Karnataka Summer Travel: ಪಶ್ಚಿಮ ಘಟ್ಟದ ಚಾರಣ ಸ್ನೇಹಿ ಬೆಟ್ಟ ಈ ಕೊಡಚಾದ್ರಿ, ಹೋಗುವ ಮಾರ್ಗಗಳ ಬಗ್ಗೆ ಇಲ್ಲಿದೆ ಮಾಹಿತಿ
ಕರ್ನಾಟಕದ ಎಲ್ಲೆಡೆ ಬಿಸಿಲ ಧಗೆ ಹೆಚ್ಚಿದೆ, ಈ ಸಮಯದಲ್ಲೇ ಮಕ್ಕಳಿಗೂ ಕೂಡ ಬೇಸಿಗೆ ರಜೆ ಶುರುವಾಗಿದೆ, ನಿಮ್ಮ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಬೇಕೆಂಬ ಆಲೋಚನೆ ಇದ್ದರೆ ಕೊಡಚಾದ್ರಿ ಉತ್ತಮ ಸ್ಥಳವಾಗಿದೆ. ಬೇಸಿಗೆಯಲ್ಲೂ ತಂಪು ಅನುಭವವನ್ನು ನೀವು ಪಡೆಯಬಹುದು.
ಬೇಸಿಗೆಯಲ್ಲೂ ತಂಪು ಅನುಭವ ನೀಡುವ ಈ ಕೊಡಚಾದ್ರಿ(Kodachadri)ಯನ್ನು ನೀವು ನೋಡಲೇಬೇಕು. ಬೇಸಿಗೆಯಲ್ಲಿ ಇಂಥಾ ಸ್ಥಳಗಳಿಗೆ ಭೇಟಿ ನೀಡಬಹುದು. ಇದು ಸಮುದ್ರ ಮಟ್ಟದಿಂದ 1343 ಮೀಟರ್ ಎತ್ತರವಿರುವ ಕೊಡಚಾದ್ರಿ ಕರ್ನಾಟಕದ ಅತಿ ಎತ್ತರದ ಶಿಖರಗಳಲ್ಲೊಂದಾಗಿದೆ. ಸಂಸ್ಕೃತದ ಕುಟಜಾ ಎಂಬ ಪದದಿಂದ ಕೊಡಚಾದ್ರಿ ಹೆಸರು ಬಂದಿದೆ. ಕುಟಜಾ ಎಂದರೆ ಮಲ್ಲಿಗೆಯ ಬೆಟ್ಟ ಎಂದರ್ಥ.
ಕೊಡಚಾದ್ರಿ ಬೆಟ್ಟದ ಪ್ರಮುಖ ಆಕರ್ಷಣೆಗಳು ಕೊಡಚಾದ್ರಿ ಪಶ್ಚಿಮ ಘಟ್ಟದ ವಿಹಂಗಮ ನೋಟಗಳನ್ನು ನೀಡುತ್ತದೆ. ಮೋಡಗಳಿಲ್ಲದ ದಿನದಲ್ಲಿ ದೂರದ ಅರಬ್ಬಿ ಸಮುದ್ರವನ್ನು ಮತ್ತು ಕೊಲ್ಲೂರು ಪಟ್ಟಣವನ್ನು ನೋಡಬಹುದಾಗಿದೆ.
ಗಣೇಶ ಗುಹೆ: ಆದಿ ಶಂಕರಾಚಾರ್ಯರು ಇಲ್ಲಿ ಧ್ಯಾನ ಮಾಡಿದ್ದಾರೆಂದು ಹೇಳಲಾಗುವ ಕೊಡಚಾದ್ರಿ ಬೆಟ್ಟದ ಮೇಲಿರುವ ಗಣೇಶ ಗುಹೆ ಮತ್ತು ಸರ್ವಜ್ಞ ಪೀಠ ನೋಡಲೇಬೇಕಾದ ತಾಣಗಳಾಗಿವೆ.
ಹಿಡ್ಲುಮನೆ ಜಲಪಾತ: ಚಾರಣ ಮಾಡಿ ಕೊಡಚಾದ್ರಿಯಿಂದ 5 ಕಿ.ಮೀ. ದೂರ ಇರುವ ಹಿಡ್ಲುಮನೆ ಜಲಪಾತ ನೋಡಬಹುದಾಗಿದೆ. ಕೊಡಚಾದ್ರಿಯಿಂದ ಅರಬ್ಬೀ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡಬಹುದು.
