Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಅಡುಗೆ ಭಟ್ಟರ ಗ್ರಾಮ! ಮನೆಗೊಬ್ಬ ಅಡುಗೆ ಭಟ್ಟರು ಇಲ್ಲಿ ಸಿಗ್ತಾರೆ! 40 ವರ್ಷದಿಂದ ಈ ಗ್ರಾಮಕ್ಕೆ ಅಡುಗೆ ವೃತ್ತಿ ಚೆನ್ನಾಗಿ ಹೊಂದಿಕೊಂಡಿದೆ!

ಈ ಗ್ರಾಮದ ಬಹುತೇಕ ಜನರ ಮೂಲ ವೃತ್ತಿ ಅಡುಗೆ ಕೆಲಸ. 30-40 ವರ್ಷಗಳಿಂದಲೂ ಈ ಗ್ರಾಮಕ್ಕೆ ಅಡುಗೆ ವೃತ್ತಿ ಅನ್ನೋದು ಚೆನ್ನಾಗಿ ಹೊಂದಿಕೊಂಡು ಬಂದಿದೆ. ಅಡುಗೆ ಕೆಲಸ ಅನ್ನೋದು ಈ ಗ್ರಾಮಕ್ಕೆ ವಂಶಪಾರಂಪರ್ಯವಾಗಿ ಬಂದಂತೆ ಇದೆ! ಈ ಗ್ರಾಮದ ಇಂದಿನ ಯುವಕರು ಕೂಡಾ ಸರ್ಕಾರಿ ಕೆಲಸ ಸಿಕ್ಕದರೆ ಅದು ನಮಗೆ ಬೇಡ, ನಾವು ಅಡುಗೆ ಕೆಲಸವನ್ನೇ ಮಾಡ್ತೇವೆ ಎನ್ನುವಷ್ಟರ ಮಟ್ಟಿಗೆ ಈ ಗ್ರಾಮದವರ ಹಾಕುವ ಒಗ್ಗರಣೆ, ಮಸಾಲೆ ಜನರನ್ನು ಆಕರ್ಷಿಸುತ್ತದೆ.

ಇದು ಅಡುಗೆ ಭಟ್ಟರ ಗ್ರಾಮ! ಮನೆಗೊಬ್ಬ ಅಡುಗೆ ಭಟ್ಟರು ಇಲ್ಲಿ ಸಿಗ್ತಾರೆ! 40 ವರ್ಷದಿಂದ ಈ ಗ್ರಾಮಕ್ಕೆ ಅಡುಗೆ ವೃತ್ತಿ ಚೆನ್ನಾಗಿ ಹೊಂದಿಕೊಂಡಿದೆ!
ಇದು ಅಡುಗೆ ಭಟ್ಟರ ಗ್ರಾಮ! ಮನೆಗೊಬ್ಬರು ಅಡುಗೆ ಭಟ್ಟರು ಇದ್ದಾರೆ!
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​

