ಮಡಿಕೇರಿ: ಜನವರಿ 6, 7, 8ರಂದು ಹಾವೇರಿ (Haveri) ಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈಗಾಗಲೇ ಸಕಲ ಸಿದ್ಧತೆಗಳನ್ನು ಸಹ ಮಾಡಲಾಗುತ್ತಿದೆ. ಸದ್ಯ ಕನ್ನಡ ಸಾಹಿತ್ಯ ಸಮ್ಮೇಳನ ವಿಚಾರವಾಗಿ ಮಡಿಕೇರಿಯಲ್ಲಿ ಬಿಜೆಪಿ ಎಂಲ್ಸಿ ಹೆಚ್.ವಿಶ್ವನಾಥ್ (H Vishwananth) ಪ್ರತಿಕ್ರಿಯೆ ನೀಡಿದ್ದು, ಹಾವೇರಿ ಸಮ್ಮೇಳನದಲ್ಲಿ ಮುಸ್ಲಿಂ ಮತ್ತು ದಲಿತರ ಕಡೆಗಣಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಸಮ್ಮೇಳನದಲ್ಲಿ 85 ಸಾಧಕರಿಗೆ ಸನ್ಮಾನ ಮಾಡಲಾಗುತ್ತಿದ್ದು, ಇರದಲ್ಲಿ ಮುಸ್ಲಿಂ ಮತ್ತು ದಲಿತರನ್ನು ಕಡೆಗಣಿಸಲಾಗಿದೆ. ಇದರಲ್ಲೂ ರಾಜಕೀಯ ಮಾಡಲಾಗಿದೆ ಎಂದರು. ದಿಕ್ಕುದೆಸೆ ಇಲ್ಲದ ಡೋಂಗಿ ಸಾಹಿತ್ಯ ಸಮ್ಮೇಳನ ಧಿಕ್ಕರಿಸುತ್ತೇನೆ. ಸಮ್ಮೇಳನಕ್ಕೆ ಸರ್ಕಾರ 20 ಕೋಟಿ ರೂ. ಬಿಡುಗಡೆ ಮಾಡಿದೆ. ಹಣ ಕೊಟ್ಟು ಸಭೆ ಮಾಡದೆ ಮೌನವಾಗಿರುವುದು ಸರಿಯಲ್ಲ. ಆಡಳಿತ ಪಕ್ಷವನ್ನು ಮೆಚ್ಚಿಸುವಂತಹ ಕಾರ್ಯಕ್ರಮ ಆಗಬಾರದು. ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಾ ಕನ್ನಡಿಗರ ಸಮ್ಮೇಳನವಾಗಬೇಕು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿಎಂ, ಸಚಿವರ ಜವಾಬ್ದಾರಿ ಏನು ಎಂದು ಪ್ರಶ್ನಿಸಿದರು.
ಇನ್ನು 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆ ಜನವರಿ 6 ಮತ್ತು 7ರಂದು ಹಾವೇರಿಯ ಐದು ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಹಾವೇರಿ, ಗುಡ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಎಸ್ಜೆ.ಎಂ ಪದವಿ ಪೂರ್ವ ಕಾಲೇಜು, ಎಸ್ಎಂಎಸ್ ಪದವಿ ಪೂರ್ವ ಕಾಲೇಜು ಸೇರಿ ಒಟ್ಟು ಐದು ಕಾಲೇಜಿಗೆ ರಜೆ ನೀಡಲಾಗಿದೆ. ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸುವಂತಾಗಲಿ ಎನ್ನುವ ಉದ್ದೇಶದಿಂದ ರಜೆ ನೀಡಲಾಗಿದೆ.
