ಕೋಲಾರ: ದುಬಾರಿಯಾದ ಬಿತ್ತನೆ ಆಲೂಗಡ್ಡೆ; ಸಂಕಷ್ಟಕ್ಕೆ ಸಿಲುಕಿದ ರೈತ
ಎಪಿಎಂಸಿ ಗಳಲ್ಲಿ ಬಿತ್ತನೆ ಬೀಜದ ಬೆಲೆ ಗಗನಕ್ಕೇರಿದೆ. ಈ ಮೊದಲು ಒಂದುವರೆ ಸಾವಿರ ಇದ್ದ ಬಿತ್ತನೆ ಆಲೂಗೆಡ್ಡೆ ಬೆಲೆ ಈಗ ಐದು ಸಾವಿರಕ್ಕೇರಿದೆ. ಅಲ್ಲದೆ ಆಲೂಗಡ್ಡೆ ಬೆಳೆಯಲು ಸೂಕ್ತ ವಾತಾವರಣವಿದೆ ಎಂದು ಹಲವು ರೈತರು ಆಲೂಗಡ್ಡೆಯನ್ನು ಬೆಲೆಯಲು ಮುಂದಾಗಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಬೆಲೆ ಕೂಡ ಜಾಸ್ತಿಯಾಗಿದೆ.
ಕೋಲಾರ: ರಾಜ್ಯದಲ್ಲಿ ಈಗಾಗಲೇ ಬೆಲೆ ಏರಿಕೆ ಬಿಸಿಯಿಂದ ಜನರು ಕಂಗಾಲುತ್ತಿದ್ದಾರೆ. ಈ ನಡುವೆ ರೈತ ಆಲೂಗಡ್ಡೆ ಬೆಲೆ ದಿಢೀರ್ ಏರಿಕೆ ಕಂಡಿದೆ. ಇದರಿಂದ ಆಲೂಗಡ್ಡೆ ಬೆಳೆಗಾರರು ಕಂಗಾಲಾಗಿದ್ದಾರೆ. ಇತ್ತೀಚೆಗೆ ಕೋಲಾರ ಜಿಲ್ಲೆಯಲ್ಲಿ ಸುರಿದ ಬಾರೀ ಮಳೆಯಿಂದ ರೈತರು ಬೆಳೆದ ಬೆಳೆಗಳು ಮಣ್ಣುಪಾಲಾಗಿ ಹೋಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿದ್ದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಇದರಿಂದ ಆಲೂಗಡ್ಡೆಯ ಬೆಲೆ ಮಾರುಕಟ್ಟೆಯಲ್ಲಿ ಏರುತ್ತಲೇ ಇದೆ.
ಈ ನಡುವೆ ಜಿಲ್ಲೆಯ ಬಂಗಾರಪೇಟೆ ಎಪಿಎಂಸಿ ಸೇರಿದಂತೆ ಜಿಲ್ಲೆಯ ಹಲವು ಎಪಿಎಂಸಿ ಗಳಲ್ಲಿ ಬಿತ್ತನೆ ಬೀಜದ ಬೆಲೆ ಗಗನಕ್ಕೇರಿದೆ. ಈ ಮೊದಲು ಒಂದುವರೆ ಸಾವಿರ ಇದ್ದ ಬಿತ್ತನೆ ಆಲೂಗೆಡ್ಡೆ ಬೆಲೆ ಈಗ ಐದು ಸಾವಿರಕ್ಕೇರಿದೆ. ಅಲ್ಲದೆ ಆಲೂಗಡ್ಡೆ ಬೆಳೆಯಲು ಸೂಕ್ತ ವಾತಾವರಣವಿದೆ ಎಂದು ಹಲವು ರೈತರು ಆಲೂಗಡ್ಡೆಯನ್ನು ಬೆಲೆಯಲು ಮುಂದಾಗಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಬೆಲೆ ಕೂಡ ಜಾಸ್ತಿಯಾಗಿದೆ. ಅಲೂಗೆಡ್ಡೆ ವ್ಯಾಪಾರಿಗಳು ಹಾಗೂ ದಳ್ಳಾಳಿಗಳು ರೈತರ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ರೈತರಿಂದ ಬಿತ್ತನೆ ಆಲೂಗೆಡ್ಡೆಗೆ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ ಎಂದು ರೈತರು ಆರೋಪ ಮಾಡುತ್ತಿದ್ದು ಜಿಲ್ಲಾಡಳಿತ ಬಿತ್ತನೆ ಆಲೂಗೆಡ್ಡೆಗೆ ದರ ನಿಗದಿ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕೋಲಾರ ಜಿಲ್ಲೆಗೆ ಪಂಜಾಬ್‌ನ ಜಲಂದರ್‌ನಿಂದ ಬಿತ್ತನೆ ಆಲೂಗಡ್ಡೆ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗೆ ಆಮದು ಮಾಡಿಕೊಂಡ ಆಲೂಗಡ್ಡೆಗೆ ವ್ಯಾಪಾರಸ್ಥರು ಕ್ವಿಂಟಾಲ್ಗೆ 4000-5000 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ವ್ಯಾಪಾರಸ್ಥರು ಮಾರಾಟ ಮಾಡುವ ಬಿತ್ತನೆ ಆಲೂಗಡ್ಡೆಯನ್ನು ಮಾರಾಟ ಮಾಡುವಾಗ ರೈತರಿಗೆ ನೀಡುವ ಬಿಲ್ನಲ್ಲಿ ಅದು ಬಿತ್ತನೆ ಆಲೂಗಡ್ಡೆ ಎಂದು ನೀಡುವ ಬದಲಾಗಿ, ಆಲೂಗಡ್ಡೆ ಎಂದು ನೀಡುತ್ತಾರೆ ಇದರಿಂದ ರೈತರು ಕಳಪೆ ಬಿತ್ತನೆ ಆಲೂಗಡ್ಡೆ ಪಡೆದು ಮೋಸ ಹೋಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬಿತ್ತನೆ ಆಲೂಗಡ್ಡೆ ಮೇಲೆ ತೋಟಗಾರಿಕಾ ಇಲಾಖೆ ನಿಯಂತ್ರಣ ಸಾಧಿಸಬೇಕು ಎನ್ನು ಕೂಗು ಕೇಳಿಬರುತ್ತಿದೆ. ಈ ಮಧ್ಯೆ ಏಕಾಏಕಿ ಆಲೂಗಡ್ಡೆ ಬೆಲೆ ಏರಿಕೆಗೆ ಸರಿಯಾದ ಕಾರಣ ತಿಳಿಯದೆ ತೋಟಗಾರಿಕೆ ಇಲಾಖೆ ಕೂಡ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಗಾಯತ್ರಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗು ಅಕಾಲಿಕ ಮಳೆಯಿಂದ ಕಂಗೆಟ್ಟು ಸಾಲದ ಸುಳಿಗೆ ಸಿಲುಕಿರುವ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕುವ ಮೊದಲು ಜಿಲ್ಲಾಡಳಿತ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದು ರೈತರ ಆಗ್ರಹವಾಗಿದೆ.
ವರದಿ : ರಾಜೇಂದ್ರ ಸಿಂಹ