AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು: ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಜಾಯ್​ ವಾಕ್! ಭಯಭೀತರಾದ ದಾರಿಹೋಕರು

ಯಾವುದೇ ಅಳುಕಿಲ್ಲದೆ ಕೆಲ ಕಾಲ ಅಡ್ಡಾಡಿದ ಈ ಆನೆ ಬಳಿಕ ಏನೂ ಗಲಾಟೆ ಮಾಡದೆ ಕಾಡು ಸೇರಿಕೊಂಡಿದೆ. ಆದರೆ ಒಂಟಿ ಸಲಗದ ದರ್ಶನದಿಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದಾರು.

ಕೊಡಗು: ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಜಾಯ್​ ವಾಕ್! ಭಯಭೀತರಾದ ದಾರಿಹೋಕರು
ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ
TV9 Web
| Edited By: |

Updated on:Sep 06, 2021 | 12:38 PM

Share

ಕೊಡಗು: ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡಾನೆಗಳು ಕಾಡಿಗಿಂತ ನಾಡಿನಲ್ಲೇ ಹೆಚ್ಚು ತಿರುಗಾಡುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಸೋಮವಾರಪೇಟೆ ತಾಲ್ಲೂಕಿನ ಬಾಣಾವರ ಗ್ರಾಮದ ಮುಖ್ಯ ರಸ್ತೆಯಲ್ಲಿ ಒಂಟಿ ಸಲಗವೊಂದು ರಾಜಾರೋಷವಾಗಿ ಓಡಾಡುತ್ತಿದೆ. ಇದನ್ನು ನೋಡಿದ ಗ್ರಾಮಸ್ಥರು ಮತ್ತು ದಾರಿ ಹೋಕರು ಭಯಭೀತರಾಗಿದ್ದಾರೆ.

ಅರಣ್ಯದಂಚಿನಲ್ಲಿರುವ ಬಾಣಾವರ ಗ್ರಾಮದಲ್ಲಿ ಅರಣ್ಯ ಇಲಾಖೆಯ ಕಚೇರಿ ಇದೆ. ಈ ಕಚೇರಿಯ ಸುತ್ತ ಅಡ್ಡಾಡಿದ ಸಲಗ ಬಳಿಕ ರಸ್ತೆಗೆ ಬಂದು ಅರಣ್ಯ ದತ್ತ ಹೆಜ್ಜೆ ಹಾಕಿದೆ. ಯಾವುದೇ ಅಳುಕಿಲ್ಲದೆ ಕೆಲ ಕಾಲ ಅಡ್ಡಾಡಿದ ಈ ಆನೆ ಬಳಿಕ ಏನೂ ಗಲಾಟೆ ಮಾಡದೆ ಕಾಡು ಸೇರಿಕೊಂಡಿದೆ. ಆದರೆ ಒಂಟಿ ಸಲಗದ ದರ್ಶನದಿಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದಾರು.

ಮೈಸೂರು: ರಸ್ತೆಗಿಳಿದ ಕಾಡುಪ್ರಾಣಿಗಳು ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ಪೈಕಿ ಶ್ರೀ ಚಾಮರಾಜೇಂದ್ರ ಮೃಗಾಲಯವೂ ಒಂದು. ಅಲ್ಲಿಗೆ ತೆರಳಿದರೆ ಬಗೆಬಗೆಯ ಪ್ರಾಣಿ ಪಕ್ಷಿಗಳನ್ನು ನೋಡಿ ಆನಂದಿಸಬಹುದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇದೀಗ ಮೃಗಾಲಯದಾಚೆಗೂ ಕೆಲ ಪ್ರಾಣಿಗಳು ಕಾಣಿಸಿಕೊಳ್ಳುತ್ತಾ ಜನರಿಗೆ ಮುದ ನೀಡುತ್ತಿವೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ರಸ್ತೆಯಲ್ಲಿ ಸಾಗುವ ಪ್ರಯಾಣಿಕರಿಗೆ ಕಾಡೆಮ್ಮೆ, ಜಿಂಕೆ, ಕರಡಿ ಸೇರಿದಂತೆ ಅಪರೂಪದ ಪ್ರಾಣಿಗಳ ದರ್ಶನವಾಗಿದ್ದು, ಆ ಫೋಟೋ ಮತ್ತು ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ವೀರನಹೊಸಹಳ್ಳಿಯಿಂದ ನಾಗರಹೊಳೆ ಮೂಲಕ ಕೊಡಗಿಗೆ ಹೋಗುವ ರಸ್ತೆಯಲ್ಲಿ ಕಾಡೆಮ್ಮೆ, ಜಿಂಕೆ, ಕರಡಿಗಳು ಕಾಣಿಸಿಕೊಂಡಿವೆ. ಕೊಡಗು ಜಿಲ್ಲೆಯಲ್ಲಿ ವಾರಾಂತ್ಯದ ಕರ್ಪ್ಯೂ ಹಿನ್ನೆಲೆ ನಿನ್ನೆ, ಮೊನ್ನೆ (ಶನಿವಾರ, ಭಾನುವಾರ) ಈ ಮಾರ್ಗದಲ್ಲಿ ವಾಹನ ಸಂಚಾರ ಕಡಿಮೆಯಿದ್ದು, ಕಾಡು ಪ್ರಾಣಿಗಳು ಸೀದಾ ರಸ್ತೆಗಿಳಿದಿವೆ. ಹೀಗಾಗಿ ವಾರಾಂತ್ಯದಲ್ಲಿ ಈ ರಸ್ತೆಯಲ್ಲಿ ಸಂಚರಿಸಿದವರಿಗೆ ವನ್ಯ ಪ್ರಾಣಿಗಳ ದರ್ಶನ ಹತ್ತಿರದಿಂದ ಆಗಿದೆ.

