AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು: ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ; ವಿವರ ಇಲ್ಲಿದೆ

Kodagu News: ಮಧ್ಯಾಹ್ನ 1.11ರ ಮಕರ ಲಗ್ನದಲ್ಲಿ ತೀರ್ಥೋದ್ಭವ ಆಗಲಿದೆ. ಈ ಬಾರಿ ಮಧ್ಯಾಹ್ನ ಕಾವೇರಿ ತೀರ್ಥೋದ್ಭವ ಆಗಲಿದ್ದು, ಭಾಗಮಂಡಲದಲ್ಲಿರುವ ಕೊಡೆ ಪಂಚಾಂಗ ಭಟ್ಟರಿಂದ‌ ಮೂಹೂರ್ತ ನಿಗಧಿಪಡಿಸಲಾಗಿದೆ.

ಕೊಡಗು: ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ; ವಿವರ ಇಲ್ಲಿದೆ
ತೀರ್ಥೋದ್ಭವದ ಸಾಂದರ್ಭಿಕ ಚಿತ್ರ
TV9 Web
| Updated By: ganapathi bhat|

Updated on:Sep 30, 2021 | 5:23 PM

Share

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ಇರುವ ಕಾವೇರಿ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತೀರ್ಥೋದ್ಭವವು ಈ ಬಾರಿ ಅಕ್ಟೋಬರ್ 17 ರಂದು ನಡೆಯಲಿದೆ. ಅಕ್ಟೋಬರ್ 17ರಂದು ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿಯಾಗಿದೆ. ಮಧ್ಯಾಹ್ನ 1.11ರ ಮಕರ ಲಗ್ನದಲ್ಲಿ ತೀರ್ಥೋದ್ಭವ ಆಗಲಿದೆ. ಈ ಬಾರಿ ಮಧ್ಯಾಹ್ನ ಕಾವೇರಿ ತೀರ್ಥೋದ್ಭವ ಆಗಲಿದ್ದು, ಭಾಗಮಂಡಲದಲ್ಲಿರುವ ಕೊಡೆ ಪಂಚಾಂಗ ಭಟ್ಟರಿಂದ‌ ಮೂಹೂರ್ತ ನಿಗದಿಪಡಿಸಲಾಗಿದೆ.

ಕೊಡಗಿನ ತಲಕಾವೇರಿಯಲ್ಲಿ ಅ. 17ರಂದು ಕಾವೇರಿ ತೀರ್ಥೋದ್ಭವವಾಗಲಿದೆ. ಇದಕ್ಕಾಗಿ ಈಗಾಗಲೇ ಕೊಡಗು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕರ್ನಾಟಕದ ಜೀವ ನದಿಯಾದ ಕಾವೇರಿ ತೀರ್ಥರೂಪಿಣಿಯಾಗಿ ಆವಿರ್ಭವಿಸಿ ದರ್ಶನ ನೀಡುವ ಪುಣ್ಯ ಘಳಿಗೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಆದರೆ ಈ ಕೊರೊನಾ ಮಹಾಮಾರಿ ಈ ಬಾರಿ ಕೂಡ ಕಾವೇರಿ ದರ್ಶನಕ್ಕೆ ವಿಘ್ನ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಯಾಕೆಂದರೆ ಕೊಡಗು ಜಿಲ್ಲಾಡಳಿತ ಇನ್ನೂ ಕೂಡ ಕಾವೇರಿ ಜಾತ್ರೆ ಸಂಬಂಧ ಗೊಂದಲದಲ್ಲೇ ಇದೆ.

