ಎಂಟು ವರ್ಷ ಶ್ವಾನದಳದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಏಂಜಲ್​ಗೆ ಅದ್ದೂರಿ ಬೀಳ್ಕೊಡುಗೆ

ಎಂಟು ವರ್ಷಗಳ ಕಾಲ ಪೊಲೀಸ್ ಶ್ವಾನದಳದಲ್ಲಿ ಕರ್ತವ್ಯ ನಿರ್ವಹಿಸಿ ಇಂದು ನಿವೃತ್ತಿ ಹೊಂದಿರುವ ಏಂಜಲ್​ ಶ್ವಾನವನ್ನು ಎಸ್​ಪಿ ಧರಣಿದೇವಿ ಸ್ಮಾನಿಸಿ ಬೀಳ್ಕೊಟ್ಟಿದ್ದಾರೆ.

ಎಂಟು ವರ್ಷ ಶ್ವಾನದಳದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಏಂಜಲ್​ಗೆ ಅದ್ದೂರಿ ಬೀಳ್ಕೊಡುಗೆ
ಏಂಜಲ್​ಗೆ ಅದ್ದೂರಿ ಬೀಳ್ಕೊಡುಗೆ

Updated on: May 01, 2023 | 2:03 PM

ಕೋಲಾರ: ಜಿಲ್ಲೆಯ ಕೆಜಿಎಫ್ ಪೊಲೀಸರು ನಿವೃತ್ತಿ ಹೊಂದಿದ ಹೆಣ್ಣು ಶ್ವಾನ ಏಂಜಲ್​ಗೆ ಸನ್ಮಾನಿಸಿ ಅದ್ಧೂರಿಯಾಗಿ ಬೀಳ್ಕೊಟ್ಟಿದ್ದಾರೆ. 2015 ಮಾರ್ಚ್ 13ರಂದು ಸೇವೆಗೆ ಸೇರಿದ್ದ ಲ್ಯಾಬ್ರಡಾರ್ ತಳಿಯ ಹೆಣ್ಣು ಶ್ವಾನ ಏಂಜಲ್, ಎಂಟು ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದೆ.

ಏಂಜಲ್​ಗೆ ಅದ್ದೂರಿ ಬೀಳ್ಕೊಡುಗೆ

ಸ್ಫೋಟಕ ಪತ್ತೆಯಲ್ಲಿ ಪರಿಣಿತಿ ಹೊಂದಿದ್ದ ಏಂಜಲ್

ಏಂಜಲ್ ಸ್ಫೋಟಕ ಪತ್ತೆಯಲ್ಲಿ ಪರಿಣಿತಿ ಹೊಂದಿತ್ತು. ಏ.30ರಂದು ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಕರ್ತವ್ಯ ನಿರ್ವಹಿಸಿತ್ತು. ಹಾಗೂ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಉಪರಾಷ್ಟ್ರಪತಿ, ಕೇಂದ್ರದ ಮಂತ್ರಿಗಳು, ಹತ್ತಾರು ಗಣ್ಯ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಏಂಜಲ್ ಕಾರ್ಯ ನಿರ್ವಹಿಸಿದೆ. ಇದೀಗ ಎಂಟು ವರ್ಷಗಳ ಕಾಲ ಪೊಲೀಸ್ ಶ್ವಾನದಳದಲ್ಲಿ ಕರ್ತವ್ಯ ನಿರ್ವಹಿಸಿ ಇಂದು ನಿವೃತ್ತಿ ಹೊಂದಿರುವ ಏಂಜಲ್​ ಶ್ವಾನವನ್ನು ಎಸ್​ಪಿ ಧರಣಿದೇವಿ ಸ್ಮಾನಿಸಿ ಬೀಳ್ಕೊಟ್ಟಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಏಂಜಲ್​ಗೆ ಅದ್ದೂರಿ ಬೀಳ್ಕೊಡುಗೆ

ಕೋಲಾರಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:03 pm, Mon, 1 May 23