ಮಡಿಕೇರಿಯಲ್ಲಿ ಲಘು ಭೂ ಕುಸಿತ; ಸಂತ್ರಸ್ತ ಕುಟುಂಬವನ್ನು ಸ್ಥಳಾಂತರಿಸುವಂತೆ ಸೂಚಿಸಿದ ಬಿಜೆಪಿ ಶಾಸಕ ಬೋಪಯ್ಯ

ಕೊಡಗು: ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಸಂಭವಿಸಿದ ಲಘು ಭೂ ಕುಸಿತ ಪ್ರದೇಶಕ್ಕೆ‌ ಶಾಸಕ ಕೆಜಿ ಬೋಪಯ್ಯ ಭೇಟಿ ನೀಡಿದ್ದು, ಸಂತ್ರಸ್ತ ಕುಟುಂಬವನ್ನು ತ್ವರಿತವಾಗಿ ಸ್ಥಳಾಂತರಿಸುವಂತೆ ಬೋಪಯ್ಯ ಸೂಚನೆ ನೀಡಿದ್ದಾರೆ.

ಮಡಿಕೇರಿಯಲ್ಲಿ ಲಘು ಭೂ ಕುಸಿತ;  ಸಂತ್ರಸ್ತ ಕುಟುಂಬವನ್ನು ಸ್ಥಳಾಂತರಿಸುವಂತೆ ಸೂಚಿಸಿದ ಬಿಜೆಪಿ ಶಾಸಕ ಬೋಪಯ್ಯ
ಶಾಸಕ ಕೆಜಿ ಬೋಪಯ್ಯ
Follow us
TV9 Web
| Updated By: ವಿವೇಕ ಬಿರಾದಾರ

Updated on: Jul 02, 2022 | 4:08 PM

ಕೊಡಗು: ಜಿಲ್ಲೆಯ ಮಡಿಕೇರಿ (Madikeri) ತಾಲೂಕಿನ ಚೆಂಬು ಗ್ರಾಮದಲ್ಲಿ ಸಂಭವಿಸಿದ ಲಘು ಭೂಕುಸಿತ (Landslide) ಪ್ರದೇಶಕ್ಕೆ‌ ಶಾಸಕ ಕೆಜಿ ಬೋಪಯ್ಯ (KG Bopaiah) ಭೇಟಿ ನೀಡಿದ್ದು, ಸಂತ್ರಸ್ತ ಕುಟುಂಬವನ್ನು ತ್ವರಿತವಾಗಿ ಸ್ಥಳಾಂತರಿಸುವಂತೆ ಬೋಪಯ್ಯ ಸೂಚನೆ ನೀಡಿದ್ದಾರೆ. ಚೆಂಬು ಗ್ರಾಮದ ಗಿರಿದರ್ ಮನೆ ಮೇಲೆ ಮಣ್ಣು ಕುಸಿತಗೊಂಡಿದೆ. ಚೆಂಬುವಿನಲ್ಲಿ ಭೂ ಕಂಪನ ಮಾಪಕ‌ (Seismometer) ಅಳವಡಿಸಲಾಗಿದ್ದು, ಯಂತ್ರ ತೋರಿಸಿರುವುದಕ್ಕಿಂತಲೂ ಕಂಪನ ಜಾಸ್ತಿ ಆಗಿರುವಂತಿದೆ. ಇದರಿಂದ ಧೈರ್ಯಗೆಡದೆ, ಬಹಳ‌ಮುನ್ನೆಚ್ಚರಿಕೆಯಿಂದ ಇರುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ.

ಇದನ್ನು ಓದಿ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ! ವಾಹನ ಸವಾರರ ಪರದಾಟ

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಭಾರಿ ಮಳೆಗೆ ಮಡಿಕೇರಿ ತಾಲೂಕಿನ ಮದೆನಾಡು-ಜೋಡುಪಾಲ ನಡುವೆ ರಸ್ತೆಗೆ ಮಣ್ಣು ಮತ್ತು ಮರ ಕುಸಿದಿದೆ. ಚರಂಡಿಗೆ ಮಣ್ಣು ಬಿದ್ದಿದ್ದರಿಂದ ಅಪಾರ ಪ್ರಮಾಣ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇನ್ನು ಧಾರಾಕಾರ ಮಳೆ ಜೊತೆ ದಟ್ಟ ಮಂಜು ಆವರಿಸಿದೆ. ಹೀಗಾಗಿ ರಸ್ತೆ ಕಾಣುತ್ತಿಲ್ಲ. ಇದರಿಂದ ದಾರಿಯಲ್ಲಿ ಚಲಿಸಲು ವಾಹನ ಸವಾರರು ಪರದಾಡುತ್ತಿದ್ದಾರೆ.

ಪ್ರವಾಹ ಭೀತಿ: ಸದ್ಯ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿರುವೆ. ಕಾವೇರಿ ನದಿ, ಲಕ್ಷ್ಮಣತೀರ್ಥ, ಪಯಸ್ವಿನಿ ಹಾಗೂ ಅಟ್ಟಿಹೊಳೆ, ಕೀರೆಹೊಳೆ, ತ್ರಿವೇಣಿ ಸಂಗಮ, ಹಾರಂಗಿ ಡ್ಯಾಂ ಭರ್ತಿಯಾದ ಹಿನ್ನೆಲೆ ನದಿ ಪಾತ್ರದ ಜನರು ಎದುರಾಗುವ ಭೀತಿಯಲ್ಲಿದ್ದಾರೆ.

ಇದನ್ನು ಓದಿ: ಸಿಂಗಾಪುರ ಗ್ರಾಮದ ಸರ್ಕಾರಿ ಶಿಕ್ಷಕನ ಕಾಮ ಪುರಾಣ; ಎರಡು ಕಡೆ ಪ್ರತ್ಯೇಕ ಪ್ರಕರಣ ದಾಖಲು

ಇಂದಿನಿಂದ ನಾಲ್ಕು ದಿನ ಭಾರೀ ಮಳೆ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಯಲ್ಲಿ 2 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮಂಗಳೂರಿನ ರಸ್ತೆಗಳೆಲ್ಲ ಜಲಾವೃತವಾಗಿ ಮನೆಯೊಳಗೂ ನೀರು ನುಗ್ಗಿದೆ. ಇತ್ತ ಮಲೆನಾಡಿನಲ್ಲೂ ಮಳೆ ಹೆಚ್ಚಾಗಿರುವುದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೆ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ 4 ದಿನ ಕರ್ನಾಟಕದಲ್ಲಿ ಭಾರೀ ಮಳೆ ಸುರಿಯಲಿದೆ. ಉತ್ತರ ಕರ್ನಾಟಕದಲ್ಲಿ ಇಂದಿನಿಂದ ಹಳದಿ ಅಲರ್ಟ್​ ಘೋಷಿಸಲಾಗಿದೆ. ಇಂದಿನಿಂದ ಜುಲೈ 5ರವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.