ಸಿಂಗಾಪುರ ಗ್ರಾಮದ ಸರ್ಕಾರಿ ಶಿಕ್ಷಕನ ಕಾಮ ಪುರಾಣ; ಎರಡು ಕಡೆ ಪ್ರತ್ಯೇಕ ಪ್ರಕರಣ ದಾಖಲು
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಿಂಗಾಪುರ ಗ್ರಾಮದ ಸರ್ಕಾರಿ ಶಿಕ್ಷಕ ಕಾಮುಕ ಅಜರುದ್ದಿನ್ ಕಾಮ ಪುರಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗಾಪುರ ಗ್ರಾಮಸ್ಥರು ಶಿಕ್ಷಕನ ಅಸಲಿಯತ್ತನ್ನು ತಿಳಿಸಿದ್ದು, ಕೆಲ ದಿನಗಳ ಕಾಲ ಸಿಂಗಾಪುರ ಗ್ರಾಮದಲ್ಲಿ ವಾಸವಿದ್ದ ಕಾಮುಕ ಅಜರುದ್ದಿನ್ ಪತ್ನಿಗೆ ಪ್ರತಿನಿತ್ಯ ಕಿರುಕುಳ ಕೊಡುತ್ತಿದ್ದನು. ಪತಿಯ ಕಿರುಕುಳ ತಾಳಲಾರದೆ ಪತ್ನಿ ಮನೆ ಬಿಟ್ಟು ಹೋಗಿದ್ದಳು ಎಂದು ತಿಳಿಸಿದ್ದಾರೆ.
ರಾಯಚೂರು: ಜಿಲ್ಲೆಯ ಸಿಂಧನೂರು (Sindhanur) ತಾಲ್ಲೂಕಿನ ಸಿಂಗಾಪುರ ಗ್ರಾಮದ ಸರ್ಕಾರಿ ಶಿಕ್ಷಕ (Government Teacher) ಕಾಮುಕ ಅಜರುದ್ದಿನ್ ಕಾಮ ಪುರಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗಾಪುರ ಗ್ರಾಮಸ್ಥರು ಶಿಕ್ಷಕನ ಅಸಲಿಯತ್ತನ್ನು ತಿಳಿಸಿದ್ದು, ಕೆಲ ದಿನಗಳ ಕಾಲ ಸಿಂಗಾಪುರ (Singapur) ಗ್ರಾಮದಲ್ಲಿ ವಾಸವಿದ್ದ ಕಾಮುಕ ಅಜರುದ್ದಿನ್ ಪತ್ನಿಗೆ ಪ್ರತಿನಿತ್ಯ ಕಿರುಕುಳ ಕೊಡುತ್ತಿದ್ದನು. ಪತಿಯ ಕಿರುಕುಳ ತಾಳಲಾರದೆ ಪತ್ನಿ ಮನೆ ಬಿಟ್ಟು ಹೋಗಿದ್ದಳು ಎಂದು ತಿಳಿಸಿದ್ದಾರೆ. ನಂತರ ಕೊಪ್ಪಳದ (Koppal) ಕಾರಟಯಲ್ಲಿ ವಾಸಿಸಲು ಪ್ರಾರಂಭಸಿದ್ದು, ನೊಂದ ಮಹಿಳೆ ಕೊಪ್ಪಳದ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನು ಓದಿ: ಕೊಪ್ಪಳ ಜಿಲ್ಲೆಯಲ್ಲೊಬ್ಬ ಕಾಮುಕ ಶಿಕ್ಷಕ: ಮಕ್ಕಳ ಗುಪ್ತಾಂಗವನ್ನ ಅಳತೆ ಮಾಡೋ ಕಾಮುಕ ಶಿಕ್ಷಕನ ವಿಡಿಯೋ ವೈರಲ್
ಸಿಂಗಾಪುರ ಗ್ರಾಮದ ಕೆಲ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿರೊ ಆರೋಪದಡಿ ಸಿಂಧನೂರು ಗ್ರಾಮೀಣ ಶಿಕ್ಷಣ ಇಲಾಖೆ ಪೊಲೀಸರಿಗೆ ದೂರು ನೀಡಲಿದೆ. ಈ ಬಗ್ಗೆ ಟಿವಿ9 ಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಂಯೋಜಕ ಅಮರೇಶ್ ಈಗಾಗಲೇ ಇಲಾಖಾ ತನಿಖೆ ನಡೆಯುತ್ತಿದೆ. ಆರೋಪಿ ಅಜರುದ್ದಿನ್ ನನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಪೊಲೀಸರಿಗೆ ವರದಿ ನೀಡುತ್ತೇವೆ. ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಸಲ್ಲಿಸಲಾಗುವುದು ಎಂದ ತಿಳಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಆರೋಪಿ ಮಹಿಳೆಯನ್ನು ಒತ್ತಾಯ ಪೂರ್ವಕವಾಗಿ ಶಿಕ್ಷಕ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಲೈಂಗಿಕವಾಗಿ ಬಳಸಿಕೊಂಡ ಕೆಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ. ಇದರಿಂದ ಮಹಿಳೆ ನೊಂದಿದ್ದಾರೆ, ಅವರೇ ಬಂದು ದೂರು ಕೊಟ್ಟಿದ್ದಾನೆ. ಅಜರುದ್ದೀನ್ ವಿರುದ್ಧ 376ರಡಿ ಕೇಸ್ ದಾಖಲಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಲಾಗುವುದ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಮಾಜಿ ಸಚಿವ ಶಿವರಾಜ್ ತಂಗಡಗಿ ಇಂತಹ ಕಾಮುಕ ಶಿಕ್ಷಕನನ್ನ ಒದ್ದು ಒಳಗಡೆ ಹಾಕಬೇಕು. ಸರ್ಕಾರ ಕೂಡಲೇ ಇಂಥವರನ್ನ ಒದ್ದು ಒಳಗೆ ಹಾಕಲಿ. ಶಿಕ್ಷಕನಿಗೆ ಗಲ್ಲು ಶಿಕ್ಷೆಯಾಗುವಂತಹ ಕೇಸ್ ಹಾಕಬೇಕು. ಸರ್ಕಾರ ಇಂತಹ ಪ್ರಕರಣಗಳಿಂದ ಎಚ್ಚೆತ್ತುಕೊಳ್ಳಬೇಕು. ಇಂತವರಿಂದ ಸಣ್ಣ ಮಕ್ಕಳನ್ನ ಶಾಲೆಗೆ ಕಳಿಸಕೋಕೆ ಪಾಲಕರಿಗೆ ಆತಂಕ ಶುರುವಾಗಿದೆ. ಒಳ್ಳೆಯ ಶಿಕ್ಷಕರ ಮೇಲೆ ಅನುಮಾನ ಪಡುವಂತಾಗಿದೆ. ಶಿಕ್ಷಕನನ್ನು ಪರ್ಮನೆಂಟ್ ಆಗಿಒಳಗೆ ಹಾಕಬೇಕು. ಇಂತಹ ಶಿಕ್ಷಕ ಯಾವತ್ತೂ ಹೊರಗೆ ಬರಬಾರದು. ವರದಿ, ಅದು ಏನೂ ಬೇಕಾಗಿಲ್ಲ,ಯಾರ ಕಂಪ್ಲೇಟ್ ಕೊಡಲಿ ಬಿಡಲಿ ಕೂಡಲೇ ಆತನನ್ನು ಅರೆಸ್ಟ್ ಮಾಡಬೇಕು ಎಂದು ಕೊಪ್ಪಳದಲ್ಲಿ ಹೇಳಿದ್ದಾರೆ.
ಇದರಲ್ಲಿ ಜಾತಿ ಕೋಮ ನನಗೆ ಬೇಕಾಗಿಲ್ಲ.ಕಾರಟಗಿ ಯಲ್ಲಿ ಇಂತಹ ಘಟನೆ ನಡೆದಿರೋದು ನನಗೆ ಬೇಜಾರಾಗಿದೆ. ನನ್ನ ಕ್ಷೇತ್ರದಲ್ಲಿ ಇಂತಹ ದುಷ್ಟ ಶಿಕ್ಷಕ ಇದ್ದ ಅನ್ನೋದು ನನಗೆ ಬೇಜಾರಾಯ್ತು, ಸಿಟ್ಟು ಬಂತು. ಯಾರ ತಪ್ಪು ಮಾಡಿದರೂ ತಪ್ಪೇ, ಹಿಂದೂ ಇರಲಿ, ಮುಸ್ಲಿಂ ಇರಲಿ, ಕ್ರಿಶ್ಚಿಯನ್ ಇರಲಿ. ಮೊದಲು ಆತನಿಗೆ ಶಿಕ್ಷೆಯಾಗಬೇಕು. ಎಂದು ಆಕ್ರೋಶ ಹೊರಹಾಕಿದ್ದಾರೆ.
ಆರೋಪಿ ಶಿಕ್ಷಕ ಅಜರುದ್ದೀನ್‌ನನ್ನು ಅಮಾನತುಗೊಳಿಸಿದ್ದೇವೆ ಎಂದು ಟಿವಿ9ಗೆ ಶಿಕ್ಷಣ ಸಂಯೋಜಕ ಅಮರೇಶ್ ಹೇಳಿದ್ದಾರೆ. ಅಮಾನತುಗೊಳಿಸಿ ಶಿಕ್ಷಣ ಇಲಾಖೆಯಿಂದ ತನಿಖೆ ನಡೆಸುತ್ತಿದ್ದೇವೆ. ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಪೊಲೀಸರಿಗೆ ವರದಿ ನೀಡುತ್ತೇವೆ ಎಂದರು.
Published On - 3:33 pm, Sat, 2 July 22