ಕೊಡಗು: ಆನೆ ದಾಳಿಗೆ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಪೈಸಾರಿಯಲ್ಲಿ ನಡೆದಿದೆ. ಕೂಲಿ ಕಾರ್ಮಿಕರಾದ ಉಲ್ಲಾಸ್ (63) ಸಾವನ್ನಪ್ಪಿದ ದುರ್ದೈವಿ. ದನಗಳನ್ನು ಕರೆತರಲು ತೋಟಕ್ಕೆ ತೆರಳಿದ್ದಾಗ ಏಕಾಏಕಿ ಆನೆ ದಾಳಿ ಮಾಡಿದೆ ತೀವ್ರವಾಗಿ ಗಾಯಗೊಂಡ ಉಲ್ಲಾಸ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉಲ್ಲಾಸ್ ಮೃತಪಟ್ಟಿದ್ದಾರೆ. ಸದ್ಯ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಕಾಫಿ ತೋಟಗಳಿಗೆ ಕಾಡಾನೆಗಳ ಲಗ್ಗೆ, ಬೆಳೆ ನಾಶ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದಲ್ಲಿನ ತೋಟಗಳಿಗೆ ಕಾಡನೆ ದಾಳಿ ಮಾಡಿದ್ದು, ಬೆಳೆ ನಾಶವಾಗಿದೆ. ಬಾಲಕೃಷ್ಣ, ಶರಣು ಪಟೇಲ್ ಎಂಬುವರ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಮೋಟಾರ್, ಪೈಪುಗಳು ಸೇರಿದಂತೆ ಕೃಷಿ ಸಲಕರಣೆಗಳನ್ನು ನಾಶ ಮಾಡಿವೆ. ಕಾಡಾನೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಆದರೆ ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸ ಪಡುವಂತಾಗಿದೆ.
ನೆಲಮಂಗಲ: ಮನೆಯ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆಗಳ ದಾಳಿ
ಮನೆಯ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆಗಳು ದಾಳಿ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೊರೆಕೆಂಪೋಹಳ್ಳಿಯಲ್ಲಿ ನಡೆದಿದೆ. ಅನಿಲ್ ಎಂಬುವರಿಗೆ ಸೇರಿದ ನಾಯಿ ಮೇಲೆ ಮುಂಜಾನೆ ಐದು ಗಂಟೆ ವೇಳೆಗೆ ಚಿರತೆಗಳು ದಾಳಿ ನಡೆಸಿವೆ. ಸಾಕು ಪ್ರಾಣಿಗಳ ಮೇಲೆ ಚಿರತೆ ಉಪಟಳಕ್ಕೆ ಗ್ರಾಮಸ್ಥರು ಆತಂಕಗೊಂಡಿದ್ದು, ಮಾಹಿತಿ ನೀಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ರಾಮನಗರ ಬಿಡದಿ ಬಳಿ 2 ಕಾಡಾನೆಗಳು ಪ್ರತ್ಯಕ್ಷ; ಒಂದು ಆನೆಗೆ ರೈಲು ಗುದ್ದಿರುವ ಅನುಮಾನ
Mumbai: ನಿರ್ಮಾಣ ಹಂತದಲ್ಲಿದ್ದ ಲಿಫ್ಟ್ ಕುಸಿದುಬಿದ್ದು 6 ಮಂದಿ ಸಾವು; ಗುತ್ತಿಗೆದಾರ, ಮೇಲ್ವಿಚಾರಕ ಅರೆಸ್ಟ್
Published On - 9:54 am, Mon, 26 July 21