Kushalnagar News: ಬಾಡಿದ ಸುವಿಶಾಲ ತಾವರೆ ಕೆರೆ: ಹೂಳೆತ್ತಲು ಮುಂದಾದ ಸ್ಥಳೀಯಾಡಳಿತ

3.8 ಎಕರೆ ವಿಸ್ತಾರದ ಈ ಕೆರೆ ಈಗ ಅರ್ಧಕ್ಕರ್ದ ಮರೆಯಾಗಿದೆ! ಭೂಗಳ್ಳರು ಮಣ್ಣು ಹಾಕಿ ಲೇ ಔಟ್​ಗಳನ್ನ ಮಾಡಿದ್ದಾರೆ. ಇನ್ನು ಹೀಗೆಯೇ ಬಿಟ್ಟರೆ ಇರುವ ಕೆರೆಯನ್ನೂ ಸಹ ನುಂಗಿಬಿಡುವ ಆತಂಕವಿತ್ತು. ಹಾಗಾಗಿ ಇಲ್ಲಿನ ಸ್ಥಳೀಯರು ಜಿಲ್ಲಾಡಳದ ಮೇಲೆ ನಿರಂತರ ಒತ್ತಡ ಹಾಕಿ ಕೆರೆಗೆ ಕಾಯಕಲ್ಪ ಮಾಡಿಸಲು ತೀರ್ಮಾನಿಸಿದ್ದಾರೆ.

Kushalnagar News: ಬಾಡಿದ ಸುವಿಶಾಲ ತಾವರೆ ಕೆರೆ: ಹೂಳೆತ್ತಲು ಮುಂದಾದ ಸ್ಥಳೀಯಾಡಳಿತ
ಬಾಡಿದ ಸುವಿಶಾಲ ತಾವರೆ ಕೆರೆ
Follow us
Gopal AS
| Updated By: ಸಾಧು ಶ್ರೀನಾಥ್​

Updated on: May 21, 2024 | 9:41 AM

ಸಾಮಾನ್ಯವಾಗಿ ಕೆರೆಗಳು ಆಯಾ ಊರಿನ ಜೀವನಾಡಿಯಾಗಿರುತ್ತವೆ. ಆದ್ದರಿಂದಲೇ ಪುರಾತನ ಕಾಲದಿಂದಲೂ ಕೆರೆಗಳನ್ನ ಉಳಿಸಿ ಬೆಳೆಸುತ್ತಿದ್ದರು. ಆದ್ರೆ ಆಧುನಿಕ ಜಗತ್ತಿನಲ್ಲಿ ಮನುಷ್ಯನ ದುರಾಸೆಯಿಂದ ಕೆರೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಕೊಡಗಿನ (Kodagu) ಕುಶಾಲನಗರದ ಏಕೈಕ ಬೃಹತ್ ಕೆರೆ ಕೂಡ ಅವಸಾನದ ಅಂಚಿನಲ್ಲಿದೆ. ಆದ್ರೆ ಇದೀಗ ಸ್ಥಳೀಯಾಡಳಿತ ಈ ಕೆರೆಯನ್ನ ಅಭಿವೃದ್ಧಿ ಪಡಿಸಲು ಮುಂದಾಗಿದೆ. ನೋಡಲು ವಿಶಾಲವಾದ ಸಮೃದ್ಧ ಕೆರೆ.. ಬರಗಾಲದಲ್ಲಿಯೂ ಈ ಕೆರೆ ಒಡಲಿನಲ್ಲಿ ನೀರು ಸಂಗ್ರಹಿಸಿಟ್ಟುಕೊಂಡಿತ್ತು. ಇದು ಕೊಡಗು ಜಿಲ್ಲೆ ಕುಶಾಲನಗರ (Kushalnagar) ಪಟ್ಟಣದ ಏಕೈಕ ಬೃಹತ್ ಕೆರೆ ತಾವರೆ ಕೆರೆ (Tavarekere desiltation).

