ಹಿಟ್ ವಿಕೆಟ್ ಆದ್ರಾ ವರ್ತೂರು ಪ್ರಕಾಶ್! ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಭರದಲ್ಲಿ ಯಡವಟ್ಟು ಮಾಡಿಕೊಂಡ್ರಾ? ಏನದು ಗುಪ್ತ್ ಗುಪ್ತ್ ಮಾತುಕತೆ?
ವಿಧಾನಸಭೆ ಪ್ರವೇಶ ಮಾಡಬೇಕು ಅಂದ್ರೆ ಎಣ್ಣೆ ಹೊಡೆಯಬೇಕು, ನಾನ್ ವೆಜ್ ತಿನ್ನಬೇಕು, ಇಲ್ಲಾ ಅಂದ್ರೆ ಊಟ ಸಿಗಲ್ಲ - ವರ್ತೂರು ಪ್ರಕಾಶ್ ಅವರ ಈ ದೂರವಾಣಿ ಚರ್ಚೆ ಈಗ ಸಖತ್ ಚರ್ಚೆಗೆ ಗ್ರಾಸವಾಗಿದೆ.
ವಿಧಾನಸಭೆ ಪ್ರವೇಶ ಮಾಡಬೇಕು ಅಂದ್ರೆ ಎಣ್ಣೆ ಹೊಡೆಯಬೇಕು, ನಾನ್ ವೆಜ್ ತಿನ್ನಬೇಕು, ಇಲ್ಲಾ ಅಂದ್ರೆ ಊಟ ಸಿಗಲ್ಲ – ವರ್ತೂರು ಪ್ರಕಾಶ್ ಅವರ ಈ ದೂರವಾಣಿ ಚರ್ಚೆ ಈಗ ಸಖತ್ ಚರ್ಚೆಗೆ ಗ್ರಾಸವಾಗಿದೆ. ವಿಧಾನಸಭೆಗೆ (Karnataka Assembly Elections 2023) ಹೋಗಬೇಕು ಅಂದ್ರೆ ಕುಡಿಯೋದು ತಿನ್ನೋದು ಇರಲೇಬೇಕು ಸರ್, ಎಣ್ಣೆ ಹೊಡೆಯೋದು, ನಾನ್ ವೆಜ್ ತಿಂದಿಲ್ಲ ಅಂದ್ರೆ ರಾಜಕೀಯದಲ್ಲಿ ಊಟ ಸಿಗಲ್ಲ ಸರ್ ಎಂದು ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಗೂ ಮೊದಲು ಯಾರದೋ ಜೊತೆಗೆ ಪೋನ್‌ನಲ್ಲಿ ಮಾತುಕತೆ ನಡೆಸಿದ ವರ್ತೂರ್ ಪ್ರಕಾಶ್ (Varthur Prakash) ಪೋನ್ ನಲ್ಲಿ ಹೀಗೆ ಗುಪ್ತ್ ಗುಪ್ತ್ ಮಾತುಕತೆ ನಡೆಸಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ (Siddaramaiah) ಸ್ಪರ್ಧೆ ವಿರುದ್ಧ ಮಾತಾಡುವ ಭರದಲ್ಲಿ (Mobile) ಯಡವಟ್ಟು ಮಾಡಿಕೊಂಡ್ರಾ ವರ್ತೂರು? ಹಿಟ್ ವಿಕೆಟ್ ಆದ್ರಾ!? ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಸುಂಟರಗಾಳಿ ಬೀಸಿದೆ. ಜೊತೆಗೆ ವರ್ತೂರು ಪ್ರಕಾಶ್ ಇನ್ನೂ ಸಾಕಷ್ಟು ನಾನ್ ವೆಜ್ ಮಾತುಕತೆ ನಡೆಸಿರುವುದು ಅಸೆಂಬ್ಲಿ ಚುನಾವಣೆ ಎದುರಿಗೆ ಇರುವಾಗ ರಾಜಕೀಯ ಚರ್ಚೆಗೆ ಒಗ್ಗರಣೆ ಹಾಕಿದಂತಿದೆ.