ಜೀವನದಿ ಕಾವೇರಿಯ ಹುಟ್ಟೂರು ತಲಕಾವೇರಿಯಲ್ಲಿ ಇದೇ ಅಕ್ಟೋಬರ್​ 17ರಂದು ತೀರ್ಥೋದ್ಭವವಾಗಲಿದೆ. ಪ್ರತಿ ವರ್ಷ ಜೀವನದಿ ಕಾವೇರಿ ತೀರ್ಥ ರೂಪದಲ್ಲಿ ದರ್ಶನ ನೀಡುವ ಪುಣ್ಯ ಘಳಿಗೆಯನ್ನು ಕಣ್ತುಂಬಿಸಿಕೊಳ್ಳಲು ದೇಶದ ಮೂಲೆ ಮೂಲೆಯಿಂದ ಸಹಸ್ರಾರು ಭಕ್ತರು ಆಗಮಿಸ್ತಾರೆ. ಕಲ್ಯಾಣಿಯಲ್ಲಿ ಮಿಂದು ಪುನೀತರಾಗ್ತಾರೆ. ಇದುವರೆಗೂ ಕಾವೇರಿ ಭಕ್ತರ ಉತ್ಸಾಹಕ್ಕೆ ಯಾವುದೇ ಅಡ್ಡಿಯಾಗಿರಲಿಲ್ಲ. ಆದರೆ ಕೊರೊನಾದಿಂದಾಗಿ ಕಳೆದ ವರ್ಷ ಕಾವೇರಿ ಜಾತ್ರೆ ಸಂಪೂರ್ಣ ಕಳೆಗುಂದಿತ್ತು. ಹೆಚ್ಚಿನ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿರಲಿಲ್ಲ. ಹಾಗಾಗಿ ದೂರದೂರುಗಳಿಮದ ತೀರ್ಥೋದ್ಭವಕ್ಕೆ ಆಗಮಿಸಬೇಕಿದ್ದ ಭಕ್ತರಿಗೆ ನಿರಾಸೆಯಾಗಿತ್ತು. ಇದೀಗ ಮತ್ತೆ ತೀರ್ಥೋದ್ಭವ ಸಂದರ್ಭ ಬಂದಿದೆ. ಅ. 17ರಂದು ಸಂಜೆ ತೀರ್ಥೋದ್ಭವವಾಗಲಿದೆ. ಆದರೆ ಜಾತ್ರೆ ನಡೆಸುವ ಬಗ್ಗೆ ಇದುವರೆಗೆ ನಿರ್ಧಾರ ಕೈಗೊಳ್ಳಬೇಕಿದ್ದ ಜಿಲ್ಲಾಡಳಿತ ಇನ್ನೂ ಗೊಂದಲದಲ್ಲಿದೆ. ಈ ಸಂಬಂಧ ಸರ್ಕಾರದ ಮಾರ್ಗಸೂಚಿಗೆ ಎದುರು ನೋಡುತ್ತಿದೆ.

ಇದೇ ವೇಳೆ ಕಾವೇರಿ ತೀರ್ಥೋದ್ಭವ ಕಣ್ತುಂಬಿಸಿಕೊಳ್ಳಲು ಅವಕಾಶ ನೀಡಿ ಅಂತ ಕೊಡಗಿನ ಎಲ್ಲಾ ಮೂಲ ನಿವಾಸಿಗಳು ಆಗ್ರಹಪಡಿಸುತ್ತಿದ್ದಾರೆ. ಹೊರ ಜಿಲ್ಲೆ ಹೊರ ರಾಜ್ಯದಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದರೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯ ಭಕ್ತರಿಗೆ ಮಾತ್ರ ಅವಕಾಶ ನೀಡಿ ಅಂತ ಜಿಲ್ಲಾಡಳಿತವನ್ನು ಆಗ್ರಹಿಸಿ ಮನವಿ ಮಾಡಿದ್ದಾರೆ. ಈಗಾಗಲೇ ಭೂ ಕುಸಿತ ಮತ್ತು ಕೊರೊನಾ ದಿಂದಾಗಿ ಕಾವೇರಿ ಜಾತ್ರೆ ಕಳೆಗುಂದಿ ಹೋಗಿದೆ. ಆದರೆ, ಈ ಬಾರಿಯಾದ್ರೂ ಜಿಲ್ಲೆಗೆ ಸೀಮಿತವಾಗಿ ಜಾತ್ರೆ ನಡೆಸಲು ಅವಕಾಶ ನೀಡಿ ಎಂದು ವಿನಂತಿಸಿದ್ದಾರೆ.

ಇದನ್ನೂ ಓದಿ: Theerthodbhava: ಅ. 17ಕ್ಕೆ ತಲಕಾವೇರಿಯಲ್ಲಿ ತೀರ್ಥೋದ್ಭವ; ಈ ಬಾರಿಯೂ ಕಾವೇರಿ ದರ್ಶನಕ್ಕೆ ಕೊರೊನಾ ಕರಿ ನೆರಳು?

ಇದನ್ನೂ ಓದಿ: ಕೊಡಗು: ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಜಾಯ್​ ವಾಕ್! ಭಯಭೀತರಾದ ದಾರಿಹೋಕರು

Published On - 5:22 pm, Thu, 30 September 21