AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yargol Dam, Bangarpet: ತಮಿಳುನಾಡಿಗೆ ವ್ಯರ್ಥವಾಗಿ ಹರಿಯುತ್ತಿದ್ದ ನೀರಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ, 17 ವರ್ಷಗಳ ನಂತರ ಉದ್ಘಾಟನೆಗೆ ಸಿದ್ದವಾಯ್ತು ಯರಗೋಳ್ ಡ್ಯಾಂ!

Yargol Dam, Bangarpet: ಬಂಗಾರಪೇಟೆಯ ಯರಗೋಳು ಗ್ರಾಮದ ಬಳಿ ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದ ನೀರಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಮಾಡಿ ಕೋಲಾರ, ಬಂಗಾರಪೇಟೆ, ಮಾಲೂರು ಸೇರಿದಂತೆ 45 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ಕುಡಿಯುವ ನೀರಿಲ್ಲದೆ ಫ್ಲೋರೈಡ್​ ಯುಕ್ತ ವಿಷ ನೀರು ಕುಡಿಯುತ್ತಿದ್ದ ಜಿಲ್ಲೆಯ ಜನರಿಗೆ ಇದೀಗ ಯರಗೋಳ್​ ಯೋಜನೆಯ ಮೂಲಕವಾದರೂ ಶುದ್ದ ಕುಡಿಯುವ ನೀರು ಕುಡಿಯುವ ಭಾಗ್ಯ ಸಿಕ್ಕರೆ ಅದೇ ಚಿನ್ನದ ನಾಡಿನ ಜನರ ಭಾಗ್ಯ.

Yargol Dam, Bangarpet: ತಮಿಳುನಾಡಿಗೆ ವ್ಯರ್ಥವಾಗಿ ಹರಿಯುತ್ತಿದ್ದ ನೀರಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ, 17 ವರ್ಷಗಳ ನಂತರ ಉದ್ಘಾಟನೆಗೆ ಸಿದ್ದವಾಯ್ತು ಯರಗೋಳ್ ಡ್ಯಾಂ!
17 ವರ್ಷಗಳ ನಂತರ ಉದ್ಘಾಟನೆಗೆ ಸಿದ್ದವಾಯ್ತು ಯರಗೋಳ್ ಡ್ಯಾಂ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Oct 21, 2023 | 2:28 PM

Share

ಅದು ಜಿಲ್ಲೆಯ ಬಹು ನಿರೀಕ್ಷಿತ ಕುಡಿಯುವ ನೀರಿನ (Drinking Water) ಯೋಜನೆ, ಜಿಲ್ಲೆಯ ಮೂರು ತಾಲೂಕುಗಳಿಗೆ ಶುದ್ದ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಜಲಾಶಯ, ಸಧ್ಯ ಜಲಾಶಯ ತುಂಬಿ ಹರಿಯುತ್ತಿದ್ದು, ಕಾಮಗಾರಿಯೂ ಮುಗಿದಿದೆ. ಮುಂದಿನ ತಿಂಗಳು ನವೆಂಬರ್​ 10 ರಂದು ಈ ಯೋಜನೆ ಬರದ ನಡಿಗೆ ಕಾವೇರಿಯಾಗಿ ಸಿಎಂ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆಗೊಳ್ಳಲಿದೆ ( Inauguration). ಯಾವುದು ಆ ಯೋಜನೆ ಇಲ್ಲಿದೆ ಡೀಟೇಲ್ಸ್​..

