Madikeri: ಚೆಕ್ಪೋಸ್ಟ್ಗಳಲ್ಲಿ ತಹಶೀಲ್ದಾರ್ಗೇ ಲಂಚ ಕೊಡಲು ಬರುತ್ತಾರೆ: ಶಾಸಕ ಕೆಜಿ ಬೋಪಯ್ಯ ಆರೋಪ
Kodagu: ಡಿಸಿ ಕೂಡ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪ ವ್ಯಕ್ತಪಡಿಸಿದ್ದಾರೆ. ನಮ್ಮದೇ ಸರ್ಕಾರವಿದ್ದರೂ ನಮಗೆ ಅಧಿಕಾರವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಮಧ್ಯೆಯೇ ವಿರಾಜಪೇಟೆ ಶಾಸಕ ಕೆಜಿ ಬೋಪಯ್ಯ ಚೆಕ್ಪೋಸ್ಟ್ನ್ನು ಅಕ್ರಮವಾಗಿ ದಾಟಿ ಬರಲು ಯತ್ನಿಸುವವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಇತ್ತಿಚೆಗೆ ವಿರಾಜಪೇಟೆ ತಾಲ್ಲೂಕಿನ ತಹಶೀಲ್ದಾರ್ ಯೋಗಾನಂದ್ ಚೆಕ್ಪೋಸ್ಟ್ಗೆ ಭೇಟಿ ನೀಡಿದ್ದಾಗ ಕೆಲವರು ಅವರಿಗೇ ಸಾವಿರ ರೂಪಾಯಿ ಲಂಚ ನೀಡಲು ಮುಂದಾಗಿದ್ದರು ಎಂದು ಅಕ್ರಮವನ್ನು ಬಿಚ್ಚಿಟ್ಟಿದ್ದಾರೆ.
ಕೊಡಗು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನೂತನ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ನೇತೃತ್ವದಲ್ಲಿ ಕೋವಿಡ್ ಪರಾಮರ್ಷನಾ ಸಭೆಯ ವೇಳೆ ಈ ಪ್ರಸಂಗವನ್ನು ಅವರು ನೆನೆಸಿಕೊಂಡಿದ್ದಾರೆ. ಮಾತ್ರವಲ್ಲ ಜಿಲ್ಲೆಯಲ್ಲಿ ಅಧಿಕಾರಿಗಳ ಕೊವಿಡ್ ನಿರ್ವಹಣೆ ಬಗ್ಗೆಯೂ ಕೆಜಿ ಬೋಪಯ್ಯ ಗರಂ ಆಗಿದ್ದಾರೆ. ಕೇರಳ ಗಡಿಗೆ ಹೊಂದಿಕೊಂಡಿರುವ ಚೆಕ್ ಪೋಸ್ಟ್ಗಳಲ್ಲಿ ಕೊವಿಡ್ ಮಾರ್ಗಸೂಚಿ ಪಾಲನೆ ಆಗ್ತಾ ಇಲ್ಲ ಎಂದು ದೂರಿದ್ದಾರೆ.
ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಯಾರೂ ಇಲ್ಲ, ಡಿಸಿ ಕೂಡ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಬೋಪಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿ ಚಾರುಲತಾ ಸೋಮಲ್, ಹಾಗೆಲ್ಲಾ ಆರೋಪ ಮಾಡಬೇಡಿ ಸರ್ ಎಂದು ಹೇಳಿದ್ದಾರೆ. ಅದಕ್ಕೆ ಬೋಪಯ್ಯ ಸುಮ್ಮನೆ ಆರೋಪ ಮಾಡುತ್ತಿಲ್ಲ, ಅದು ಫ್ಯಾಕ್ಟ್ ಅಂತ ಕುಟುಕಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಧ್ಯೆ ತಾಳಮೇಳ ತಪ್ಪಿದೆ ಅಂತ ನಾಗರಿಕರು ದೂರುವಂತಾಗಿದೆ. ಬಹುಶಃ ಸಚಿವ ಸ್ಥಾನ ಸಿಗದ ಹತಾಶೆಯೋ ಏನೋ ನಮ್ಮದೇ ಸರ್ಕಾರವಿದ್ದರೂ ನಮಗೆ ಅಧಿಕಾರವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಷಾಡ ಶುಕ್ರವಾರವೂ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧ ಕೊರೊನಾ ಎರಡನೇ ಅಲೆ ತೀವ್ರತೆ ಇನ್ನೂ ಕೂಡ ಕಡಿಮೆ ಆಗಿಲ್ಲ. ಅನ್ಲಾಕ್ ಬಳಿಕವೂ ದೇಶದಲ್ಲಿ ಮತ್ತು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊವಿಡ್-19 ಪ್ರಕರಣಗಳು ಇಳಿಮುಖ ಆಗಿಲ್ಲ. ಕರ್ನಾಟಕ ಸಂಪೂರ್ಣ ಅನ್ಲಾಕ್ ಆಗುವ ಮೊದಲೇ ಮತ್ತೆ ವೀಕೆಂಡ್ ಕರ್ಫ್ಯೂ, ರಾತ್ರಿ ಕರ್ಫ್ಯೂ ಘೋಷಿಸುವಂತಾಗಿದೆ. ಈ ಪರಿಣಾಮ ರಾಜ್ಯದ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರ ಪ್ರವೇಶಕ್ಕೂ ಸಮಸ್ಯೆ ಉಂಟಾಗಿದೆ. ಇಂದು (ಆಗಸ್ಟ್ 6) ಈ ವರ್ಷದ ಕೊನೆಯ ಆಷಾಡ ಶುಕ್ರವಾರ. ಆದರೆ, ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ಇಂದು ಸಹ ನಿರ್ಬಂಧ ವಿಧಿಸಲಾಗಿದೆ.
ಚಾಮುಂಡಿ ಬೆಟ್ಟದ ಮೇಲ್ಬಾಗಕ್ಕೆ ತೆರಳಲು ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಚಾಮುಂಡಿ ಬೆಟ್ಟದ ನಿವಾಸಿಗಳು ಹಾಗೂ ಶಿಷ್ಟಾಚಾರದ ಪ್ರಕಾರ ನಿಗದಿತ ಜನರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಪ್ರವಾಸಿಗರಿಗೆ ಆರ್ಟಿಪಿಸಿಆರ್ ವರದಿ ಕಡ್ಡಾಯವಿಲ್ಲ; ಹೊಸ ಆದೇಶ ಹೊರಡಿಸಿದ ಕೊಡಗು ಡಿಸಿ ಚಾರುಲತಾ
ಮಡಿಕೇರಿ: ಭೂಕುಸಿತ ಸಂತ್ರಸ್ತರ ಗೋಳಾಟ ಕೇಳೋರೇ ಇಲ್ಲ; ಸಿಡಿದೆದ್ದ ಗ್ರಾಮ ಪಂಚಾಯಿತಿ ಸದಸ್ಯರು
(Madikeri Virajpet MLA KG Bopayya slams against Coronavirus Covid19 Test Check Post administration at Kerala Borders)
Published On - 5:42 pm, Fri, 6 August 21