ನಾಳೆ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ; ಕೊರೊನಾ ಕಾರಣದಿಂದ ಹಲವು ನಿರ್ಬಂಧ: ಇಲ್ಲಿದೆ ವಿವರ
ತೀರ್ಥೋದ್ಭವ ವೇಳೆ ಪುಣ್ಯಸ್ನಾನಕ್ಕೆ ಅವಕಾಶ ಇರುವುದಿಲ್ಲ ಎಂದು ಸೂಚನೆ ನೀಡಲಾಗಿದೆ. ಭಕ್ತರು ಕಲ್ಯಾಣಿಗೆ ಇಳಿದು ಪುಣ್ಯ ಸ್ನಾನ ಮಾಡುವಂತಿಲ್ಲ. ಬದಲಾಗಿ, ಭಕ್ತರಿಗೆ ತೀರ್ಥ ವಿತರಣೆಗೆ ಎಲ್ಲ ರೀತಿಯ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಕೊಡಗು: ಜಿಲ್ಲೆಯ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವವು ನಾಳೆ (ಅಕ್ಟೋಬರ್ 17, ಭಾನುವಾರ) ನಡೆಯಲಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿ, ಕಾವೇರಿ ನದಿಯ ಉಗಮ ಸ್ಥಾನದಲ್ಲಿ ತೀರ್ಥೋದ್ಭವ ಆಗಲಿದೆ. ಜೀವನದಿ ಕಾವೇರಿ ಈ ಬಾರಿ ಮಧ್ಯಾಹ್ನ ದರ್ಶನ ನೀಡಲಿದ್ದಾಳೆ. ತೀರ್ಥೋದ್ಭವ ವೇಳೆ 6 ಅರ್ಚಕರಿಂದ ಮಹಾಪೂಜೆ ನಡೆಯಲಿದೆ. ಪ್ರಧಾನ ಅರ್ಚಕ ಗುರುರಾಜಾಚಾರ್ ನೇತೃತ್ವದಲ್ಲಿ ಪೂಜೆ ನಡೆಯಲಿದೆ.
ಮಕರ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ ಆಗಲಿದೆ. ಬೆಳಗ್ಗೆ 11ರ ಬಳಿಕ ಕುಂಡಿಕೆ ಬಳಿ ಭಕ್ತರಿಗೆ ಪ್ರವೇಶವಿಲ್ಲ ಎಂದು ತಿಳಿಸಲಾಗಿದೆ. ಕೊವಿಡ್-19 ಹಿನ್ನೆಲೆ ಈ ಬಾರಿ ತೀರ್ಥೋದ್ಭವಕ್ಕೆ ಹಲವು ನಿರ್ಬಂಧ ವಿಧಿಸಲಾಗಿದೆ. ತೀರ್ಥೋದ್ಭವ ವೇಳೆ ಪುಣ್ಯಸ್ನಾನಕ್ಕೆ ಅವಕಾಶ ಇರುವುದಿಲ್ಲ ಎಂದು ಸೂಚನೆ ನೀಡಲಾಗಿದೆ. ಭಕ್ತರು ಕಲ್ಯಾಣಿಗೆ ಇಳಿದು ಪುಣ್ಯ ಸ್ನಾನ ಮಾಡುವಂತಿಲ್ಲ. ಬದಲಾಗಿ, ಭಕ್ತರಿಗೆ ತೀರ್ಥ ವಿತರಣೆಗೆ ಎಲ್ಲ ರೀತಿಯ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಜೀವನದಿ ಕಾವೇರಿಯ ಹುಟ್ಟೂರು ತಲಕಾವೇರಿಯಲ್ಲಿ ಇದೇ ಅಕ್ಟೋಬರ್ 17ರಂದು ತೀರ್ಥೋದ್ಭವವಾಗಲಿದೆ. ಪ್ರತಿ ವರ್ಷ ಜೀವನದಿ ಕಾವೇರಿ ತೀರ್ಥ ರೂಪದಲ್ಲಿ ದರ್ಶನ ನೀಡುವ ಪುಣ್ಯ ಘಳಿಗೆಯನ್ನು ಕಣ್ತುಂಬಿಸಿಕೊಳ್ಳಲು ದೇಶದ ಮೂಲೆ ಮೂಲೆಯಿಂದ ಸಹಸ್ರಾರು ಭಕ್ತರು ಆಗಮಿಸ್ತಾರೆ. ಕಲ್ಯಾಣಿಯಲ್ಲಿ ಮಿಂದು ಪುನೀತರಾಗ್ತಾರೆ. ಇದುವರೆಗೂ ಕಾವೇರಿ ಭಕ್ತರ ಉತ್ಸಾಹಕ್ಕೆ ಯಾವುದೇ ಅಡ್ಡಿಯಾಗಿರಲಿಲ್ಲ. ಆದರೆ ಕೊರೊನಾದಿಂದಾಗಿ ಕಳೆದ ವರ್ಷ ಕಾವೇರಿ ಜಾತ್ರೆ ಸಂಪೂರ್ಣ ಕಳೆಗುಂದಿತ್ತು. ಹೆಚ್ಚಿನ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿರಲಿಲ್ಲ. ಹಾಗಾಗಿ ದೂರದೂರುಗಳಿಮದ ತೀರ್ಥೋದ್ಭವಕ್ಕೆ ಆಗಮಿಸಬೇಕಿದ್ದ ಭಕ್ತರಿಗೆ ನಿರಾಸೆಯಾಗಿತ್ತು. ಇದೀಗ ಮತ್ತೆ ತೀರ್ಥೋದ್ಭವ ಸಂದರ್ಭ ಬಂದಿದೆ. ಅ. 17ರಂದು ಸಂಜೆ ತೀರ್ಥೋದ್ಭವವಾಗಲಿದೆ. ಆದರೆ ಜಾತ್ರೆ ನಡೆಸುವ ಬಗ್ಗೆ ಈ ಬಾರಿಯೂ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ: Tala kaveri: ತಲಕಾವೇರಿಯಲ್ಲಿ ಅಕ್ಟೋಬರ್ 17 ರಂದು ತೀರ್ಥೋದ್ಭವ; ಭಕ್ತರ ಪ್ರವೇಶಕ್ಕಿದ್ದ ನಿರ್ಬಂಧ ತೆರವು
ಇದನ್ನೂ ಓದಿ: Theerthodbhava: ಅ. 17ಕ್ಕೆ ತಲಕಾವೇರಿಯಲ್ಲಿ ತೀರ್ಥೋದ್ಭವ; ಈ ಬಾರಿಯೂ ಕಾವೇರಿ ದರ್ಶನಕ್ಕೆ ಕೊರೊನಾ ಕರಿ ನೆರಳು?
Published On - 4:49 pm, Sat, 16 October 21