ರಸ್ತೆಯ ಪಕ್ಕದಲ್ಲೇ ಮೇಯುತ್ತಿರುವ ಕಾಡೆಮ್ಮೆಗಳ ಹಿಂಡು, ರಸ್ತೆಯಂಚಲ್ಲೇ ನಿಂತಿರುವ ಜಿಂಕೆಗಳ ದಂಡು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದರಿ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಜತೆಗೆ, ಕರಡಿಯೊಂದು ಎದುರಾಗಿರುವ ವಿಡಿಯೋ ಕೂಡಾ ಇದ್ದು, ಸುಮಾರು ಎರಡರಿಂದ ಮೂರು ನಿಮಿಷಗಳ ಕಾಲ ವಾಹನ ಸಾಗುವ ರಸ್ತೆಯಲ್ಲೇ ನಡೆದುಕೊಂಡು ಹೋದ ಕರಡಿ, ವಾಹನದ ಶಬ್ದಕ್ಕೂ ಬೆಚ್ಚದೇ ತನ್ನ ಪಾಡಿಗೆ ತಾನು ಓಡಾಡುತ್ತಿರುವುದು ಅಚ್ಚರಿ ಮೂಡಿಸಿದೆ.

ಕಾರಿನ ಎದುರು ಭಾಗದಲ್ಲೇ ಕಂಡ ಕರಡಿ ಒಂದೆರೆಡು ಬಾರಿ ಹಿಂದಿರುಗಿ ನೋಡಿದೆಯಾದರೂ ವಾಹನವನ್ನು ಕಂಡು ಭಯಗೊಂಡಿಲ್ಲ. ಅಲ್ಲದೇ, ರಸ್ತೆಯನ್ನು ಬಿಟ್ಟು ಆಚೀಚೆ ಹೋಗದೇ ವಾಹನದ ಮುಂಭಾಗದಲ್ಲೇ ಕೊಂಚ ದೂರ ಸಾಗಿ ಒಂದು ಬಾರಿ ನಿಂತು ಸುತ್ತಲೂ ಕಣ್ಣು ಹಾಯಿಸಿದೆ. ಬಳಿಕ ಮೆಲ್ಲಗೆ ರಸ್ತೆ ಬಿಟ್ಟು ಪಕ್ಕಕ್ಕೆ ಸರಿದಿದೆ. ಈ ದೊಡ್ಡ ಕರಡಿ ಸತ್ತ ಸಾಗಿದ ಬಳಿಕ ಕಾರು ಮುಂದೆ ಚಲಿಸುತ್ತಿದ್ದಂತೆಯೇ ಮತ್ತೆರೆಡು ಕರಡಿಗಳ ದರ್ಶನವಾಗಿದೆ. ಕಾಡಿನಿಂದ ಓಡೋಡಿ ರಸ್ತೆಗೆ ಬಂದ ಎರಡು ಕರಡಿಗಳು ರಸ್ತೆಯಲ್ಲಿ ನಿಲ್ಲದೇ ಆಚೆಗೆ ದಾಟಿ ಕಾಡಿನ ಹಾದಿ ಹಿಡಿದಿವೆ. ಒಟ್ಟಾರೆಯಾಗಿ ವೀಕೆಂಡ್‌ ಸಂದರ್ಭದಲ್ಲಿ ಕಾಡಿನ ರಸ್ತೆಯಲ್ಲಿ ಸಂಚರಿಸಿದವರಿಗೆ ಕಾಡು ಪ್ರಾಣಿಗಳು ವಿಶೇಷ ದರ್ಶನ ನೀಡಿ ಪುಳಕಗೊಳಿಸಿವೆ.

ಇದನ್ನೂ ಓದಿ: ದಸರಾ ಜಂಬೂ ಸವಾರಿಗೆ ಆನೆಗಳ ಆಯ್ಕೆ; ವಿವಿಧ ಕ್ಯಾಂಪ್​ಗಳಿಂದ 14 ಆನೆಗಳ ಪಟ್ಟಿ ಮಾಡಿದ ಅರಣ್ಯಾಧಿಕಾರಿಗಳು

ಕಾಡುಪ್ರಾಣಿಗಳ ಭಯಕ್ಕೆ ಶಿಕ್ಷಣದಿಂದ ದೂರವಾಗುತ್ತಿರುವ ಮಕ್ಕಳು; ಪರ್ಯಾಯ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ

Published On - 12:26 pm, Mon, 6 September 21

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?