಂದು ದೆಹಲಿಯಲ್ಲಿ ಇಂದು (ಜೂನ್ 26) ಸಚಿವ ಸಿ.ಪಿ. ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುವ ವಿಚಾರವಾಗಿ ಪ್ರಶ್ನೆ ಕೇಳಿದಾಗ, ಈ ಬಗ್ಗೆ ನಿನ್ನೆ ಹೇಳಿದ್ದೇನೆ ಮತ್ತೇನೂ ಹೇಳಲ್ಲ ಎಂದು ಯೋಗೇಶ್ವರ್ ತಿಳಿಸಿದ್ದಾರೆ. ಬಳಿಕ, ಸಂಜೆ 4 ಗಂಟೆಗೆ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿದ್ದೇನೆಂದು ಸಿ.ಪಿ. ಯೋಗೇಶ್ವರ್ ನೀಡಿದ ಹೇಳಿಕೆಗೆ ಶಾಸಕ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಸಿ.ಪಿ.ಯೋಗೇಶ್ವರ್‌ರದ್ದು ನಕಲಿ ಪರೀಕ್ಷೆ ಎಂದು ತುಮಕೂರಿನಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ನಿಜವಾದ ಪರೀಕ್ಷೆ ಬರೆದವ್ರು ಫೇಲಾಗಿದ್ದಾರೆ. ನಕಲಿ ಪರೀಕ್ಷೆ ಬರೆದವರು ಆತ್ಮಾವಲೋಕನ ಮಾಡಿಕೊಳ್ಳಲಿ. ಪರೀಕ್ಷೆ ಬರೆದವರಿಗೆ ಅವರ ಹಣೆಬರಹ ಗೊತ್ತಿರುತ್ತೆ. ಎಷ್ಟು ಮಾರ್ಕ್ಸ್ ಬರತ್ತೆ ಅಂತಾ ಅವರಿಗೆ ಗೊತ್ತಿರುತ್ತೆ ಎಂದು ಹೇಳಿದ್ದಾರೆ. ಸಿಎಂಗೆ ಈಗಾಗಲೇ ವರಿಷ್ಠರು ಒಳ್ಳೇ ಅಂಕ ಕೊಟ್ಟಿದ್ದಾರೆ. ಒಳ್ಳೆಯ ಕೆಲಸದ ಆಧಾರದ ಮೇಲೆ ಅಂಕ ಕೊಟ್ಟಿದ್ದಾರೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಭೆ ಮಾಡಿ ಚರ್ಚಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆಂದೂ ಹೇಳಿದ್ದಾರೆ. ಸೂರ್ಯ, ಚಂದ್ರ ಇರುವವರೆಗೆ ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯುತ್ತಾರೆ. ಮುಂದಿನ ಚುನಾವಣೆ ಬಿಎಸ್‌ವೈ ನೇತೃತ್ವದಲ್ಲೇ ನಡೆಯುತ್ತೆ. ಬಿಜೆಪಿ ಸಂಸದ ರಾಘವೇಂದ್ರಗೆ ಕೇಂದ್ರ ಸಚಿವರನ್ನಾಗಿ ಮಾಡಿ. ಸಿಎಂ ಸ್ಥಾನದಿಂದ ಬಿಎಸ್‌ವೈ ಕೆಳಗಿಳಿಸುವ ವಿಚಾರ ಊಹಾಪೋಹ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಇದನ್ನೂ ಓದಿ: ಮುಂದಿನ ವಾರದಿಂದಲೇ ಪ್ರವಾಸಿ ಸ್ಥಳಗಳು ಓಪನ್ : ಸಚಿವ ಸಿ ಪಿ ಯೋಗೇಶ್ವರ್ ಘೋಷಣೆ
ಕೊವಿಡ್ ನಿಯಮ ಉಲ್ಲಂಘಿಸಿದ ಸಚಿವ ಸಿ.ಪಿ.ಯೋಗೇಶ್ವರ್; ದೇವಸ್ಥಾನದಲ್ಲಿ ಕೇಕ್ ಕತ್ತರಿಸಿ ಪತ್ನಿ ಹುಟ್ಟುಹಬ್ಬ ಆಚರಣೆ