ಕೊಡಗು: ವ್ಯಾಘ್ರ ದಾಳಿಗೆ ಎರಡು ಹಸು ಬಲಿ, ಹುಲಿ ಸೆರೆಗೆ ಗ್ರಾಮಸ್ಥರ ಒತ್ತಾಯ
ಕೊಡಗು ಜಿಲ್ಲೆಯಲ್ಲಿ ಹುಲಿ ಹಾವಳಿ ಮುಂದುವರೆದಿದ್ದು ಹುಲಿ ದಾಳಿಗೆ ಎರಡು ಜಾನುವಾರು ಬಲಿಯಾಗಿವೆ. ಹುಲಿ ಸೆರೆಗೆ ಕ್ರಮವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೊಡಗು: ಬೆಂಗಳೂರು, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ರಾಜ್ಯದ ಕೆಲ ಕಡೆ ಚಿರತೆ, ಹುಲಿ ಹಾವಳಿ ಹೆಚ್ಚಾಗಿದೆ. ಹುಲಿ, ಚಿರತೆ, ಆನೆ ಹಾವಳಿಗೆ ಜನ ಒಂಟಿಗಾಗಿ ಓಡಾಡಲು, ಸಂಜೆ ವೇಳೆ ರಸ್ತೆಗೆ ಇಳಿಯಲು ಭಯ ಪಡುತ್ತಿದ್ದಾರೆ. ಇದರ ನಡುವೆ ಕೊಡಗು ಜಿಲ್ಲೆಯಲ್ಲಿ ಹುಲಿ ಹಾವಳಿ ಮುಂದುವರೆದಿದ್ದು ಹುಲಿ ದಾಳಿಗೆ(Tiger Attack) ಎರಡು ಜಾನುವಾರು ಬಲಿಯಾಗಿವೆ.
ಪೊನ್ನಂಪೇಟೆ ತಾಲೂಕಿನ ಹೈಸೊಡ್ಲೂರು ಗ್ರಾಮದಲ್ಲಿ ಕುಶಾಲಪ್ಪ ಎಂಬುವವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ. ಹಾಗೂ ಕುಂದ ಈಚೂರು ಗ್ರಾಮದಲ್ಲೂ ದರ್ಶನ್ ಎಂಬುವವರಿಗೆ ಸೇರಿದ ಹಸುವನ್ನು ಹುಲಿ ಸಾಯಿಸಿದ್ದು ಹುಲಿ ಸೆರೆಗೆ ಕ್ರಮವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಬಳಿ ಚಿರತೆ ದಾಳಿಗೆ 13 ಕುರಿಗಳು ಬಲಿ; ಚಿರತೆ ಸೆರೆಗೆ ಗ್ರಾಮಸ್ಥರ ಆಗ್ರಹ
25 ದಿನಗಳಿಂದ ದೊಡ್ಡಬಳ್ಳಾಪುರದಲ್ಲಿ ಹೆಚ್ಚಿದ ಚಿರತೆ ಹಾವಳಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆ ಆಗಮಿಸಿದ ಚಿರತೆ ರೈತ ನಾರಾಯಣಪ್ಪ ಎಂಬುವವರ ಮನೆ ಮುಂದೆ ಕಟ್ಟಿದ್ದ ಮೂರು ಮೇಕೆಗಳನ್ನ ಕೊಂದು ರಕ್ತ ಕುಡಿದಿದ್ದು ನಂತರ ಮತ್ತೊಂದು ಮೇಕೆಯನ್ನ ಹೊತ್ತುಕೊಂಡು ಹೋಗಿದೆ. ಇನ್ನೂ ಬೆಳಗ್ಗೆ ಎಂದಿನಂತೆ ಜಾನುವಾರುಗಳ ಬಳಿಗೆ ಬಂದ ರೈತನಿಗೆ ಮೇಕೆಗಳು ಸತ್ತು ಬಿದ್ದಿರು ದೃಶ್ಯ ಕಂಡು ಬಂದಿದ್ದು ಬೆಚ್ಚಿ ಬಿದ್ದಿದ್ದಾರೆ. ಕಳೆದ 15 ದಿನಗಳಿಂದ ಗ್ರಾಮದ ಹೊರ ವಲಯದ ಕೆರೆ ಸೇರಿದಂತೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೂರು ಚಿರತೆಗಳು ಇದೀಗ ಗ್ರಾಮಕ್ಕೆ ನುಗ್ಗಿ ಜಾನುವಾರುಗಳ ಮೇಲೆ ದಾಳಿ ಮಾಡಿದೆ ಅಂತ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ದೊಡ್ಡಬಳ್ಳಾಪುರ ನಗರದಿಂದ ಐದು ಕಿಲೋ ಮೀಟರ್ ದೂರದಲ್ಲಿರುವ ಗ್ರಾಮದಲ್ಲಿ ಚಿರತೆಗಳು ಕಾಣಿಸಿಕೊಂಡು ದಾಳಿ ನಡೆಸಿರುವುದು ಗ್ರಾನಮಸ್ಥರು ಹಾಗೂ ನಗರ ಪ್ರದೇಶದ ಜನರಲ್ಲಿ ಆತಂಕ ಮೂಡಿಸಿದೆ. ಜತೆಗೆ ಕಳೆದ ಹದಿನೈದು ದಿನಗಳಿಂದ ಅಲ್ಲಲ್ಲಿ ಚಿರತೆಗಳು ಕಾಣಿಸುತ್ತಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ರು ಕೇವಲ ಬೋನ್ ಯಿಟ್ಟು ಅರಣ್ಯ ಇಲಾಖೆ ಸಿಬ್ಬಂದಿ ಸುಮ್ಮನಾಗಿದ್ದಾರಂತೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಮಕ್ಕಳಿಗೆ ಶಾಲೆಗಳು ರಜೆ ಇರುತ್ತೆ ಜನರು ಗ್ರಾಮದ ಮರಗಿಡಗಳ ಕೆಳಗಡೆ ಇರ್ತಾರೆ ಈ ವೇಳೆ ಚಿರತೆಗಳು ದಾಳಿ ಮಾಡಿದ್ರು ಯಾರು ಹೊಣೆ ಅಂತ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಇನ್ನೂ ಗ್ರಾಮದ ಮಹಿಳೆಯರು ತೋಟಗಳಿಗೆ ಜಾನುವಾರು ಮೇಯಿಸಲು ಹೋಗುವುದಕ್ಕೂ ಅಂಜುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಐದಿನೈದು ದಿನಗಳಿಂದ ಮೂರು ಚಿರತೆಗಳು ಕಾಣಿಸಿಕೊಳ್ಳುತ್ತಿದ್ರು ಒಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯಲು ಸಾಧ್ಯವಾಗಿಲ್ಲ ಅಂದ್ರೆ ಹೇಗೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:31 am, Sun, 26 February 23