ಇದನ್ನೂ ಓದಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 1 ದಿನದ ವೇತನ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಮಹೇಶ್ ಜೋಶಿ ಪತ್ರ
ಈ ಸಮ್ಮೇಳನಕ್ಕೆ ಬರುವ ವಾಹನ ನಿಲುಗಡೆಗಾಗಿ ಜಿಲ್ಲಾ ಸಂಚಾರಿ ಪೋಲಿಸ್ ವಿನೂತನ ಪ್ರಯೋಗ ಮಾಡಿದೆ. ಹಾವೇರಿ ಜಿಲ್ಲಾ ಸಂಚಾರಿ ಪೋಲಿಸರು ವಾಹನ ನಿಲುಗಡೆ ಮತ್ತು ಸಂಚಾರ ನಿಯಂತ್ರಣಕ್ಕೆ ಕ್ಯು ಆರ್ ಕೋಡ್ ಜೊತೆಗೆ ಸಂಚಾರದ ನೀಲಿನಕ್ಷೆ ಬಿಡುಗಡೆ ಮಾಡಿದ್ದಾರೆ. ಸಮ್ಮೇಳನಕ್ಕೆ ಬರುವವರಿಗಾಗಿ ಸುಲಲಿತ ಸಂಚಾರ ವ್ಯವಸ್ಥೆಗಾಗಿ ಜಿಲ್ಲಾ ಸಂಚಾರ ಪೋಲಿಸರು ಕ್ಯು ಆರ್ ಕೋಡ್ ಜೊತೆಗೆ ಸಂಚಾರದ ನೀಲಿನಕ್ಷೆ ಬಿಡುಗಡೆ ಮಾಡಿದ್ದು, ಸಂಚಾರ ಮಾರ್ಗಸೂಚಿಯನ್ನು ಗುಗಲ್ ಮ್ಯಾಪ್ನಲ್ಲಿ ಅತಿ ಸರಳವಾಗಿ ತಿಳಿಯಬಹುದಾಗಿದೆ. ಇದರಿಂದ ಜನರು ಟ್ರಾಫಿಕ್ ಜ್ಯಾಮ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: “86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರತಿನಿಧಿಗಳಾಗಲು ಆ್ಯಪ್ ಮೂಲಕ ನೊಂದಣಿ ಮಾಡ್ಕೊಳ್ಳಿ”
ದೇಶದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ , ಮುಖ್ಯಮಂತ್ರಿ, ಸಚಿವರು, ರಾಜ್ಯಪಾಲರು ಸೇರಿದಂತೆ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖ ಗಣ್ಯರಿಗೆ ಯಾಲಕ್ಕಿ ಹಾರವನ್ನ ಹಾಕಲಾಗುತ್ತದೆ. ಸಾಹಿತ್ಯ ಸಮ್ಮೇಳನದಲ್ಲಿ ಅಕ್ಷರ ಜಾತ್ರೆಯ ಜೊತೆಗೆ ಯಾಲಕ್ಕಿ ಕಂಪು ಸಹ ಪಸರಿಸಲಿದೆ ಅಂತಾರೆ ಮತ್ತೊಬ್ಬ ಯಾಲಕ್ಕಿ ಹಾರ ತಯಾರಕರಾದ ಜೈಹೀರಬ್ಬಾಸ್. ಒಟ್ನಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೇವಲ ದಿನಗಳು ಬಾಕಿ ಇವೆ. ಹೀಗಾಗಿ ಯಾಲಕ್ಕಿ ಕಂಪಿನ ನಗರಿಯಲ್ಲಿ ಸಾವಿರಾರು ಯಾಲಕ್ಕಿ ಹಾರಗಳು ರೆಡಿಯಾಗುತ್ತಿದ್ದು, ಸಾಹಿತ್ಯದ ಜೊತೆಗೆ ಯಾಲಕ್ಕಿ ಕಂಪಿನ ಹಾರವನ್ನ ನೋಡುವ ಹಾ ತೆಗೆದುಕೊಂಡು ಹೋಗುವ ಅವಕಾಶ ಬಂದಿದೆ. ಸಾಹಿತಿಗಳ, ಗಣ್ಯರ, ಹಾಗೂ ಸಾಹಿತ್ಯಾಭಿಮಾನಿಗಳ ಕೊರಳನ್ನ ಯಾಲಕ್ಕಿ ಹಾರ ಅಲಂಕರಿಸಲಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:17 pm, Wed, 4 January 23