ಮಡಿಕೇರಿ ನಗರದೊಳಕ್ಕೆ ಎಲ್ಲಾ ವಾಹನಗಳ ಪ್ರವೇಶ ನಿಷಿದ್ಧ, ಮದ್ಯ ಬ್ಯಾನ್
ಮಡಿಕೇರಿ ನಗರಕ್ಕೆ ಎಲ್ಲಾ ವಾಹನಗಳ ಪ್ರವೇಶ ನಿಷೇಧದ ಜೊತೆ ಮದ್ಯ ಮಾರಾಟವನ್ನು ಸಹ ಬ್ಯಾನ್ ಮಾಡಲಾಗಿದೆ.
ಕೊಡಗು: ಮಡಿಕೇರಿ ನಗರಕ್ಕೆ ಎಲ್ಲಾ ವಾಹನಗಳ ಪ್ರವೇಶ ನಿಷೇಧಿಸಿ ಕೊಡಗು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೇ ಮದ್ಯ ಮಾರಾಟವನ್ನೂ ಸಹ ನಿಷೇಧಿಸಲಾಗಿದೆ.
ಮಡಿಕೇರಿ ನಗರದಲ್ಲಿ ದಶಮಂಟಪ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇಂದು(ಅ.05) ಸಂಜೆ 6 ರಿಂದ ನಾಳೆ(ಅ.06) ಬೆಳಗ್ಗೆ 10 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶಿಸಿದೆ.
ಮಡಿಕೇರಿ ನಗರದೊಳಕ್ಕೆ ಎಲ್ಲಾ ವಾಹನಗಳ ಪ್ರವೇಶ ನಿಷಿದ್ಧ ಇರುವುದರಿಂದ ನಗರ ಪ್ರವೇಶ ದ್ವಾರಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.
ಮಡಿಕೇರಿ ನಗರದಲ್ಲಿ ನಡೆಯಲಿರುವ ದಸರಾಗೆ ಸಹಸ್ರಾರು ಜನತೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ,ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.