AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನನ್ನು ಟಾರ್ಗೆಟ್ ಮಾಡುವವರಿಗೆ ಇನ್ನೆಷ್ಟು ಭಯ ಇರಬೇಕು: ರಮೇಶ್​ಕುಮಾರ್ ವಾಗ್ದಾಳಿ

ಯಾರಾದ್ರೂ ನನ್ನನ್ನ ಟಾರ್ಗೆಟ್ ಮಾಡಿದರೆ ಮನಸ್ಸಿನಲ್ಲಿ ಜೈ ದೇವರಾಜ ಅರಸು ಎಂದು ನೆನಪಿಸಿಕೊಳ್ಳುತ್ತೇನೆ ಎಂದು ಪರೋಕ್ಷವಾಗಿ ಸಚಿವ ಸುಧಾಕರ್​ಗೆ ಟಾಂಗ್ ಕೊಟ್ಟರು

ನನ್ನನ್ನು ಟಾರ್ಗೆಟ್ ಮಾಡುವವರಿಗೆ ಇನ್ನೆಷ್ಟು ಭಯ ಇರಬೇಕು: ರಮೇಶ್​ಕುಮಾರ್ ವಾಗ್ದಾಳಿ
ರಮೇಶ್ ​ಕುಮಾರ್
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Oct 28, 2021 | 11:07 PM

Share

ಕೋಲಾರ: ಕೆಲವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನನ್ನ ಬಗ್ಗೆ ಅವರಿಗೆ ಇನ್ನೆಷ್ಟು ಭಯ ಇರಬೇಕು. ನನಗೆ ಇದಕ್ಕಿಂತಲೂ ಗೌರವ ಬೇಕೆ ಎಂದು ಮಾಜಿ ಸಚಿವ ಡಾ.ಕೆ.ರಮೇಶ್​ಕುಮಾರ್ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಹೆಸರು ಹೇಳದೆ ಟೀಕಿಸಿದರು.

ಡಿಸಿಸಿ ಬ್ಯಾಂಕ್​ನಲ್ಲಿ ಮಾತನಾಡಿದ ಅವರು, ನೆನಪಿರಲಿ ನಾನು ದೇವರಾಜ ಅರಸು ಬಳಿ ತರಬೇತಿ ಪಡೆದಿದ್ದೇನೆ. ಅವರಂತೆ 8 ವರ್ಷ ಈ ರಾಜ್ಯ ಆಳಲು ಯಾರಿಂದಲೂ ಆಗಿಲ್ಲ. ಅಂತಿಮಯಾತ್ರೆಯಲ್ಲಿ ಅರಸು ಹುಲಿ ಹೋದಂತೆ ಹೋದರು. ಯಾರಾದ್ರೂ ನನ್ನನ್ನ ಟಾರ್ಗೆಟ್ ಮಾಡಿದರೆ ಮನಸ್ಸಿನಲ್ಲಿ ಜೈ ದೇವರಾಜ ಅರಸು ಎಂದು ನೆನಪಿಸಿಕೊಳ್ಳುತ್ತೇನೆ ಎಂದು ಪರೋಕ್ಷವಾಗಿ ಸಚಿವ ಸುಧಾಕರ್​ಗೆ ಟಾಂಗ್ ಕೊಟ್ಟರು.

ನಾನು ಜನರ ಕೃಪೆಯಿಂದ ಉಳಿದಿದ್ದೇನೆ. ನನ್ನ ತಾಯಿ ಅನಕ್ಷರಸ್ಥೆ, ತಂದೆ 2ನೇ ಕ್ಲಾಸ್ ಓದಿದ್ದಾರೆ. ಇಷ್ಟು ಜನ ನನ್ನನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ ಅಂದ್ರೆ ಅದಕ್ಕಿಂತ ಗೌರವ ಬೇಕಾ ನನಗೆ ಎಂದು ತಮ್ಮನ್ನು ಟಾರ್ಗೆಟ್ ಮಾಡುವವರಿಗೆ ಟೇಬಲ್ ಗುದ್ದಿ ಎಚ್ಚರಿಕೆ ಕೊಟ್ಟರು.

ಡಿಸಿಸಿ ಬ್ಯಾಂಕ್​ನಲ್ಲಿ ಸಾವಿರಾರು ಹೆಣ್ಣು ಮಕ್ಕಳಿಗೆ ಪಕ್ಷ, ಜಾತಿ, ಪಂಗಡ ನೋಡದೆ ಎಲ್ಲರಿಗೂ ಸಾಲ ನೀಡಿದ್ದೇವೆ. ಯಾರು ಬೇಕಾದರೂ ಸಂಘ ರಚಿಸಿಕೊಂಡು ಬಂದು ಸಾಲ ಕೇಳಬಹುದು. ಉದ್ದೇಶ ಪೂರ್ವಕವಾಗಿ ಸಾಲ ಕೊಟ್ಟಿಲ್ಲ ಅಂದ್ರೆ ಪ್ರಶ್ನಿಸಬಹುದು ಎಂದರು. ಡಿಸಿಸಿ ಬ್ಯಾಂಕ್​ನಲ್ಲಿ ಅವ್ಯವಹಾರ ಆಗಿದ್ದರೆ ದಾವೆ ಹೂಡಲಿ. ಮೊಕದ್ದಮೆ ಹೂಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ಸುಖಾಸುಮ್ಮನೆ ಗಾಳಿಯಲ್ಲಿ ಮಾತಾಡುವುದನ್ನು ಬಿಡಬೇಕು ಎಂದು ಡಿಸಿಸಿ ಬ್ಯಾಂಕ್​​ನಲ್ಲಿ ಅವ್ಯವಹಾರವಾಗಿದೆ ಎಂದು ಆರೋಪ ಮಾಡಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಹೆಸರು ಪ್ರಸ್ತಾಪಿಸದೇ ತಾಕೀತು ಮಾಡಿದರು.

ಇದನ್ನೂ ಓದಿ: ಸುಧಾಕರ್​ಗೆ ಅಧಿಕಾರದ ಮದ! ದುರಹಂಕಾರದಲ್ಲಿ ಮಾತನಾಡುತ್ತಿದ್ದಾರೆ- ಸಿದ್ದರಾಮಯ್ಯ ತಿರುಗೇಟು ಇದನ್ನೂ ಓದಿ: ಕೋಲಾರ ಡಿಸಿಸಿ ಬ್ಯಾಂಕ್​ನಲ್ಲಿ ಭ್ರಷ್ಟಾಚಾರ ನಡೆದಿದೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Published On - 11:06 pm, Thu, 28 October 21

ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