ನಾಗರಹೊಳೆ ಅಭಯಾರಣ್ಯದಲ್ಲೊಂದು ಶಿಕ್ಷಣ ಕ್ರಾಂತಿ, ಶಿಕ್ಷಣ ವಂಚಿತ ಹಾಡಿ ಮಕ್ಕಳಿಗೆ ಮನೆಯಂಗಳದಲ್ಲೇ ಪಾಠ
ಕಾಡಿನ ಮಕ್ಕಳಿಗೆ ಶಿಕ್ಷಣ ಅನ್ನೋದು ಬಹಳ ದೂರ. ಕಾಡಂಚಲ್ಲಿರೋ ಮಕ್ಕಳಿಗೆ ಅಲ್ಪ ಸ್ವಲ್ಪವಾದ್ರೂ ಶಿಕ್ಷಣ ಸಿಗ್ತಿತ್ತು. ಆದ್ರೆ ಕೊರೊನಾದಿಂದ ಅದೂ ಇಲ್ಲದಂತಾಗಿದೆ. ಆದ್ರೆ ಇದೀಗ ಹಾಡಿ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಗಿರಿಜನ ಅಭಿವೃದ್ಧಿ ಇಲಾಖೆ ಹೊಸ ಐಡಿಯಾ ಮಾಡಿದೆ.
ಕೊಡಗು: ಶಿಕ್ಷಣದಿಂದ ವಂಚಿತರಾಗಿರೋ ಕೊಡಗು-ಮೈಸೂರು ಗಡಿಯಲ್ಲಿರೋ ನಾಗರಹೊಳೆ ಅಭಯಾರಣ್ಯದಲ್ಲಿರೋ ಹಾಡಿ ಮಕ್ಕಳಿಗೆ ಪಾಠ ಹೇಳಿಕೊಡಲು ಗಿರಿಜನ ಅಭಿವೃದ್ಧಿ ಇಲಾಖೆ ಹೊಸ ಪ್ಲ್ಯಾನ್ ಮಾಡಿದೆ. ಐಟಿಡಿಪಿ ತಾಲೂಕು ಅಧಿಕಾರಿ ಗುರುಶಾಂತಪ್ಪ ನೇತೃತ್ವದಲ್ಲಿ ಹಾಡಿಯಲ್ಲಿ ಶಿಕ್ಷಣ ಕ್ರಾಂತಿಗೆ ಯೋಜನೆ ಹಾಕಲಾಗಿದೆ. ಕಾಡಿನೊಳಗೆ ಇರೋ ಹಾಡಿಗೆ ತೆರಳೋ ಶಿಕ್ಷಕರು ಹಾಡಿಯಲ್ಲಿರೋ ಮನೆ ಅಂಗಳದಲ್ಲೇ ಮಕ್ಕಳಿಗೆ ಪಾಠ ಹೇಳಿಕೊಡ್ತಾರೆ.
ಗಿರಿಜನ ಅಭಿವೃದ್ಧಿ ಇಲಾಖೆ ಈ ಯೋಜನೆಯಿಂದ ಕಾಡಿನೊಳಗೆ ಇರೋ ಹಾಡಿಯ ಮಕ್ಕಳಿಗೆ ತಮ್ಮದೇ ವಾತಾವರಣದಲ್ಲಿ ಕಲಿಯಲು ಸುಲಭವಾಗಲಿದೆ. ಪ್ರಕೃತಿಯ ಜೊತೆಗೆ ಆಟ-ಪಾಠದೊಂದಿಗೆ ಕಲಿಯೋ ಮಕ್ಕಳು ಶಿಕ್ಷಣದಿಂದ ವಂಚಿತರಾಗೋದು ತಪ್ಪುತ್ತೆ. ಹೀಗೆ ವಿರಾಜಪೇಟೆ ತಾಲೂಕಿನಾದ್ಯಂತ 300 ಕ್ಕೂ ಅಧಿಕ ಹಾಡಿ ಮಕ್ಕಳಿದ್ದು ಅವರಿಗೆಲ್ಲಾ ಶಿಕ್ಷಣ ಕಲಿಸಲಾಗ್ತಾ ಇದೆ. ವಿಪರ್ಯಾಸ ಅಂದ್ರೆ ಈ ಮಕ್ಕಳ ಬಳಿ ಆಧುನಿಕ ಮೊಬೈಲ್ಗಳಿಲ್ಲ. ಹಾಗಾಗಿ ಆನ್ಲೈನ್ ಕ್ಲಾಸ್ಗಳು ನಡೆಯುವುದೇ ಇಲ್ಲ. ಇದನ್ನು ಸರಿಪಡಿಸಲು ಗಿರಿಜನ ಕಲ್ಯಾಣ ಇಲಾಖೆ ಶಿಕ್ಷಕರನ್ನೇ ಹಾಡಿಗೆ ಕಳುಹಿಸಿ ಪಾಠ ಕಲಿಸುತ್ತಿದೆ.
ಕೊರೊನಾದಿಂದಾಗಿ ಶಾಲೆಯಿಂದ ದೂರ ಉಳಿದಿರೋ ಹಾಡಿ ಮಕ್ಕಳಿಗೆ ಆನ್ಲೈನ್ ಶಿಕ್ಷಣ ದೂರದ ಮಾತು. ಹೀಗಾಗಿ ಗಿರಿಜನ ಕಲ್ಯಾಣ ಇಲಾಖೆ ಕೈಗೊಂಡಿರೋ ಈ ಯೋಜನೆಗೆ ಎಲ್ಲೆಡೆಯಿಂದ ಪ್ರಶಂಸೆ ಕೇಳಿಬರ್ತಿದೆ.
ಇದನ್ನೂ ಓದಿ: ಬೋಟಿನಲ್ಲಿ ಪಾಠ ಶಾಲೆ; ವರ್ಷಕ್ಕೆ 6 ತಿಂಗಳು ಪ್ರವಾಹದಲ್ಲಿ ಮುಳುಗುವ ಪ್ರದೇಶದಲ್ಲಿ ಯುವಕರಿಂದ ‘ಶಿಕ್ಷಣದ ನಾವೆಗೆ’ ಚಾಲನೆ
ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ; ಪೊಲೀಸರ ಲಾಠಿಚಾರ್ಜ್ ವೇಳೆ ಇಬ್ಬರಿಗೆ ಗಾಯ