ತುಂಬಿ ಕೋಡಿ ಹರಿಯುತ್ತಿರುವ ಯರಗೋಳ್ ಡ್ಯಾಂ (Yargol Dam, Bangarpet), ಭರದಿಂದ ಸಾಗುತ್ತಿರುವ ಅಂತಿಮ ಹಂತದ ಕಾಮಗಾರಿ, ಯೋಜನೆ ಲೋಕಾರ್ಪಣೆಗೆ ಶಾಸಕರಿಂದ ಸಿದ್ದತೆ ಸಭೆ, ಈ ಎಲ್ಲಾ ದೃಶ್ಯಗಳು-ವಿದ್ಯಮಾನಗಳು ಕಂಡು ಬಂದಿದ್ದು ಕೋಲಾರದಲ್ಲಿ. ಹೌದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಯರಗೋಳು ಗ್ರಾಮದ ಬಳಿ ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದ ನೀರಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಮಾಡಿ ಕೋಲಾರ, ಬಂಗಾರಪೇಟೆ, ಮಾಲೂರು ಪಟ್ಟಣ ಹಾಗೂ 45 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದ್ದು, ಯರಗೋಳ್ ಯೋಜನೆ ಅರಂಭವಾಗಿ 17 ವರ್ಷ ಕಳೆದರೂ ಇನ್ನೂ ಪೂರ್ಣವಾಗಿರಲಿಲ್ಲ. ಬಹತೇಕ 1 ಟಿಎಂಸಿಯಷ್ಟು ನೀರು ಶೇಖರಣೆ ಸಾಮರ್ಥ್ಯ ಹೊಂದಿರುವ ಯರಗೋಳ್ ಡ್ಯಾಂ ಸತತ 17 ವರ್ಷಗಳ ನಂತರ ಯೋಜನೆ ಪೂರ್ಣವಾಗಿದ್ದು ಇದೇ ನವೆಂಬರ್​-10 ರಂದು ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಾಲಿದ್ದಾರೆ.

ಕೋಲಾರ ಉಸ್ತುವಾರಿ ಸಚಿವರೇ ನಗಾರಾಭಿವೃದ್ದಿ ಇಲಾಖೆ ಸಚಿವರೂ ಆಗಿರುವ ಕಾರಣ ಯೋಜನೆ ತ್ವರಿತವಾಗಿ ಪೂರ್ಣವಾಗಿದೆ. ಆ ಕಾರಣದಿಂದಲೇ ಇಲಾಖೆಯ ಮುಖ್ಯ ಅಧಿಕಾರಿಗಳು ಕೋಲಾರದಲ್ಲಿ ಬೀಡು ಬಿಟ್ಟು ಹಂತ ಹಂತವಾಗಿ ಬಾಕಿ ಇದ್ದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ಅಲ್ಲದೆ ಈಗಾಗಲೇ ಪೈಪ್​ಲೈನ್​, ಶುದ್ದೀಕರಣ ಘಟಕ, ಹಾಗೂ ನೀರು ಸರಬಾರಜು ಕುರಿತು ಟೆಸ್ಟಿಂಗ್ ಕಾರ್ಯ ಮುಗಿದಿದೆ. ಇನ್ನು ಓವರೆ ಹೆಡ್​ ಟ್ಯಾಂಕ್​ಗಳ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ ಅದು ಇನ್ನೆರಡು ದಿನಗಳಲ್ಲಿ ಬಹುತೇಕ ಮುಕ್ತಾಯ ಗೊಳ್ಳಲಿದೆ ಅನ್ನೋದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರ ಮಾತು.

ಇನ್ನೂ 2006 ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯೋಜನೆಯ ಶಂಕುಸ್ಥಾಪನೆ ಮಾಡಲಾಗಿತ್ತು ಅಂದಿಗೆ 240 ಕೋಟಿ ವೆಚ್ಚಕ್ಕೆ ಡಿಪಿಆರ್ ಮಾಡಿ, ಅಣೆಕಟ್ಟು ಹಾಗೂ ನೀರು ನಿಲುಗಡೆಗಾಗಿ 300 ಎಕರೆ ಪ್ರದೇಶವನ್ನು ವಶಕ್ಕೆ ಪಡೆದು ಅದರಲ್ಲಿ 124 ಎಕರೆ ಅರಣ್ಯ ಭೂಮಿ, ಜೊತೆಗೆ 128 ಎರಕೆ ರೈತರಿಂದ ಸ್ವಾಧೀನ ಪಡಿಸಿಕೊಂಡು, ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಯಿತು.ಆದರೆ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯದ ಹಿನ್ನೆಲೆ 2006 ರಿಂದ 2009ರ ವರೆಗೂ ಯೋಜನೆ ಸ್ಥಗಿತವಾಗಿತ್ತು. 2009 ರಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ನೀರು ಸರಬರಾಜು ಮಂಡಳಿ ಅಧ್ಯಕ್ಷ ರಾಗಿದ್ದಾಗ 80 ಕೋಟಿ ಹಣ ಪೈಪ್ ಲೈನ್ ಕಾಮಗಾರಿ ಮಾಡಿ ಯೋಜನೆ ಮತ್ತೆ ಸ್ಥಗಿತವಾಯಿತು.

