ಜ್ಯೂಸ್ ಕುಡಿದ ತಕ್ಷಣ ವ್ಯಕ್ತಿಯೊಬ್ಬರ ಆರೋಗ್ಯದಲ್ಲಿ ಏರುಪೇರು: ಸಾಲ ವಾಪಸ್ ಕೇಳಿದ್ದಕ್ಕೆ ವಿಷ ಹಾಕಿದ್ರಾ?
ಜ್ಯೂಸ್ ಕುಡಿದ ವ್ಯಕ್ತಿ ಆರೋಗ್ಯದಲ್ಲಿ ಏರುಪೇರಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ಲೂರು ಗ್ರಾಮದಲ್ಲಿ ನಡೆದಿದೆ. ಕೊಟ್ಟ ಸಾಲ ವಾಪಾಸ್ ಕೇಳಿದ್ದಕ್ಕೆ ಜ್ಯೂಸ್ ಪಾಕೆಟ್‌ನಲ್ಲಿ ವಿಷ ಬೆರೆಸಿ ಕುಡಿಸಿದ್ದಾನೆ ಎಂಬ ಆರೋಪಿಸಲಾಗಿದೆ.
ಕೋಲಾರ (ಏಪ್ರಿಲ್ 03): ಜ್ಯೂಸ್ ಕುಡಿದ ತಕ್ಷಣ ವ್ಯಕ್ತಿಯೋಬ್ಬರ ಆರೋಗ್ಯದಲ್ಲಿ ಏರುಪೇರಾಗಿದೆ. ಕೊಟ್ಟ ಸಾಲ ವಾಪಾಸ್ ಕೇಳಿದ್ದಕ್ಕೆ ಜ್ಯೂಸ್ ಕುಡಿದ ಪಾಕೆಟ್‌ನಲ್ಲಿ ವಿಷ ಬೆರೆಸಿ ಕುಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ಲೂರು ಗ್ರಾಮದಲ್ಲಿ ನಡೆದಿದೆ. ಸಾಲ ನೀಡಿರುವ ಆಚಂಪಲ್ಲಿ ಗ್ರಾಮದ ಗೋಪಾಲಪ್ಪ ಜ್ಯೂಸ್ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಲ ಪಡೆದಿರುವ ಕೊಳತೂರು ಗ್ರಾಮದ ಶಿವಣ್ಣಕೊಳತೂರು ಗ್ರಾಮದ ಶಿವಣ್ಣ ಜ್ಯೂಸ್ನಲ್ಲಿ ವಿಷ ಹಾಕಿ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
ಸಾಲ ನೀಡಿರುವ ಆಚಂಪಲ್ಲಿ ಗ್ರಾಮದ ಗೋಪಾಲಪ್ಪ ವಿಷಯುಕ್ತ ಜ್ಯೂಸ್ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಳತೂರು ಗ್ರಾಮದ ಶಿವಣ್ಣ ಎಂಬುವವರಿಗೆ ಗೋಪಾಲಪ್ಪ ಎನ್ನುವರು 1 ಲಕ್ಷದ 11 ಸಾವಿರ ರೂಪಾಯಿ ಸಾಲ ನೀಡಿದ್ದರು. ಆದರೆ ಸಾಲ ಪಡೆದು ವಾಪಸ್ ನೀಡಲು ಶಿವಣ್ಣ ವಿಳಂಬ ಮಾಡಿದ್ದಾರೆ. ಇದರಿಂದ ಇಂದು(ಏಪ್ರಿಲ್ 03) ಗೋಪಾಲಕೃಷ್ಣ ಸಾಲ ವಾಪಸ್ ಕೇಳಲು ಯಲ್ಲೂರು ಗ್ರಾಮಕ್ಕೆ ಬಂದಿದ್ದಾನೆ.
ಸಾಲ ಕೊಡುವುದಾಗಿ ಸ್ವಲ್ಪ ಕಾಲಾವಕಾಶ ಕೊಡು ಎಂದು ಕೇಳಿ ಬಸ್ ನಿಲ್ದಾಣಕ್ಕೆ ತನ್ನ ಬೈಕ್ನಲ್ಲೇ ಡ್ರಾಪ್ ಮಾಡಿದ ಶಿವಣ್ಣ. ಬಸ್ ನಿಲ್ದಾಣದ ಬಳಿ ಗೋಪಾಲಪ್ಪಗೆ ಜ್ಯುಸ್ ಪ್ಯಾಕೇಟ್ ಕೊಡಿಸಿದ್ದಾನೆ. ಆದ್ರೆ, ಜ್ಯೂಸ್ ಸೇವಿಸಿದ ತಕ್ಷಣ ಗೋಪಾಲಪ್ಪಗೆ ಬಾಯಿ ಉರಿ, ಎದೆಯುರಿ ಶುರುವಾಗಿದೆ. ತಕ್ಷಣ ಗೋಪಾಲಪ್ಪ ಜ್ಯೂಸ್ ಪಾಕೆಟ್ ಸಮೇತ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