AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರು ಯಾವ ಧರ್ಮ ಬೇಕಾದ್ರೂ ಸ್ವೀಕರಿಸಬಹುದು‌; ಅಂಬೇಡ್ಕರ್ ಉದಾಹರಿಸಿ ರಮೇಶ್ ಕುಮಾರ್ ಹೇಳಿಕೆ

Ramesh Kumar: ಯಾರಿಗೆ ಯಾವ ಮತದಲ್ಲಿ ಇಷ್ಟ ಇದ್ರೆ ಅದರಲ್ಲಿ ಇರಬಹುದು. ಹಿಂದುವಾಗಿ ಹುಟ್ಟುವುದು ತಪ್ಪಿಸಲು ಸಾಧ್ಯವಿಲ್ಲ. ಆದ್ರೆ ಹಿಂದುವಾಗಿ ಸಾಯಿಯುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ರು ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

ಯಾರು ಯಾವ ಧರ್ಮ ಬೇಕಾದ್ರೂ ಸ್ವೀಕರಿಸಬಹುದು‌; ಅಂಬೇಡ್ಕರ್ ಉದಾಹರಿಸಿ ರಮೇಶ್ ಕುಮಾರ್ ಹೇಳಿಕೆ
ರಮೇಶ್ ಕುಮಾರ್ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Oct 02, 2021 | 3:59 PM

ಕೋಲಾರ: ಯಾರು ಯಾವ ಧರ್ಮ ಬೇಕಾದ್ರೂ ಸ್ವೀಕರಿಸಬಹುದು‌. ಹಿಂದೂ ಆಗಿ ಸಾಯಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಮಹಾನ್ ವ್ಯಕ್ತಿಯನ್ನೇ ಮತಾಂತರದಿಂದ ತಪ್ಪಿಸಲು ಆಗಿಲ್ಲ. ಯಾರಿಗೆ ಯಾವ ಧರ್ಮ ಇಷ್ಟವಾಗತ್ತೋ ಅಲ್ಲಿ ಇರಬಹುದು ಎಂದು ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಹೇಳಿಕೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಮತಾಂತರ ನಿಷೇಧ ವಿಚಾರವಾಗಿ ಬಹಳಷ್ಟು ಚರ್ಚೆಯಾಗುತ್ತಿದೆ. ರಾಜಕೀಯ ನಾಯಕರು ಈ ಬಗ್ಗೆ ವಿವಿಧ ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆ ಶನಿವಾರ, ರಮೇಶ್ ಕುಮಾರ್ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

ಯಾರಿಗೆ ಯಾವ ಮತದಲ್ಲಿ ಇಷ್ಟ ಇದ್ರೆ ಅದರಲ್ಲಿ ಇರಬಹುದು. ಹಿಂದುವಾಗಿ ಹುಟ್ಟುವುದು ತಪ್ಪಿಸಲು ಸಾಧ್ಯವಿಲ್ಲ. ಆದ್ರೆ ಹಿಂದುವಾಗಿ ಸಾಯಿಯುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ರು. ಅದಕ್ಕೆ ಯಾರ ಬಳಿ ಉತ್ತರ ಇಲ್ಲ, ಅವರಿಗಿಂತ ಮಹಾನ್ ವ್ಯಕ್ತಿ ಬೇಕೆ ನಿಮಗೆ. ಬಡತನ, ಅಸ್ಪೃಶ್ಯತೆ ಮೊದಲು ನಿವಾರಣೆಯಾಗಲಿ ಎಂದು ಸ್ವಾಮಿ ವಿವೇಕಾನಂದ ಮದ್ರಾಸ್​ನಲ್ಲಿ ಹೇಳುತ್ತಾರೆ. ಮಾನವ ಧರ್ಮ‌ ದೊಡ್ಡದ್ದು ಎಂದು ಬಸವಣ್ಣ ಹೆಳಿದ್ರು. ಯಾರು ಯಾವ ದರ್ಮ ಬೇಕಾದ್ರು ಸ್ವೀಕರಿಸಬಹುದು‌ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

