Cyber Fraud: ಕೆಜಿಎಫ್ -ಅನಾಮಧೇಯ ವ್ಯಕ್ತಿ ಕಳಿಸಿದ ಆಮಿಷದ ಲಿಂಕ್ ಒತ್ತಿ, ಜಸ್ಟ್ 15 ಲಕ್ಷ ರೂ ಕಳೆದುಕೊಂಡ!
KGF: ಅನಾಮಧೇಯ ವ್ಯಕ್ತಿ ಹೇಳಿದ್ದನ್ನು ನಂಬಿದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ಗೆ ಬಂದ ಲಿಂಕ್ ಅನ್ನು ಒತ್ತಿದ ಪರಿಣಾಮ ತಮ್ಮ ಬ್ಯಾಂಕ್ ಖಾತೆಯಿಂದ 15 ,27,400 ರೂ ಕಳೆದುಕೊಂಡಿರುವ ಘಟನೆ ಕೋಲಾರದ ಕೆಜಿಎಫ್ ನಗರದಲ್ಲಿ ನಡೆದಿದೆ.
ಕೋಲಾರ, ಆಗಸ್ಟ್ 4: ಫೋನ್ ಪೇ ಲಿಂಕ್ ಒತ್ತಿದರೆ ತಿಂಗಳಿಗೆ ೫೦ ಸಾವಿರ ರೂ ಆದಾಯ ಬರುವುದಾಗಿ ಅನಾಮಧೇಯ ವ್ಯಕ್ತಿ (Anonymous person) ಹೇಳಿದ್ದನ್ನು ನಂಬಿದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ಗೆ ಬಂದ ಲಿಂಕ್ ಅನ್ನು ಒತ್ತಿದ ಪರಿಣಾಮ ತಮ್ಮ ಬ್ಯಾಂಕ್ ಖಾತೆಯಿಂದ 15 ,27,400 ರೂ ಕಳೆದುಕೊಂಡಿರುವ ಘಟನೆ (Cyber Fraud) ಕೋಲಾರದ ಕೆಜಿಎಫ್ (KGF) ನಗರದಲ್ಲಿ ನಡೆದಿದೆ.
ಕೆಜಿಎಫ್‌ನ ಸುಭಾಷ್ ನಗರದ ಮುರುಗನ್ ಮೊಬೈಲ್‌ಗೆ 926353322 ಸಂಖ್ಯೆಯ ಮೊಬೈಲ್‌ನಿಂದ ಕರೆ ಮಾಡಿದ ಅನಾಮಧೇಯ ವ್ಯಕ್ತಿ ಮೊದಲಿಗೆ ತಾನು ಟಿಜೆಸಿ ಕಾರ್ಪೋರೇಟ್ ಕಂಪನಿಯ ರೀಜನಲ್ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ.
ನಂತರ ನಿಮಗೆ ತಿಂಗಳಿಗೆ ೫೦ ಸಾವಿರ ರೂ ಆದಾಯ ಬರುವಂತೆ ಮಾಡುತ್ತೇವೆ. ನೀವು ಜಸ್ಟ್ ಈ ಫೋನ್ ಪೇ ಲಿಂಕ್ ಮೂಲಕ ಲಾಗಿನ್ ಆಗಿ ಎಂದು ಲಿಂಕ್ ಕಳುಸಿದ್ದಾನೆ. ಹಿಂದೆಮುಂದೆ ನೋಡದೆ, ಯೋಚಿಸದೆ ಮರುಳಾದ ಮುರುಗನ್ ಆ ಲಿಂಕ್ ಅನ್ನು ಓಪನ್ ಮಾಡಿಬಿಟ್ಟಿದ್ದಾರೆ.
ಇದನ್ನೂ ಓದಿ: PSI ನೇಮಕಾತಿ ಅಕ್ರಮ ಪ್ರಕರಣ: ಮರು ಪರೀಕ್ಷೆಯೇ ಸೂಕ್ತ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್
ಆ ಕಡೆಯಿಂದ ಅನಾಮಧೇಯ ವ್ಯಕ್ತಿ ಆ ಘಳಿಗೆಗಾಗಿಯೇ ಕಾಯುತ್ತಿದ್ದವನಂತೆ ಆ ಸಂದರ್ಭವನ್ನೇ ಬಳಸಿಕೊಂಡು ಫೋನ್ ಪೇ ಮುಖಾಂತರ ಹಂತ ಹಂತವಾಗಿ ಒಂದು ತಿಂಗಳಿನಿಂದ ೧೫,೨೭,೪೦೦ ರೂಗಳನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ!
ಕೊನೆಗೂ ಪ್ರಕರಣವು ಕೆಜಿಎಫ್ ಸೈಬರ್ ಕ್ರೈಂ ಪೊಲೀಸರಿಗೆ ತಲುಪಿದ್ದು ಅವರೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೆಜಿಎಫ್‌ನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿದಿದೆ.
ಕೆಜಿಎಫ್ ವರದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