ಕೋಲಾರ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಕಿರುಕುಳ, ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ

| Updated By: ಆಯೇಷಾ ಬಾನು

Updated on: May 26, 2022 | 8:17 PM

ಕೋಲಾರ ತಾಲೂಕು ಕಚೇರಿ ಸಿಬ್ಬಂದಿ ದಾಖಲೆಗಳನ್ನ ನೀಡಿಲ್ಲ ಇದರಿಂದ ಮನನೊಂದ ಕೋಲಾರ ತಾಲೂಕು ಪುರಹಳ್ಳಿ ಗ್ರಾಮದ ನಾರಾಯಣಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕೋಲಾರ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಕಿರುಕುಳ, ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ
ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ
Follow us on

ಕೋಲಾರ: ಜಿಲ್ಲೆಯ ಸರ್ಕಾರಿ ತಾಲೂಕು ಕಚೇರಿಯಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ರೈತ ಆತ್ಮಹತ್ಯಗೆ ಯತ್ನಿಸಿದ ಘಟನೆ ಕೋಲಾರದಲ್ಲಿ ನಡೆದಿದೆ. ತನ್ನ ಜಮೀನು ದಾಖಲೆ ನೀಡಲು ಅಧಿಕಾರಿಗಳು ಕಳೆದ 6 ತಿಂಗಳಿನಿಂದ ಪಹಣಿ, ಸೇರಿದಂತೆ ಹಲವು ದಾಖಲೆಗಳನ್ನ ನೀಡದೆ ಸತಾಯಿಸಿದ ಹಿನ್ನೆಲೆ ಇಂದು ಪೆಟ್ರೋಲ್ ಸಮೇತ ತಯಾರಿ ಮಾಡಿಕೊಂಡು ಬಂದಿದ್ದ ರೈತ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕೋಲಾರ ತಾಲೂಕು ಕಚೇರಿ ಸಿಬ್ಬಂದಿ ದಾಖಲೆಗಳನ್ನ ನೀಡಿಲ್ಲ ಇದರಿಂದ ಮನನೊಂದ ಕೋಲಾರ ತಾಲೂಕು ಪುರಹಳ್ಳಿ ಗ್ರಾಮದ ನಾರಾಯಣಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಜಮೀನು ಮಾರಾಟ ಮಾಡಲು ಮೂಲ ದಾಖಲಾತಿಗಳನ್ನು ನೀಡದೆ ಆರು ತಿಂಗಳಿಂದ ಸತಾಯಿಸುತ್ತಿದ್ದ ತಾಲೂಕು ಕಚೇರಿ ಸಿಬ್ಬಂದಿಯ ಕ್ರಮಕ್ಕೆ ಬೇಸತ್ತ ರೈತ ಇಂದು ತಾಲೂಕು ಕಚೇರಿಯ ರೆಕಾರ್ಡ್ ರೂಂನಲ್ಲೆ ಆತ್ಮಹತ್ಯೆಗೆ ಯತಿಸಿದ್ದಾನೆ. ಇನ್ನೂ ಜಿಲ್ಲೆಯ ಬಹುತೇಕ ಸರ್ಕಾರಿ ಕಚೇರಿಗಳ ಪರಿಸ್ಥಿತಿ ಇದೆ ಆಗಿದ್ದು, ಅಧಿಕಾರಿಗಳಿಗೆ ಹಣ ಕೊಟ್ರೂ ಸಹ ಕೆಲಸ ಮಾಡುತ್ತಿಲ್ಲ. ಇದನ್ನೂ ಓದಿ: ಪಕ್ಷದ ಕಚೇರಿಯಲ್ಲಿ ಗಂಗಾಜಲ ಕಳಸ ಪ್ರತಿಷ್ಠಾಪನೆ ಮಹಾಪೂಜೆ ನೆರವೇರಿಸಿದರು ಕುಮಾರಸ್ವಾಮಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರೈತ ನಾರಾಯಣಸ್ವಾಮಿ

ಬದಲಾಗಿ ಬೇಕಂತಲೆ ಸತಾಯಿಸುವುದು, ನಾಳೆ ಬಾ ಎನ್ನುವುದು, ಅದು ಸರಿಯಿಲ್ಲ ಇದು ಬೇಕು ಎಂದು ಕುಂಟು ನೆಪಗಳನ್ನ ಹೇಳಿ ರೈತರನ್ನ ಕಚೇರಿಗಳ ಸುತ್ತಾಡಿಸುತ್ತಾರೆ. ಹಾಗಾಗಿ ಸಾಯಬೇಕು ಅನ್ನಿಸುತ್ತದೆ ಅನ್ನೋ ಆರೋಪಗಳು ಹೆಚ್ಚಾಗಿವೆ. ಇನ್ನೂ ರೈತ ಪೆಟ್ರೋಲ್ ಸುರಿದುಕೊಳ್ಳುತ್ತಿದ್ದನ್ನ ಗಮನಿಸಿದ ಜನರು ಆತನಿಗೆ ಬುದ್ದಿವಾದ ಹೇಳಿ ಅಧಿಕಾರಿಗಳು ಸಿಬ್ಬಂದಿ ಕ್ರಮಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದಲ್ಲದೆ ಸ್ಥಳದಲ್ಲಿದ್ದ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದ್ದಂತೂ ಸುಳ್ಳಲ್ಲ. ಇನ್ನೂ ಕೂಡಲೆ ಸ್ಥಳಕ್ಕೆ ಗಲ್‌ಪೇಟೆ ಪೊಲೀಸರು ಭೇಟಿ ನೀಡಿ ರೈತನ ಮನವೊಲಿಸಿ ರೈತನನ್ನ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಆರ್​ಸಿಬಿಯಿಂದ ಅನಿರೀಕ್ಷಿತ ಕರೆ; ಐಪಿಎಲ್​ಗಾಗಿ ತನ್ನ ಮದುವೆಯನ್ನೇ ಮುಂದೂಡಿದ ರಜತ್ ಮ್ಯಾರೇಜ್​ ಸ್ಟೋರಿಯಿದು

ವರದಿ: ರಾಜೇಂದ್ರ ಸಿಂಹ, ಕೋಲಾರ

Published On - 8:17 pm, Thu, 26 May 22