2013ರಲ್ಲಿ ಜಿಲ್ಲೆಯ ಶಾಸಕರಗಳ ಒತ್ತಾಯದ ನಂತರ ಸಿಎಂ ಸಿದ್ದರಾಮಯ್ಯ ಅವರು ಯೋಜನೆಗೆ ಮರು ಅನುಮೋದನೆ ಹಾಗೂ ಶುದ್ದೀಕರಣ ಘಟಕಕ್ಕೆ ಹಣ ಬಿಡುಗಡೆ ಮಾಡಿದ್ದರು. ಸದ್ಯ 17 ವರ್ಷಗಳ ನಂತರ ಸದ್ಯ ಕೋಲಾರ ಜಿಲ್ಲೆಗೆ ಸ್ವತಂತ್ರ್ಯ ನಂತರ ಮಾಡಲಾಗಿರುವ ಮೊದಲ ಕುಡಿಯುವ ನೀರಿನ ಯೋಜನೆ ಇದಾಗಿದ್ದು 240 ಕೋಟಿಯಿಂದ ಆರಂಭವಾದ ಯೋಜನೆ ಕೊನೆಗೆ 315 ಕೋಟಿ ರೂಪಾಯಿಯಲ್ಲಿ ಮುಕ್ತಾಯವಾಗಿ ನವೆಂಬರ್ 10 ರಂದು ಲೋಕಾರ್ಪಣೆಗೊಳ್ಳಲಿದೆ. ಅದಕ್ಕಾಗಿ ಈಗಾಗಲೇ ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಅಧಿಕಾರಿಗಳ ಸಭೆ ನಡೆಸಿ ಬೇಕಾದ ಅಗತ್ಯ ಸಿದ್ದತೆಗಳಲ್ಲಿ ತೊಡಗಿದ್ದಾರೆ.

Also  read: ಇದು ಅಡುಗೆ ಭಟ್ಟರ ಗ್ರಾಮ! ಮನೆಗೊಬ್ಬ ಅಡುಗೆ ಭಟ್ಟರು ಇಲ್ಲಿ ಸಿಗ್ತಾರೆ! 40 ವರ್ಷದಿಂದ ಈ ಗ್ರಾಮಕ್ಕೆ ಅಡುಗೆ ವೃತ್ತಿ ಚೆನ್ನಾಗಿ ಹೊಂದಿಕೊಂಡಿದೆ!

ನವೆಂಬರ್-10 ರಂದು ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಬೈರತಿ ಸುರೇಶ್ ಸೇರಿ ಸರ್ಕಾರದ ಹಲವು ಸಚಿವರು ಹಾಗೂ ಶಾಸಕರುಗಳು ಈಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಅದಕ್ಕಾಗಿ ಡ್ಯಾಂ ಬಳಿಯಲ್ಲೇ ಬೃಹತ್​ ವೇದಿಕೆ ನಿರ್ಮಾಣಮಾಡಿ 25 ಸಾವಿರ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುಲು ತೀರ್ಮಾನಿಸಲಾಗಿದೆ ಎಂದು ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಟಿವಿ9 ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಒಟ್ಟಾರೆ ಸ್ವಾತಂತ್ರ್ಯಾ ನಂತರ ಕೋಲಾರ ಜಿಲ್ಲೆಗೆ ಮಾಡಲಾದ ಮೊದಲ ಕುಡಿಯುವ ನೀರಿನ ಯೋಜನೆ ಇದಾಗಿದ್ದು, ಹತ್ತು ಹಲವು ಅಡೆತಡೆಗಳನ್ನು ಪೂರ್ಣಗೊಂಡು ಈಗ ಯೋಜನೆ ಜನರಿಗೆ ತಲುಪುತ್ತಿದೆ. ಕುಡಿಯುವ ನೀರಿಲ್ಲದೆ ಫ್ಲೋರೈಡ್​ ಯುಕ್ತ ವಿಷ ನೀರು ಕುಡಿಯುತ್ತಿದ್ದ ಜಿಲ್ಲೆಯ ಜನರಿಗೆ ಈ ಯರಗೋಳ್​ ಯೋಜನೆ ಮೂಲಕವಾದರೂ ಶುದ್ದ ಕುಡಿಯುವ ನೀರು ಕುಡಿಯುವ ಭಾಗ್ಯ ಸಿಕ್ಕರೆ ಅದೇ ಚಿನ್ನದ ನಾಡಿನ ಜನರ ಭಾಗ್ಯ.

ಕೋಲಾರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:18 pm, Sat, 21 October 23

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!