ಆ ಕಡೆ ವರ್ತೂರ್ ಪ್ರಕಾಶ್ ಅವರ ಜೊತೆಗೆ ಮಾತನಾಡಿದ್ದು ಯಾರು ಅನ್ನೋದು ಗೊತ್ತಿಲ್ಲವಾದ್ರು ಫೋನ್ ನಲ್ಲಿ… ವಿಧಾನಸಭೆಗೆ ಹೋಗಬೇಕು ಅಂದ್ರೆ ಕುಡಿಯೋದು ತಿನ್ನೋದು ಇರಲೇಬೇಕು ಸರ್. ಎಣ್ಣೆ ಹೊಡೆಯೋದು, ನಾನ್ ವೆಜ್ ತಿಂದಿಲ್ಲ ಅಂದ್ರೆ ರಾಜಕೀಯದಲ್ಲಿ ಊಟ ಸಿಗಲ್ಲ ಸರ್ ಎಂದಿದ್ದಾರೆ ವರ್ತೂರ್ ಪ್ರಕಾಶ್. ಮುಂದುವರಿದು ಮಾತನಾಡುತ್ತಾ ನಾನು ಉತ್ತರ ಕರ್ನಾಟಕ ಗದಗ ಹಾಗೂ ಹುಬ್ಬಳಿ ಜಿಲ್ಲೆಯಲ್ಲಿ 12 ಜನ ಲಿಂಗಾಯತ ಶಾಸಕರು ಇದ್ದಾರೆ, ಒಬ್ಬೊಬ್ಬರು ಒಂದು ಕೆ.ಜಿ. ಮಾಂಸ ತಿನ್ನುತ್ತಾರೆ, ಅವರೆಲ್ಲಾ ನನ್ನ ಫ್ರೆಂಡ್ಸ್ ಸರ್. ಅಲ್ಲದೆ ಅವರು ಒಬ್ರು ಲೇಬರ್ ಮಿನಿಸ್ಟರ್ ಆಗಿದ್ದಾರೆ. ನೋಡಿ ಒಬ್ಬ ಬ್ರಾಹ್ಮಣ ಅವರು ಒಂದೂವರೆ ಕೆಜಿ ತಿನ್ನುತ್ತಾರೆ. ನಾನೆ ಹಾಕಿ ಕೊಡ್ತೀನಿ ಎಂದು ದೂರವಾಣಿಯಲ್ಲಿ ಮಾತನಾಡುತ್ತಾರೆ. ಹಂಗ ನೋಡಿದ್ರೆ ನೀವೊಬ್ಬರೇ ಎಣ್ಣೆ ಹೊಡೆಯದೆ, ಮಾಂಸ ತಿನ್ನದೆ ರಾಜಕೀಯದಲ್ಲಿ ಗೆಟಾನ್ ಆಗಿದ್ದು ಸರ್ ಎನ್ನುತ್ತಾರೆ ವರ್ತೂರು.
ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗುತ್ತಾರಾ ವರ್ತೂರು ಪ್ರಕಾಶ್?
ಇನ್ನು ಸದ್ಯ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡೋ ಸಲುವಾಗಿ ಸಖತ್ ಸದ್ದು ಮಾಡುತ್ತಿದ್ದು ಸಿದ್ದರಾಮಯ್ಯ ಅವರಿಗೆ ಪ್ರಬಲ ಪ್ರತಿಸ್ಪರ್ಧಿ ಎನ್ನಲಾಗುತ್ತಿರುವ ವರ್ತೂರ್ ಪ್ರಕಾಶ್ ಅವರು ಸರ್ ನಾನು ಸಿದ್ದರಾಮಯ್ಯ ವಿರುದ್ದ 50 ಸಾವಿರ ಲೀಡಲ್ಲಿ ಗೆಲ್ಲಲಿಲ್ಲ ಅಂದ್ರೆ ನಿಮಗೆ ಮುಖ ತೋರಿಸಲ್ಲ ಎಂಬ ಮಾತು ಸೇರಿಸಿ ದೂರವಾಣಿ ಕರೆ ಕಟ್ ಮಾಡುತ್ತಾರೆ. ಅಷ್ಟೆಲ್ಲಾ ಆದ ಮೇಲೆ ಆ ಕಡೆ ಇವರ ಜೊತೆಗೆ ಮಾತನಾಡಿದ್ದು ಯಾರು? ಅನ್ನೋದು ಸದ್ಯದ ಕುತೂಹಲವಾಗಿದೆ. ಇನ್ನು ಅಸೆಂಬ್ಲಿ ಚುನಾವಣೆ ಎದುರಿಗೇ ಇರುವಾಗ ಬಿಜೆಪಿ ಘಟಾನುಘಟಿಗಳ ಬಗ್ಗೆಯೇ ಹೀಗೆ ಮಾತನಾಡಿರುವುದರಿಂದ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗುತ್ತಾರಾ ವರ್ತೂರು ಪ್ರಕಾಶ್.
ವರದಿ: ರಾಜೇಂದ್ರ ಸಿಂಹ, ಟಿವಿ9, ಕೋಲಾರ