Talacauvery Theerthodbhava: ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ಕಾವೇರಿ

ಕರ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ ನೀಡಿದ್ದಾಳೆ. ಬ್ರಹ್ಮ ಕುಂಡಿಕೆ ಬಳಿ‌ ಭಕ್ತರ ಮಂತ್ರಘೋಷ ಮುಗಿಲು‌ ಮುಟ್ಟಿದೆ. ಸಹಸ್ರಾರು ಭಕ್ತರು ಕಾವೇರಿ ದರ್ಶನ ಮಾಡಿ ಪುನೀತರಾಗಿದ್ದಾರೆ.

Talacauvery Theerthodbhava: ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ಕಾವೇರಿ
ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ಕಾವೇರಿ
Follow us
TV9 Web
| Updated By: ಆಯೇಷಾ ಬಾನು

Updated on:Oct 17, 2021 | 2:01 PM

ಕೊಡಗು: ಜಿಲ್ಲೆಯ ಮಡಿಕೇರಿ ತಾಲೂಕಿನ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವವಾಗಿದೆ. ಮಕರ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ ನೀಡಿದ್ದಾಳೆ. ಬ್ರಹ್ಮ ಕುಂಡಿಕೆ ಬಳಿ‌ ಭಕ್ತರ ಮಂತ್ರಘೋಷ ಮುಗಿಲು‌ ಮುಟ್ಟಿದೆ. ಸಹಸ್ರಾರು ಭಕ್ತರು ಕಾವೇರಿ ದರ್ಶನ ಮಾಡಿ ಪುನೀತರಾಗಿದ್ದಾರೆ. ತೀರ್ಥೋದ್ಭವವಾಗುತ್ತಿದ್ದಂತೆ ಅರ್ಚಕ ವೃಂದ ತಿರ್ಥ ಪ್ರೋಕ್ಷಣೆ ಮಾಡಿಕೊಂಡಿದ್ದಾರೆ.

ಹತ್ತಕ್ಕೂ ಅಧಿಕ‌ ಅರ್ಚಕರು ಬ್ರಹ್ಮ ಕುಂಡಿಕೆಗೆ ಮಹಾಪೂಜೆ ಸಲ್ಲಿಸಿದ್ದಾರೆ. ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಚಾಮರಾಜನಗರ, ತಮಿಳುನಾಡು, ಕೇರಳದಿಂದ ಸಹಸ್ರಾರು ಭಕ್ತರು ಆಗಮಿಸಿ ಜೀವನದಿ ಕಾವೇರಿ ತೀರ್ಥೋದ್ಭವ ಕಣ್ತುಂಬಿಕೊಂಡಿದ್ದಾರೆ.

ಅಗಸ್ತ್ಯ ಮುನಿಯ ಪತ್ನಿಯಾಗಿದ್ದ ಕಾವೇರಿ ಲೋಕಕಲ್ಯಾಣಕ್ಕಾಗಿ ನದಿಯಾಗಿ ಹರಿಯುತ್ತಿದ್ದಾಳೆ ಅನ್ನೋದು ಪ್ರತೀತಿ. ಇಂದು ಮಧ್ಯಾಹ್ನ ಮಕರ ಲಗ್ನದಲ್ಲಿ 1.12ಕ್ಕೆ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ಕಾವೇರಿ ಹರಿದಿದ್ದಾಳೆ. ಈ ಬಾರಿ ಮಧ್ಯಾಹ್ನದ ವೇಳೆ ತೀರ್ಥೋದ್ಭವ ಆಗಿರೋದ್ರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಕೊವಿಡ್-19 ಹಿನ್ನೆಲೆ ಈ ಬಾರಿ ಹಲವು ನಿರ್ಬಂಧಗಳನ್ನು ಹೇರಿದ್ದು ತೀರ್ಥೋದ್ಭವ ವೇಳೆ ಪುಣ್ಯಸ್ನಾನಕ್ಕೆ ಅವಕಾಶವಿಲ್ಲ. ಭಕ್ತರು ಯಾವುದೇ ಕಾರಣಕ್ಕೂ ಕಲ್ಯಾಣಿಗೆ ಇಳಿದು ಪುಣ್ಯ ಸ್ನಾನ ಮಾಡುವಂತಿಲ್ಲ. ಸದ್ಯ ಬ್ರಹ್ಮ‌ಕುಂಡಿಕೆ ಬಳಿ‌ ನೆರೆದಿದ್ದ ಭಕ್ತರಿಗೆ ತೀರ್ಥ ಪ್ರೋಕ್ಷಣೆ ಮಾಡಲಾಗಿದೆ.

ಕಾವೇರಿ ಮಾತೆ ಉದ್ಭವವಾಗುವ ಸಮಯ ಗೊತ್ತಾಗುವುದು ಹೇಗೆ? ಕಾವೇರಿ ಮಾತೆ ಇದೇ ಕ್ಷಣದಲ್ಲಿಯೇ ಉದ್ಭವವಾಗುತ್ತಾಳೆ ಅನ್ನೋದನ್ನ ಹೇಗೆ ಕಂಡು ಹಿಡಿಯಲಾಗುತ್ತೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಸಾಮಾನ್ಯವಾಗಿ ನಮ್ಮ ಭಾರತದಲ್ಲಿ ಧಾರ್ಮಿಕವಾಗಿ ನಡೆಯುವ ಕಾರ್ಯಕ್ರಮಗಳ ಲೆಕ್ಕಾಚಾರವನ್ನ ಭಾರತೀಯ ಪಂಚಾಂಗದಲ್ಲಿರೋ ಜ್ಯೋತಿಷ್ಯ ಶಾಸ್ತ್ರ ಆಧರಿಸಿಯೇ ನಿರ್ಣಯಿಸುತ್ತಾರೆ. ಇಲ್ಲಿಯೂ ಕೂಡ ಕಾವೇರಿ ತೀರ್ಥೋಧ್ಭವದ ಸಮಯವನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರವೇ ಲೆಕ್ಕಾಚಾರ ಹಾಕಲಾಗುತ್ತದೆ. ಸೂರ್ಯ ಕನ್ಯಾರಾಶಿಯಿಂದ ತುಲಾ ರಾಶಿಗೆ ಪ್ರವೇಶ ಮಾಡುವ ಆ ಘಳಿಗೆಯೇ ಕಾವೇರಿ ತೀರ್ಥೋದ್ಭವವಾಗುವ ಸಮಯ ಅಂತ ನಿಗಧಿ ಮಾಡಲಾಗುತ್ತದೆ. ತಲಕಾವೇರಿ ಮತ್ತು ಭಾಗಮಂಡಲ ದೇವಸ್ಥಾನದ ಪ್ರಮುಖ ಅರ್ಚಕರು ಸೇರಿ ಜ್ಯೋತಿಷ್ಯ ನೋಡಿ ಈ ಘಳಿಗೆಯನ್ನ ನಿರ್ಧಾರ ಮಾಡ್ತಾರೆ.

ಇದನ್ನೂ ಓದಿ: ನಾಳೆ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ; ಕೊರೊನಾ ಕಾರಣದಿಂದ ಹಲವು ನಿರ್ಬಂಧ: ಇಲ್ಲಿದೆ ವಿವರ

Published On - 1:31 pm, Sun, 17 October 21

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