ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದ್ರೆ ನಾನು ಕನಿಷ್ಠ 50000 ಮತಗಳಿಂದ ಗೆಲ್ಲುತ್ತೇನೆ: ವರ್ತೂರ್ ಪ್ರಕಾಶ್ ವಿಶ್ವಾಸ
ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಫೇಲ್ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಕೋಲಾರ: ಒಂದು ಕಾಲದಲ್ಲಿ ಗುರು-ಶಿಷ್ಯರಂತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಬಿಜೆಪಿ ನಾಯಕ, ಮಾಜಿ ಸಚಿವ ವರ್ತೂರು ಪ್ರಕಾಶ್ (Varthur Prakash) ಈಗ ರಾಜಕೀಯ ಬದ್ಧ ವೈರಿಗಳಾಗಿದ್ದಾರೆ. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾಗಿ ಸುಳಿವು ನೀಡಿದ ಬೆನ್ನಲ್ಲೇ ಕೆರಳಿದ ವರ್ತೂರು ಪ್ರಕಾಶ್, ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಫೇಲ್ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನು ರಾಜ್ಯದಲ್ಲಿ ಯಾರೂ ಕ್ಷೇತ್ರ ಬದಲಾವಣೆ ಮಾಡಿದವರಿಲ್ಲ. ವರುಣಾ, ಬಾದಾಮಿ ಜನ ತಿರಸ್ಕರಿಸುತ್ತಾರೆಂದು ಕೋಲಾರದಲ್ಲಿ ಸ್ಪರ್ಧಿಸಲು ಬಂದಿದ್ದಾರೆ. ಸಿದ್ದರಾಮಯ್ಯ ಕೋಲಾರಕ್ಕೆ ಬಂದಾಗ ಕೋಲಾರ ಜನ ಇರಲಿಲ್ಲ, ಎಲ್ಲ ಹೊರಗಿನವರು. ಸಿದ್ದರಾಮಯ್ಯ ಭೇಟಿ ವೇಳೆ ಕುರುಬ ಸಮಾಜದವರೂ ಬಂದಿಲ್ಲ. ಸಿದ್ದರಾಮಯ್ಯರನ್ನು ನೋಡಲು ಕೂಡ ಜನರು ಹೋಗಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಸಿದ್ದರಾಮಯ್ಯ ಕೋಲಾರಕ್ಕೆ ಬಂದಾಗ 2 ಸಾವಿರ ನಮ್ಮ ಸಮುದಾಯವರು ಹೋಗಿದ್ದರೆ, ನಾನು ಚುನಾವಣೆಗೆ ನಿಲ್ಲುವುದಿಲ್ಲ. ವರುಣಾದಲ್ಲಿ ಸ್ಪರ್ಧೆ ಮಾಡಬೇಕೆಂದು ಮನವಿ ಬಂದಿದೆ, ಪ್ರಚಾರಕ್ಕೆ ಹೋಗುವೆ. ಅವರು ಕೋಲಾರದಲ್ಲಿ ಸ್ಪರ್ಧೆ ಮಾಡುವುದು ಖಚಿತವಾದ ನಂತರ, ನನ್ನ ಮಾತು ವಿಚಾರ ಬೇರೆ ಇರುತ್ತದೆ ಎಂದು ಕೋಲಾರದಿಂದ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.
ನಾನು ಸಿದ್ದರಾಮಯ್ಯ ಶಿಷ್ಯನಲ್ಲ, ಅವರ ಶಿಷ್ಯ ಎಂದು ಹೇಳಬೇಡಿ
ನಾನು ಸಿದ್ದರಾಮಯ್ಯ ಶಿಷ್ಯನಲ್ಲ, ಅವರ ಶಿಷ್ಯ ಎಂದು ಹೇಳಬೇಡಿ. ನನ್ನ ಆರ್ಥಿಕ ಕಾಣಿಕೆ ಸಿದ್ದರಾಮಯ್ಯನವರಿಗೆ ಬೇಕಾದಷ್ಟು ಇದೆ. ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಹೊರ ಬಂದಾಗ, ನಾನು ರೇವಣ್ಣ, ವಿಶ್ವನಾಥ್ ಆಶ್ರಯ ಕೊಟ್ಟಿದ್ದೇವೆ. ಅವರಿಂದ ನಮಗೇನು ಕಿಂಚಿತ್ತೂ ಸಹಾಯವಾಗಿಲ್ಲ, ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದ್ದೇ ಆದರೆ ನಾನು ಕನಿಷ್ಠ 50000, ಮತಗಳಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರು-ಶಿಷ್ಯರ ಮಧ್ಯೆ ಹಣಾಹಣಿ
ಒಂದು ವೇಳೆ ಕೋಲಾರದಲ್ಲಿ ಸಿದ್ದರಾಮಯ್ಯ ಮತ್ತು ವರ್ತೂರು ಪ್ರಕಾಶ್ ಸ್ಪರ್ಧಿಸುವುದು ಪಕ್ಕಾ ಆದರೆ, ಕುರುಬ ಸಮಾಜ ಇಬ್ಬರು ನಾಯಕರ ಮಧ್ಯೆ ಟಫ್ ಪೈಟ್ ಬೀಳುತ್ತದೆ. ಇನ್ನು ಇಬ್ಬರು ಕುರುಬ ಸಮಾಜ ನಾಯಕರಾಗಿದ್ದರಿಂದ ಕುರುಬ ಸಮಾಜದ ಮತಗಳು ಡಿವೈಡ್ ಆಗುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:47 pm, Tue, 15 November 22