Updated on: Aug 23, 2023 | 6:06 AM

ಆ ಗ್ರಾಮದಲ್ಲಿ ಹಾಕುವ ಒಗ್ಗರಣೆಯ ಘಮಲು ಕೇವಲ ಕರ್ನಾಟಕಕ್ಕಷ್ಟೇ ಅಲ್ಲ, ಹಲವು ರಾಜ್ಯಗಳಿಗೆ ವ್ಯಾಪಿಸಿದೆ, ಆ ಗ್ರಾಮದ ನಳಮಹಾರಾಜರ ಕೈ ರುಚಿಗೆ ಹಲವಾರು ಜಿಲ್ಲೆಯ ಹಾಗೂ ರಾಜ್ಯಗಳ ಜನರು ಮನ ಸೋತಿದ್ದಾರೆ, ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಈ ಗ್ರಾಮದ ಅಡುಗೆ ಭಟ್ಟರು (chefs village) ಮಾಡುವ ಅಡುಗೆ ರುಚಿ ಈಗಲೂ ಪುಲ್​ ಫೇಮಸ್ ( Cooking Profession)​.. ಅಷ್ಟಕ್ಕೂ ಯಾವುದಾ ಆ ಗ್ರಾಮ? ಇಲ್ಲಿದೆ ಡೀಟೇಲ್ಸ್​… ಭರ್ಜರಿಯಾಗಿ ಸಿದ್ದವಾಗುತ್ತಿರುವ ಮಾಂಸಾಹಾರಿ ಭೋಜನ, ಕಬಾಬ್​, ಬಿರಿಯಾನಿ, ಮೊಸರು ಬಜ್ಜಿ ಹೀಗೆ ಅಡುಗೆ ಭಟ್ಟರ ಕೈಯಲ್ಲಿ ಸಿದ್ದವಾಗಿರುವ ವಿವಿಧ ಖಾದ್ಯಗಳು, ವಿವಿಧ ಖಾದ್ಯಗಳನ್ನು ಬಡಿಸುವ ಅಡುಗೆ ಭಟ್ಟರು ಈ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ (Kolar) ಬಂಗಾರಪೇಟೆ ತಾಲ್ಲೂಕು ದೊಡ್ಡೂರು ಗ್ರಾಮದಲ್ಲಿ (Dadduru in Bangarpet).

ಹೌದು ಅಷ್ಟಕ್ಕೂ ಈ ಗ್ರಾಮದ ವಿಶೇಷ ಏನು ಅಂತೀರ? ದೊಡ್ಡೂರು ಗ್ರಾಮವಾದರೂ ಈ ಗ್ರಾಮವನ್ನು ಅಡುಗೆ ಭಟ್ಟರ ಗ್ರಾಮ ಎಂದು ಕರೆಯಲಾಗುತ್ತದೆ. ಕಾರಣ ದೊಡ್ಡೂರು ಗ್ರಾಮದಲ್ಲಿ ಸರಿ ಸುಮಾರು 250-300 ಮನೆಗಳಿಗೆ ಈ ಗ್ರಾಮದ ಬಹುತೇಕರ ಮೂಲ ವೃತ್ತಿ ಅಡುಗೆ ಕೆಲಸ. ನಿಜ ಈ ಗ್ರಾಮದ ಬಹುತೇಕರು ಅಂದರೆ ಶೇ 70 ರಷ್ಟು ಮನೆಗಳಲ್ಲಿನ ಜನರ ಮೂಲ ವೃತ್ತಿ ಅಡುಗೆ ಕೆಲಸ. ಕಳೆದ 30-40 ವರ್ಷಗಳಿಂದಲೂ ಈ ಗ್ರಾಮಕ್ಕೆ ಅಡುಗೆ ವೃತ್ತಿ ಅನ್ನೋದು ಚೆನ್ನಾಗಿ ಹೊಂದಿಕೊಂಡು ಬಂದಿದೆ. ಅದಕ್ಕಾಗಿಯೇ ಗ್ರಾಮದ ಮನೆಯಲ್ಲಿ ಯಾರಾದರೂ ಒಬ್ಬರು ಅಡುಗೆ ವೃತ್ತಿಯನ್ನು ಆಯ್ಕೆ ಮಾಡಿ ಕೊಂಡು ಜೀವನ ಸಾಗಿಸುತ್ತಾರೆ. ಅಡುಗೆ ಕೆಲಸ ಅನ್ನೋದು ಈ ಗ್ರಾಮಕ್ಕೆ ವಂಶಪಾರಂಪರ್ಯವಾಗಿ ಬಂದಂತೆ ಇದೆ!