ಕೋಲಾರ ಶಾಸಕ ಶ್ರೀನಿವಾಸಗೌಡ ಕಾಂಗ್ರೇಸ್ ಸೇರ್ಪಡೆ ವಿಚಾರವಾಗಿ ಕೋಲಾರದಲ್ಲಿ ರಮೇಶ್ ಕುಮಾರ್ ಮಾತನಾಡಿದ್ದಾರೆ. ಕಾಂಗ್ರೆಸ್ ಒಂದು ದೊಡ್ಡ ಸಂಸ್ಥೆ. ಅದನ್ನು ಸೇರಬೇಕು ಎಂದು ತೀರ್ಮಾನ‌ ಮಾಡಿದ್ರೆ ಸೇರ್ತಾರೆ. ಅವರು ಗ್ರಾಮ‌ ಪಂಚಾಯತಿನಿಂದ ಜನರ‌ ಮಧ್ಯೆ ಆಯ್ಕೆಯಾಗಿ ಬಂದವರು. ಅವರೇನು ಆಕಾಶದಿಂದ ಉದುರಿ‌ಬಂದವರಲ್ಲ. ಗಾಳಿಯಲ್ಲಿ ತೇಲಿ ಬಂದವರಲ್ಲ.

ಅವರಿಗೆ ಅವರದೇ ಆದ ಶಕ್ತಿ ಸಾಮರ್ಥ್ಯ ಇದೆ. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಕ್ಷೇತ್ರದಲ್ಲಿ, ಸಚಿವರಾಗಿ ಕೆಲಸ‌ ಮಾಡಿದ್ದಾರೆ. ಇಷ್ಟು ಹಳೆ ಮನುಷ್ಯ, ಅನುಭವ ಇರುವವರು ಕಾಂಗ್ರೆಸ್​ಗೆ ಬಂದ್ರೆ ಶಕ್ತಿ ಬರಲಿದೆ. ಅವರು ಸೆಕ್ಯೂಲರ್ ಆಗಿ ಕೆಲಸ‌ ಮಾಡಬೇಕು ಎಂದುಕೊಂಡಿದ್ದಾರೆ. ಸಂವಿಧಾನದಲ್ಲಿ ಅವಕಾಶವಿದೆ. ಸ್ವತಂತ್ರವಾಗಿ ಅವರು ನಾಯಕರು. ಅವರಿಗೆ ಯಾರ ಕೃಪ ಕಟಾಕ್ಷ ಬೇಕಾಗಿಲ್ಲ ಎಂದು ತಿಳಿಸಿದ್ದಾರೆ. ಈ ವೇಳೆ, ಶಾಸಕರಾದ ರಮೇಶ್‌ಕುಮಾರ್, ಕೃಷ್ಣ ಭೈರೇಗೌಡ ಹಾಗೂ ಶ್ರೀನಿವಾಸಗೌಡರು ಕೆರೆಗೆ ಬಾಗಿನ ಅರ್ಪಣೆ ಮಾಡಿದ್ದಾರೆ. ಕೋಲಾರಮ್ಮ ಕೆರೆಗೆ ಬಾಗಿನ ಅರ್ಪಿಸಿದ್ದಾರೆ.

ಇದನ್ನೂ ಓದಿ: ಉಪಚುನಾವಣೆಯಲ್ಲಿ ಜೆಡಿಎಸ್​ನಿಂದ ಮುಸ್ಲಿಂ ಅಭ್ಯರ್ಥಿ ವಿಚಾರ; ಸಿದ್ದರಾಮಯ್ಯ, ಕುಮಾರಸ್ವಾಮಿ ವಾಕ್ಸಮರ

ಇದನ್ನೂ ಓದಿ: ಸದಾನಂದಗೌಡ ವಿರುದ್ಧ ಮಾತಿನ ಚಾಟಿ ಬೀಸಿದ ಕಾಂಗ್ರೆಸ್

Published On - 3:56 pm, Sat, 2 October 21

ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್