AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು: ಬೆಟ್ಟದ ಮೇಲಿನ ಕಾಡಿನಲ್ಲಿ, ದಾರಿ ತಪ್ಪಿ 4 ದಿನ ಪೊದೆಯಲ್ಲೇ ಸಿಲುಕಿದ್ದ ಅಜ್ಜಿ ಕೊನೆಗೂ ರಕ್ಷಣೆ

ಬೆಟ್ಟದ ಮೇಲಿನ‌ ಪೊದೆಯಲ್ಲಿ ಸಿಲುಕಿದ್ದ ವೃದ್ಧೆಯನ್ನು ರಕ್ಷಣೆ ಮಾಡಿರುವ ಘಟನೆ ಮಡಿಕೇರಿ ತಾಲೂಕಿನ ಬಲ್ಲಮಾವಟಿ ಗ್ರಾಮದಲ್ಲಿ ನಡೆದಿದೆ.

ಕೊಡಗು: ಬೆಟ್ಟದ ಮೇಲಿನ ಕಾಡಿನಲ್ಲಿ, ದಾರಿ ತಪ್ಪಿ 4 ದಿನ ಪೊದೆಯಲ್ಲೇ ಸಿಲುಕಿದ್ದ ಅಜ್ಜಿ ಕೊನೆಗೂ ರಕ್ಷಣೆ
ವೃದ್ಧೆ ಸೀತಮ್ಮ‌
TV9 Web
| Edited By: |

Updated on:Aug 01, 2022 | 8:14 PM

Share

ಕೊಡಗು: ಬೆಟ್ಟದ ಮೇಲಿನ‌ ಪೊದೆಯಲ್ಲಿ ಸಿಲುಕಿದ್ದ ವೃದ್ಧೆಯನ್ನು ರಕ್ಷಣೆ ಮಾಡಿರುವ ಘಟನೆ ಮಡಿಕೇರಿ (Madikeri) ತಾಲೂಕಿನ ಬಲ್ಲಮಾವಟಿ ಗ್ರಾಮದಲ್ಲಿ ನಡೆದಿದೆ. ಸೀತಮ್ಮ‌ (80) ರಕ್ಷಣೆಯಾದ ಅಜ್ಜಿ. ಅಜ್ಜಿ ಸಂಬಂಧಿಕರ‌ ಮನೆಗೆ ತೆರಳುತ್ತಿದ್ದಾಗ ದಾರಿ ತಪ್ಪಿ ಕಾಡು ಪಾಲಾಗಿದ್ದಳು. ಈ ಸಂಬಂಧ ಕುಟುಂಬಸ್ಥರು ನಾಲ್ಕು ದಿನಗಳ‌ ಕಾಲ ಹುಡಕಾಟ ನಡೆಸಿದ್ದರು.

ಅಜ್ಜಿ ಮನೆಯಿಂದ‌ 2 ಕಿಮಿ ದೂರ ಬೆಟ್ಟದ ಮೇಲಿನ ಕಾಡಿನಲ್ಲಿ ನಾಲ್ಕು ದಿನಗಳ ಕಾಲ‌ ಪೊದೆಯಲ್ಲೇ ಆಶ್ರಯ ಪಡೆದಿದ್ದಳು. ಇಂದು (ಆಗಸ್ಟ್ 1) ಪತ್ತೆಯಾಗಿದ್ದಾಳೆ. ಅಸ್ವಸ್ಥ ಅಜ್ಜಿ ಸೀತಮ್ಮಾಗೆ ನಾಪೋಕ್ಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಕ್ರಮ ಸಂಬಂಧ ಆರೋಪ ವ್ಯಕ್ತಿಯ ಕೊಲೆ ಬೆಂಗಳೂರು: ಅಕ್ರಮ ಸಂಬಂಧ ಆರೋಪದಡಿ ವ್ಯಕ್ತಿ ಕೊಲೆಯಾಗಿರುವ ಘಟನೆ ಬೆಂಗಳೂರಿನ ಕಾಟನ್ ಪೇಟೆಯ ಭಕ್ಷಿ ಗಾರ್ಡನ್​ನಲ್ಲಿ ನಡೆದಿದೆ. ಶ್ರೀನಿವಾಸ್ ಕೊಲೆಯಾದ ವ್ಯಕ್ತಿ. ಮೃತ ಶ್ರೀನಿವಾಸ್, ಸಂತೋಷ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಅನ್ನೋ ಆರೋಪ ಕೇಳಿಬಂದಿತ್ತು.

ಇದೇ ವಿಚಾರಕ್ಕೆ ಹಲವು ಬಾರಿ ಇಬ್ಬರ ಮಧ್ಯೆ ಗಲಾಟೆಗಳು ನಡೆದಿತ್ತು. ನಿನ್ನೆ (ಜುಲೈ 31) ಸಂತೋಷ‌ ಏಕಾಏಕಿ ಶ್ರೀನಿವಾಸ್​ಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದನು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಶ್ರೀನಿವಾಸ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಪೊಲೀಸರು ಆರೋಪಿ ಸಂತೋಷನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಹಾಗೂ ಕಾರ್ ನಡುವೆ ಅಪಘಾತ ; ಓರ್ವ ಸಾವು

ಶಿವಮೊಗ್ಗ: ಖಾಸಗಿ ಪ್ರವಾಸಿಗರ ಬಸ್ ಹಾಗೂ ಮಾರುತಿ ಈಕೋ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರ್ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ತಾಳಗುಪ್ಪ ಬಳಿಯ ಅಲಳ್ಳಿ ಶಿರೂರು ಬಳಿ ನಡೆದಿದೆ. ಚನ್ನಗಿರಿಯ ಶಹಬಾಜ್(26) ಮೃತ ವ್ಯಕ್ತಿ. ಕಾರಿನಲ್ಲಿದ್ದ ರಿಹಾನ್ (14) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಬಸ್ಸುಮ್(23),  ಶಿಫಾ(27), ಖಮರುನ್ನಿಸಾ(45), ಜಬ್ರುನ್(55), ಮಹಮ್ಮದ್ ಉಸ್ಮಾನ್(25) ಆರು ಮಂದಿಗೂ ಗಂಭೀರ ಗಾಯಗಳಾಗಿವೆ.

ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು,ಜೋಗ ಜಲಪಾತ ವೀಕ್ಷಿಸಿ ವಾಪಸ್ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೋಲೀಸರು ಭೇಟಿ ಪರಿಶೀಲನೆ. ನಡೆಸಿದ್ದಾರೆ

ಇನ್ನೂ ಬಸ್​ನಲ್ಲಿದ್ದ ಚಾಲಕ ಸಮೇತ ಎಲ್ಲ ಪ್ರಯಾಣಿಕರು ಪರಾರಿಯಾಗಿದ್ದಾರೆ. ಜನರು ದಾವಣಗೆರೆ ಸಿದ್ದರಾಮೋತ್ಸವಕ್ಕೆ ಬಂದಿದ್ದರು. ಜನರು ದಾವಣಗೆರೆಯಿಂದ ಜೋಗ್ ನೋಡಲು ಬಂದಿದ್ದರು. ಸಾಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 4:44 pm, Mon, 1 August 22