ಇನ್ನು ಈ ಗ್ರಾಮದ ಯುವಕರು ಕೂಡಾ ಸರ್ಕಾರಿ ಕೆಲಸ ಸಿಕ್ಕರೂ ನಮಗೆ ಬೇಡ ನಾವು ಅಡುಗೆ ಕೆಲಸವನ್ನೇ ಮಾಡ್ತೇವೆ ಎನ್ನುವಷ್ಟರ ಮಟ್ಟಿಗೆ ಈ ಗ್ರಾಮದವರ ಹಾಕುವ ಒಗ್ಗರಣೆ, ಮಸಾಲೆ ಜನರನ್ನು ಆಕರ್ಷಿಸುತ್ತದೆ. ಅದಕ್ಕಾಗಿಯೇ ಈ ಗ್ರಾಮದ ಅಡುಗೆ ಭಟ್ಟರಿಗೆ ಎಲ್ಲೆಡೆ ಅಷ್ಟೊಂದು ಬೇಡಿಕೆಯೂ ಇದೆ. ಈ ಗ್ರಾಮದ ಅಡುಗೆ ಭಟ್ಟರೂ ಕೇವಲ ಕೋಲಾರ ಜಿಲ್ಲೆಯಲ್ಲಷ್ಟೇ ಅಲ್ಲ ದೇಶದ ಹಲವೆಡೆ ಹೋಗಿ ಅಡುಗೆ ಕೆಲಸ ಮಾಡಿಕೊಟ್ಟು ಬರುತ್ತಾರೆ. ಬೆಂಗಳೂರು, ಮೈಸೂರು, ಮಂಡ್ಯ, ತಮಿಳುನಾಡು, ಚೆನ್ನೈ, ಹೊಸೂರು, ಹೈದರಾಬಾದ್​ ಸೇರಿ ಹಲವೆಡೆ ಈ ಗ್ರಾಮದ ಅಡುಗೆ ಭಟ್ಟರಿಗೆ ಡಿಮ್ಯಾಂಡ್​ ಇದೆ. ಇನ್ನು ಗ್ರಾಮದಲ್ಲಿ ಸುಮಾರು 100-150 ಜನ ಅಡುಗೆ ಕೆಲಸ ಮಾಡುವವರೆ ಇರುವುದರಿಂದ ದೊಡ್ಡ ದೊಡ್ಡ ಕಾರ್ಯಕ್ರಮಗಳು ಎಂದರೆ ಸಾಕು ಈ ಗ್ರಾಮದವರಿಗೆ ಅಡುಗೆ ಮಾಡಲು ಒಪ್ಪಿಸುತ್ತಾರೆ.

ಇನ್ನು ದೊಡ್ಡೂರು ಗ್ರಾಮದ ಜನರು ಸುಮ್ಮನೆ ಅಡುಗೆ ಮಾಡೋದಿಲ್ಲ ಇವರು ಮಾಡುವ ಅಡುಗೆಯಲ್ಲಿ ಒಂದು ರೀತಿಯ ವಿಶೇಷತೆ ಇರುತ್ತೆ. ಇವರು ತಮ್ಮದೇ ಆದ ಸ್ಟೈಲ್​ನಲ್ಲಿ ರುಚಿ ರುಚಿಯಾದ ಅಡುಗೆ ಮಾಡುತ್ತಾರೆ. ಹಾಗಾಗಿಯೇ ಈ ಗ್ರಾಮದ ಅಡುಗೆ ಭಟ್ಟರಿಗೆ ಡಿಮ್ಯಾಂಡ್​ ಹೆಚ್ಚು ಇರುವುದು. ಅದರಲ್ಲೂ ನಾನ್​ ವೆಜ್​ನಲ್ಲಿ ನಾಟಿ ಸ್ಟೈಲ್​ನಲ್ಲಿ ಮಾಡುವ ಮಾಸಾಲೆ, ನಾಟಿ ಸ್ಟೈಲ್​ ಅಡುಗೆಯಂತೂ ಎಲ್ಲರಿಗೂ ಇಷ್ಟವಾಗುತ್ತದಂತೆ, ನಾನ್​ ವೆಜ್​ನಲ್ಲಿ ಚಿಕನ್​ ಮಸಾಲಾ, ಕಬಾಬ್​, ಬಿರಿಯಾನಿಗಳ ರುಚಿಗೆ ಮನಸೋತು ಹೋಗುತ್ತಾರಂತೆ.