ಕೊಡಚಾದ್ರಿ ತಲುಪುವುದು ಹೇಗೆ? ವಿಮಾನಕ್ಕೆ ಆದ್ಯತೆ ನೀಡುವುದಾದರೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಬಹುದು. ಶಿವಮೊಗ್ಗ ನಿಲ್ದಾಣವು ಕೂಡ ಅನುಕೂಲಕರ. ಜತೆಗೆ ಕುಂದಾಪುರ ರೈಲು ನಿಲ್ದಾಣಕ್ಕೆ ಹೋಗಿ ಅಲ್ಲಿಂದಲೂ ಪ್ರಯಾಣ ಬೆಳೆಸಬಹುದು. ಅಲ್ಲಿಂದ ಟ್ಯಾಕ್ಸಿ ಮೂಲಕ ನಿಟ್ಟೂರಿಗೆ ಹೋಗಬಹುದು. ವಿಮಾನ ನಿಲ್ದಾಣದಿಂದ ಕುಂದಾಪುರ ರೈಲು ನಿಲ್ದಾಣಕ್ಕೆ ಹೋಗಲು ಅಂದಾಜು ಎರಡೂವರೆ ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಮತ್ತಷ್ಟು ಓದಿ: ಬಿಸಿಲ ಧಗೆಯಲ್ಲೂ ಪದೇ ಪದೇ ನೋಡಲೇಬೇಕೆನಿಸುವ ಜೋಗದ ಗುಂಡಿ, ಹೋಗೋದು ಹೇಗೆ? ಇಲ್ಲಿದೆ ಮಾಹಿತಿ
ಅಲ್ಲಿಂದ ಮುಂದಕ್ಕೆ ಸುಮಾರು 7 ಗಂಟೆಗಳ ಪ್ರಯಾಣ. ಕೊಡಚಾದ್ರಿ ತಲುಪಲು ಕೊಲ್ಲೂರು ಪಟ್ಟಣಕ್ಕೆ ಬರಬೇಕು. ಕೊಲ್ಲೂರು ಮಂಗಳೂರಿನಿಂದ (ಹತ್ತಿರದ ವಿಮಾನ ನಿಲ್ದಾಣ) 130 ಕಿ.ಮೀ ಮತ್ತು ಬೆಂಗಳೂರಿನಿಂದ 430 ಕಿ.ಮೀ ದೂರದಲ್ಲಿದೆ. ಮಂಗಳೂರು ಮತ್ತು ಕೊಲ್ಲೂರು ನಡುವೆ ದಿನವಿಡೀ ಹಲವಾರು ಖಾಸಗಿ ಬಸ್ಸುಗಳು ಚಲಿಸುತ್ತವೆ. ಬೈಂದೂರಿನ ಮೂಕಾಂಬಿಕಾ ರಸ್ತೆ ರೈಲು ನಿಲ್ದಾಣ ಕೊಲ್ಲೂರಿನಿಂದ 20 ಕಿ.ಮೀ ದೂರದಲ್ಲಿದೆ.
ಕೊಲ್ಲೂರಿನಿಂದ ಪ್ರವಾಸಿಗರು ಕೊಡಾಚಾದ್ರಿ ತಲುಪಲು ಜೀಪ್‌ಗಳನ್ನು ಬಾಡಿಗೆಗೆ ಪಡೆಯಬಹುದು. ಬೆಟ್ಟದ ರಸ್ತೆಯ ಕೊನೆಯ ಕೆಲವು ಕಿ.ಮೀ ತುಂಬಾ ಕಡಿದಾಗಿದ್ದು ಸಾಮಾನ್ಯ ವಾಹನಗಳಿಗೆ ಸೂಕ್ತವಲ್ಲ.
ಜೀಪ್‌ಗಳಲ್ಲಿ ಅನುಭವಿ ಸ್ಥಳೀಯ ಚಾಲಕರು ಮಾತ್ರ ಪ್ರವಾಸಿಗರನ್ನು ಬೆಟ್ಟದ ಮೇಲೆ ನಿಗದಿತ ಶುಲ್ಕ ಪಡೆದು ಕರೆದೊಯ್ಯುತ್ತಾರೆ.
ಕೊಡಚಾದ್ರಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಳೆಗಾಲದ ನಂತರ (ಅಕ್ಟೋಬರ್ ನಿಂದ ಮೇ ವರೆಗೆ) ಸಮಯ.
ನಗರ ಕೋಟೆ (30 ಕಿ.ಮೀ), ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ (37 ಕಿ.ಮೀ), ಸಿಗಂದೂರು ದೇವಸ್ಥಾನ (51 ಕಿ.ಮೀ) ಮತ್ತು ಜೋಗ ಜಲಪಾತ (100 ಕಿ.ಮೀ) ಹತ್ತಿರದ ಆಕರ್ಷಣೆಗಳಾಗಿದ್ದು ಕೊಡಚಾದ್ರಿಯೊಂದಿಗೆ ಭೇಟಿ ನೀಡಬಹುದು.
ವಸತಿ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕೊಡಚಾದ್ರಿ ಸಮೀಪ ಪ್ಯಾರಡೈಸ್ ವೈಲ್ಡ್ ಹಿಲ್ ರೆಸಾರ್ಟ್ ನಡೆಸುತ್ತಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:39 am, Mon, 8 April 24