ಮಹಾಂತ ಶಿವಾಚಾರ್ಯ ಘರ್ ವಾಪಸಿ ಕೆಲಸ ಮಾಡಲಿ: ಸಂಸದ ಪ್ರತಾಪ್ ಸಿಂಹ ಸವಾಲು
ಮಡಿಕೇರಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳು ಒಂದೊಂದು ಮಠಕ್ಕೆ ಸೀಮಿತವಾಗಬಾರದು. ಹಿಂದೂ ಸಮಾಜವನ್ನು ಸಂಘಟಿಸಿ, ಮತಾಂತರದ ವಿರುದ್ಧ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಮಡಿಕೇರಿ: ಮಹಾಂತ ಶಿವಾಚಾರ್ಯ ಸ್ವಾಮೀಜಿ ಘರ್ ವಾಪಸಿ ಕೆಲಸ ಮಾಡಲಿ. ಕಲಬುರ್ಗಿಯಲ್ಲಿ ಬಹಳಷ್ಟು ಜನರು ಮತಾಂತರವಾಗಿದ್ದಾರೆ. ಅವರನ್ನು ಮರಳಿ ಮಾತೃ ಧರ್ಮಕ್ಕೆ ಕರೆತರಲಿ. ಆಗ ನಾನೇ ಕಲಬುರ್ಗಿಗೆ ತೆರಳಿ ಶ್ರೀಗಳ ಪಾದಪೂಜೆ ಮಾಡುತ್ತೇನೆ. ಅವರ ಪಾದುಕೆಯನ್ನು ತಲೆ ಮೇಲಿಟ್ಟುಕೊಂಡು ಮೆರವಣಿಗೆ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಮಡಿಕೇರಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳು ಒಂದೊಂದು ಮಠಕ್ಕೆ ಸೀಮಿತವಾಗಬಾರದು. ಹಿಂದೂ ಸಮಾಜವನ್ನು ಸಂಘಟಿಸಿ, ಮತಾಂತರದ ವಿರುದ್ಧ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಕ್ರಿಪ್ಟೊಕರೆನ್ಸಿ ವಿಚಾರವಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರಿನ ಬಗ್ಗೆ ಸಂಸದ ಪ್ರತಾಪ್ ಸಿಂಹ ಮಾಡಿದ್ದ ಆರೋಪಗಳನ್ನು ಖಂಡಿಸಿ ಕಲಬುರ್ಗಿಯ ಕಾಂಗ್ರೆಸ್ ಕಾರ್ಯಕರ್ತರು ಕೆಲ ದಿನಗಳ ಹಿಂದೆ ಪ್ರತಿಭಟನಾ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಸುಲಫಲ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ ‘ಪ್ರತಾಪ್ ಸಿಂಹ 15 ದಿನಗಳಲ್ಲಿ ಕ್ಷಮೆ ಕೇಳದಿದ್ದರೆ ಮೈಸೂರಿನ ಅವರ ಮನೆಗೇ ಹೋಗಿ ಅವರಿಗೆ …. ಹೊಡೆಯಬೇಕಾಗುತ್ತದೆ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
‘ದಲಿತರ ಬಗ್ಗೆ ಮಾತನಾಡುವಾಗ ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು. ನನ್ನದು ಆವೇಶದ ಮಾತುಗಳಲ್ಲ. ದಲಿತರು ಸಾವಿರಾರು ವರ್ಷಗಳ ಕಾಲ ಶೋಷಣೆಗೊಳಗಾದವರು’ ಎಂದು ಹೇಳಿದ್ದರು. ಸ್ವಾಮೀಜಿ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಸುಲಫಲ ಶ್ರೀಗಳ ಮಾತಿಗೆ ವ್ಯಾಪಕ ಖಂಡನೆಯೂ ವ್ಯಕ್ತವಾಗಿತ್ತು. ಆಂದೋಲಾ ಮಠದ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿ, ಪ್ರತಾಪ ಸಿಂಹಗೆ … ಹೊಡೀರಿ ನೋಡೋಣ. ಅವರಿಗೆ ಹೊಡೆದು ಬಂದರೆ ನಿಮ್ಮ ಕಾವಿಗೆ ಗೌರವ ಕೊಡ್ತೀನಿ. ಬೇಡರತ್ತಾಗಿ ಕ್ಷಮೆ ಕೇಳದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ಇದನ್ನೂ ಓದಿ: ‘ಪ್ರಧಾನಿ ಮೋದಿ ಹುಟ್ಟಿನ ಬಗ್ಗೆ ಪ್ರಿಯಾಂಕ್ ಅವಹೇಳಕಾರಿಯಾಗಿ ಮಾತಾಡಿದ್ದರು, ಆಗ ಎಲ್ಲಿ ಹೋಗಿದ್ದಿರಿ ಸಾರಂಗಧರ ಸ್ವಾಮಿಗಳೇ?’ ಇದನ್ನೂ ಓದಿ: ಕಾಂಗ್ರೆಸ್ಗೆ ಅಧಿಕಾರ ಕೊಟ್ಟರೆ ಕನ್ನಡಿಗರ ಸರ್ಕಾರ ಇರಲ್ಲ, ತಾಲಿಬಾನ್ ಸರ್ಕಾರ ಬರುತ್ತೆ -ಸಂಸದ ಪ್ರತಾಪ್ ಸಿಂಹ