ಶಿವನ ಸನ್ನಿಧಿಯಲ್ಲಿರೋ ಮತ್ಸ್ಯಗಳೆಂದರೆ ಈ ಗ್ರಾಮದ ಜನರಿಗೆ ದೇವರ ಸಮಾನ

| Updated By: ಆಯೇಷಾ ಬಾನು

Updated on: Sep 07, 2021 | 9:02 AM

ಈ ಗರ್ವಾಲೆ ಗ್ರಾಮದಲ್ಲೇ ಕೋಟೆಬೆಟ್ಟವೂ ಇದೆ. ಈ ಬೆಟ್ಟವನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಬರುತ್ತಾರೆ. ಈ ಪ್ರವಾಸಿಗರು ಮೀನುಗಳನ್ನು ವೀಕ್ಷಿಸಲು ಆಗಮಿಸುತ್ತಾರೆ. ಕೆಲವ್ರು ಮೀನುಗಳಿಗೆ ತೊಂದರೆ ಕೊಡ್ತಿದ್ದಾರೆ. ಹೀಗಾಗಿ ಇಲ್ಲಿನ ಭಕ್ತರು ಮೀನುಗಳಿಗೆ ತೊಂದರೆ ಕೊಡ್ಬಾರದು ಅಂತಾ ಪ್ರವಾಸಿಗರಿಗೆ ಎಚ್ಚರಿಸ್ತಾರೆ.

ಶಿವನ ಸನ್ನಿಧಿಯಲ್ಲಿರೋ ಮತ್ಸ್ಯಗಳೆಂದರೆ ಈ ಗ್ರಾಮದ ಜನರಿಗೆ ದೇವರ ಸಮಾನ
ಶಿವನ ಸನ್ನಿಧಿಯಲ್ಲಿರೋ ಮತ್ಸ್ಯಗಳೆಂದರೆ ಈ ಗ್ರಾಮದ ಜನರಿಗೆ ದೇವರ ಸಮಾನ
Follow us on

ಕೊಡಗು: ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮದಲ್ಲಿರೋ ಮೀನುಕೊಲ್ಲಿ ನದಿಯಲ್ಲಿ ಇರುವ ಮೀನುಗಳನ್ನು ಇಲ್ಲಿಯ ಜನ ದೇವರಂತೆ ಭಾವಿಸುತ್ತಾರೆ. ಯಾಕಂದ್ರೆ ಈ ನದಿ ದಂಡೆಯಲ್ಲಿ ಶಿವನ ದೇವಾಲಯಕ್ಕೆ ಬರೋ ಭಕ್ತರ ಪಾಲಿಗೆ ಇವು ದೇವರ ಮೀನುಗಳು. ಹಾಗಾಗಿ ಇಲ್ಲಿನ ಮೀನುಗಳಿಗೆ ವಿಶೇಷ ಸ್ಥಾನವಿದೆ. ಯಾರೂ ಅವುಗಳನ್ನು ಹಿಡಿಯೋ ಸಾಹಸಕ್ಕೆ ಕೈಹಾಕಲ್ಲ. ಭದ್ರಕಾಳಿ ಶಕ್ತಿಯಿಂದ ಈ ಮೀನುಗಳು ಇಲ್ಲಿ ನೆಲೆಸಿವೆ. ಹೀಗಾಗಿ ಯಾರೂ ಈ ಮೀನುಗಳನ್ನು ಹಿಡಿಯಲ್ಲ ಅಂತಾರೆ ಗ್ರಾಮಸ್ಥರು.

ಈ ಗರ್ವಾಲೆ ಗ್ರಾಮದಲ್ಲೇ ಕೋಟೆಬೆಟ್ಟವೂ ಇದೆ. ಈ ಬೆಟ್ಟವನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಬರುತ್ತಾರೆ. ಈ ಪ್ರವಾಸಿಗರು ಮೀನುಗಳನ್ನು ವೀಕ್ಷಿಸಲು ಆಗಮಿಸುತ್ತಾರೆ. ಕೆಲವ್ರು ಮೀನುಗಳಿಗೆ ತೊಂದರೆ ಕೊಡ್ತಿದ್ದಾರೆ. ಹೀಗಾಗಿ ಇಲ್ಲಿನ ಭಕ್ತರು ಮೀನುಗಳಿಗೆ ತೊಂದರೆ ಕೊಡ್ಬಾರದು ಅಂತಾ ಪ್ರವಾಸಿಗರಿಗೆ ಎಚ್ಚರಿಸ್ತಾರೆ.

ಮತ್ತೊಂದು ವಿಶೇಷ ಅಂದ್ರೆ ಕಳೆದ ಎರಡು ವರ್ಷಗಳಿಂದ ಭಾರೀ ಪ್ರವಾಹ ಸಂಭವಿಸಿದ್ರೂ ಈ ಮೀನುಗಳು ಮಾತ್ರ ಇಲ್ಲೇ ಉಳಿದುಕೊಂಡಿವೆ. ಹೀಗಾಗಿ ದೇವರ ಮಹಿಮೆಯಿಂದ ಈ ಮೀನುಗಳು ಇಲ್ಲೇ ಉಳಿದುಕೊಂಡಿವೆ ಅನ್ನೋದು ಗ್ರಾಮಸ್ಥರ ನಂಬಿಕೆ.

ಗರ್ವಾಲೆ ಗ್ರಾಮದಲ್ಲಿರೋ ಮೀನುಕೊಲ್ಲಿ

ಗರ್ವಾಲೆ ಗ್ರಾಮದಲ್ಲಿರೋ ಮೀನುಕೊಲ್ಲಿ

ಇದನ್ನೂ ಓದಿ: 

Shamanthakopakyana: ತಿಳಿದೂತಿಳಿದು ಗಣೇಶ ಹಬ್ಬದ ದಿನ ಯಾಕೆ ಚಂದ್ರನನ್ನು ನೋಡುವಿರಿ? ಚಂದ್ರ ದೋಷ ಬಾಧಿಸುತ್ತದೆ

Gowri Tadige Habba 2021: ಗೌರಿ ತದಿಗೆ ಎಂದರೇನು? ಹೇಗೆ ಆಚರಿಸುತ್ತಾರೆ?