ಒಂದು ಕಾಲದಲ್ಲಿ ಇದು ತನ್ನ ಹೆಸರಿಗೆ ತಕ್ಕಂತೆ ಒಡಲು ತುಂಬಾ ಬರೇ ತಾವರೆ ಹೂಗಳನ್ನೇ ಹೊಂದಿತ್ತು. ಸುಮಾರು 3.8 ಎಕರೆ ವಿಸ್ತಾರವಿರೋ ಈ ಕೆರೆ ಇಡೀ ನಾಡಿಗೆ ಜೀವನಾಡಿಯಾಗಿತ್ತು. ಕುಡಿಯಲು ಮಾತ್ರವಲ್ಲದೆ ಕೃಷಿ ಹಾಗೂ ಜನ-ಜಾನುವಾರುಗಳು ಕೂಡ ಈ ಕೆರೆಯ ನೀರನ್ನೇ ಬಳಸುತ್ತಿದ್ದವು. ಆದ್ರೆ ಯಾವಾಗ ಅಭಿವೃದ್ಧಿ ಎಂಬ ಪೆಂಡಭೂತ ಇಲ್ಲಿಗೆ ವಕ್ಕರಿಸಿತೋ ಈ ಕೆರೆಯು ಅವಸಾನದ ಅಂಚಿಗೆ ಬಂದು ತಲುಪಿದೆ.

3.8 ಎಕರೆ ವಿಸ್ತಾರದ ಈ ಕೆರೆ ಈಗ ಅರ್ಧಕ್ಕರ್ದ ಮರೆಯಾಗಿದೆ! ಭೂಗಳ್ಳರು ಮಣ್ಣು ಹಾಕಿ ಲೇ ಔಟ್​ಗಳನ್ನ ಮಾಡಿದ್ದಾರೆ. ಇನ್ನು ಹೀಗೆಯೇ ಬಿಟ್ಟರೆ ಇರುವ ಕೆರೆಯನ್ನೂ ಸಹ ನುಂಗಿಬಿಡುವ ಆತಂಕವಿತ್ತು. ಹಾಗಾಗಿ ಇಲ್ಲಿನ ಸ್ಥಳೀಯರು ಜಿಲ್ಲಾಡಳದ ಮೇಲೆ ನಿರಂತರ ಒತ್ತಡ ಹಾಕಿ ಕೆರೆಗೆ ಕಾಯಕಲ್ಪ ಮಾಡಿಸಲು ತೀರ್ಮಾನಿಸಿದ್ದಾರೆ. ಸ್ಥಳೀಯ ಪಟ್ಟಣ ಪಂಚಾಯಿತಿ ಹಾಗೂ ಜಿಲ್ಲಾಡಳಿತವು ಕೆರೆಯ ಹೂಳೆತ್ತಲು ಕಾರ್ಯ ಯೋಜನೆ ರೂಪಿಸಿದೆ.

Also Read: 70 ವರ್ಷಗಳಲ್ಲಿ ಮೊದಲ ಬಾರಿಗೆ ಬತ್ತಿ ಹೋಗಿದ್ದ ಕಾವೇರಿ ನದಿ ಮತ್ತೆ ಗತವೈಭವಕ್ಕೆ ಮರಳುತ್ತಿದೆ! ಇಲ್ಲಿದೆ ಚಿತ್ರಣ

ಇನ್ನು ಈ ಕೆರೆಯ ಬರೇ ಹೂಳೆತ್ತಿದರೆ ಸಾಲದು ಇದರ ಗತವೈಭವ ಮರಳಬೇಕಾದ್ರೆ ಕೆರೆಯ ಒತ್ತುವರಿಯನ್ನೂ ತೆರವು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳ ಕೊಳಚೆ ನೀರು ಕೂಡ ನೇರವಾಗಿ ಕೆರೆ ಒಡಲು ಸೇರುತ್ತಿದೆ. ಹಾಗಾಗಿ ಜಲಚರಗಳೂ ಇಲ್ಲಿಲ್ಲ. ಈ ಸಮಸ್ಯೆಗಳ ಸಮ್ಮುಖದಲ್ಲಿ ಕೆರೆಯ ಹೂಳೆತ್ತುವುದರ ಜೊತೆಗೆ ಕೊಳಚೆ ನೀರು ಸೇರದಂತೆ ತಡೆಯುವುದು, ಒತ್ತುವರಿದಾರರನ್ನು ತೆರವುಗೊಳಿಸುವುದು ಮಾಡುವ ಅಗತ್ಯ ಇದೆ. ಒಟ್ಟಾರೆ ತಡವಾಗಿಯಾದ್ರೂ ತಾವರೆಕೆರೆಯಲ್ಲಿ ಹೂಳೆತ್ತಿ ಸ್ವಚ್ಛಗೊಳಿಸಲು ಸ್ಥಳೀಯಾಡಳಿತ ಮುಂದಾಗಿರುವುದು ಪ್ರಶಂಸನೀಯ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್