ಅದೇ ರೀತಿ ವೆಜ್​ನಲ್ಲೂ ಕೂಡಾ ಇವರು ಹಲವು ರೀತಿಯ ಸಿಹಿ ತಿಂಡಿಗಳನ್ನು ಮಾಡುತ್ತಾರೆ. ಇನ್ನು ಈ ಗ್ರಾಮದ ಅಡುಗೆ ಭಟ್ಟರಿಗೆ ಪ್ರಸಿದ್ದ ಸಿನಿಮಾ ನಟರು, ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳ ಮನೆಯ ಕಾರ್ಯಕ್ರಮದಲ್ಲೂ ಅಡುಗೆ ಮಾಡಲು ಆಹ್ವಾನ ಬರುತ್ತದೆ. ಹೈದರಾಬಾದ್​ನಲ್ಲಿ ನಟ ಚಿರಂಜೀವಿ ಅವರ ಮಗಳ ಮದುವೆ, ದೊಡ್ಡ ದೊಡ್ಡ ನಗರಗಳಲ್ಲಿ ನಡೆಯುವ ಎಗ್ಜಿಬಿಷನ್​ಗಳು, ದೊಡ್ಡ ದೊಡ್ಡ ರಾಜಕೀಯ ಸಮಾರಂಭಗಳು ಹೀಗೆ ಎಲ್ಲದಕ್ಕೂ ಕೂಡಾ ಈ ಗ್ರಾಮದ ಅಡುಗೆ ಭಟ್ಟರಿಗೆ ಡಿಮ್ಯಾಂಡ್​ ಇದೆ. ಇನ್ನು ಆಯುಧಪೂಜೆ, ದೀಪಾವಳಿಗಳಂತ ಹಬ್ಬಗಳು ಬಂದರಂತು ಬೆಮೆಲ್​ ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳೂ ಸಿಹಿ ತಿಂಡಿಗಳನ್ನು ಮಾಡಿಕೊಡುವಂತೆ ಮುಗಿಬೀಳ್ತಾವೆ.

Also Read: ಕೋಲಾರ ಜಿಲ್ಲೆಯಲ್ಲೂ ಸರ್ಕಾರಿ ಭೂ ಅಕ್ರಮಗಳ ತನಿಖೆಗಿಳಿದ ತಹಶೀಲ್ದಾರುಗಳ​ ತಂಡ

ಒಟ್ಟಾರೆ ಈ ಗ್ರಾಮದ ಜನರು ಅಡುಗೆ ಕೆಲಸ ಮಾಡಿಕೊಂಡು ಸಮೃದ್ದವಾಗ ಜೀವನ ನಡೆಸಿಕೊಂಡು ಅಡುಗೆ ವೃತ್ತಿಯನ್ನೇ ಇಷ್ಟ ಪಟ್ಟು, ಶ್ರದ್ದೆಯಿಂದ ಮಾಡಿಕೊಂಡು ಬರುತ್ತಿದ್ದು ಅದಕ್ಕೆ ತಕ್ಕಂತೆ ಕೇವಲ ಕೋಲಾರ ಜಿಲ್ಲೆಯಲ್ಲಷ್ಟೆ ಅಲ್ಲದೆ ಬೇರೆ ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯಗಲ್ಲೂ ಕೂಡಾ ಪ್ರಸಿದ್ದಿ ಪಡೆಯುವ ಮೂಲಕ ದೊಡ್ಡ ಅಡುಗೆ ಭಟ್ಟರ ಗ್ರಾಮ ದೊಡ್ಡೂರು ಪ್ರಸಿದ್ದಿ ಪಡೆದಿದೆ.

ಕೋಲಾರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