ವಿದ್ಯುತ್, ಶೌಚಾಲಯ ಇಲ್ಲದೆ ಬದುಕು ಸಾಗಿಸುತ್ತಿರುವ ಆದಿವಾಸಿಗಳು; ಸಾರ್ವಜನಿಕರ ಒತ್ತಾಯವೇನು?
ನಾಗರಹೊಳೆ ಆಭಯಾರಣ್ಯದಲ್ಲಿ ಸುಮಾರು 300 ಮಂದಿ ವಾಸಿಸುತ್ತಿದ್ದಾರೆ. ಶತಮಾನಗಳಿಂದ ಇಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಆದರೆ ವಿಪರ್ಯಾಸ ಏನೆಂದರೆ ಇಲ್ಲಿರುವ ಯಾವುದೇ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ.
ಕೊಡಗು: ಜಿಲ್ಲೆ ಗಡಿಯಲ್ಲಿರುವ ನಾಗರಹೊಳೆ ಅಭಯಾರಣ್ಯದಲ್ಲಿ (Nagarahole Abhayaranya) ವಾಸವಿರುವ ಆದಿವಾಸಿಗಳು ಕಾಡನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಕಾಡಿನಲ್ಲಿ ಇರುವ ಕಾರಣಕ್ಕಾಗಿಯೇ ಆದಿವಾಸಿಗಳಿಗೆ ಆಧುನಿಕ ಸೌಕರ್ಯಗಳು ಸಿಗುತ್ತಿಲ್ಲ. ಆಧುನಿಕ ಸೌಕರ್ಯಗಳಿಲ್ಲದೆ ಶತಮಾನಗಳಿಂದ ಜೇನು ಕುರುಬ ಜನಾಂಗದವರು ಬದುಕು ನಡೆಸುತ್ತಿದ್ದಾರೆ. ಅರಣ್ಯದ ಮಧ್ಯೆ ಪ್ಲಾಸ್ಟಿಕ್ ಹೊದಿಕೆ ಮತ್ತು ಮಣ್ಣಿನ ಗೋಡೆಯ ಮನೆಗಳಲ್ಲಿ ಆದಿವಾಸಿಗಳು ಆಶ್ರಯ ಪಡೆಯುತ್ತಿದ್ದು, ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುತ್ತಿದ್ದಾರೆ.
ನಾಗರಹೊಳೆ ಆಭಯಾರಣ್ಯದಲ್ಲಿ ಸುಮಾರು 300 ಮಂದಿ ವಾಸಿಸುತ್ತಿದ್ದಾರೆ. ಶತಮಾನಗಳಿಂದ ಇಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಆದರೆ ವಿಪರ್ಯಾಸ ಏನೆಂದರೆ ಇಲ್ಲಿರುವ ಯಾವುದೇ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಸರ್ಕಾರ ಮನೆಗೊಂದು ಸೋಲಾರ್ ದೀಪ ನೀಡಿದ್ದರೂ ಹಲವು ಮನೆಗಳಲ್ಲಿ ಅದು ಕೂಡಾ ಕೆಲಸ ಮಾಡುತ್ತಿಲ್ಲ. ಅಭಯಾರಣ್ಯದ ಒಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತಿಲ್ಲ ಎಂಬ ಕಾನೂನು ಇವರಿಗೆ ಮುಳುವಾಗಿದೆಯಂತೆ. ತಮಾಷೆ ಅಂದರೆ ಅರಣ್ಯದಲ್ಲಿರುವ ಅಧಿಕಾರಿಗಳ ಕಚೇರಿಗಳಿಗೆ ಮಾತ್ರ ನೇರ ವಿದ್ಯುತ್ ಸಂಪರ್ಕವಿದೆ.
ಇಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಹೆಂಗಸರು ಮತ್ತು ಹೆಣ್ಣು ಮಕ್ಕಳಿದ್ದಾರೆ. ಆದರೆ ಯಾವುದೇ ಮನೆಯಲ್ಲಿ ಶೌಚಾಲಯಗಳಿಲ್ಲ. ಎಲ್ಲರೂ ಬಹಿರ್ದೆಸೆಗೆ ಕಾಡನ್ನೇ ಅವಲಂಬಿಸಿದ್ದಾರೆ. ತಲೆತಲಾಂತರಗಳಿಂದ ಕಾಡಲ್ಲೇ ಬೆಳೆದಿರುವ ಇವರನ್ನು ಅರಣ್ಯಗಳಿಂದ ಹೊರ ತಂದು ಜೀವನ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಇವರು ಅರಣ್ಯ ಬಿಟ್ಟು ಬರಲು ಒಪ್ಪುತ್ತಿಲ್ಲ. ಹಾಗಾಗಿ ಇವರಿಗೆ ಆಧುನಿಕ ಸೌಕರ್ಯಗಳೂ ಸಿಗುತ್ತಿಲ್ಲ. ಈ ಜನರ ಕನಿಷ್ಠ ಅವಶ್ಯಕತೆಗಳನ್ನಾದರೂ ಪೂರೈಸಿ ಅಂತ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ
ರೋಡ್ ಹಂಪ್‌ಗಳ ಬಗ್ಗೆ ಸದನದಲ್ಲಿ ವ್ಯಗ್ರರಾದ ಶಾಸಕ ರಮೇಶ್ ಕುಮಾರ್; ಬೇಜವಾಬ್ದಾರಿ ಅಧಿಕಾರಿಗಳ ಸಸ್ಪೆಂಡ್ ಮಾಡಿ ಅಂದರು
ಫೋರ್ಡ್, ಟೊಯೋಟಾ, ಟೆಸ್ಲಾ ಸೇರಿ 3 ಕೋಟಿಗೂ ಅಧಿಕ ವಾಹನಗಳ ತನಿಖೆಗೆ ಆದೇಶ
(Adivasis in the Nagarahole Abhayaranya live without electricity and toilets at kodagu)
Published On - 1:01 pm, Mon, 20 September 21