Agriculture: ವ್ಯವಸಾಯ ಮಾಡಬೇಕೆಂಬ ಎಂಜಿನಿಯರ್ ಪತಿಯ ಒತ್ತಾಸೆಗೆ ಪತ್ನಿ ಕೈಗೊಂಡ ವಿಭಿನ್ನ ಕೃಷಿ ಪ್ರಯೋಗ ಏನು ಗೊತ್ತಾ!?
ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ತನ್ನ ಪತಿಯ ಕನಸು ನನಸು ಮಾಡಲು ರೈತಳಾದ ಮಹಿಳೆ. ಕೃಷಿಯಿಂದ ಆದಾಯವಿಲ್ಲದಿದ್ದರೂ, ಹೈನುಗಾರಿಕೆಯಿಂದಲೂ ಲಾಭದ ನಿರೀಕ್ಷೆಯನ್ನು ಬಿಟ್ಟು ಬೇಸಾಯ ಮಾಡುತ್ತಾ, ಕೃಷಿಯಲ್ಲಿ ಖುಷಿ ಕಂಡುಕೊಂಡಿರುವ ಆ ಮಹಿಳೆಯ ತನ್ನ ಇಳಿ ವಯಸ್ಸಿನಲ್ಲೂ ವ್ಯವಸಾಯವನ್ನೇ ತನ್ನ ಉಸಿರಾಗಿಸಿಕೊಂಡಿದ್ದಾರೆ.
ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ತನ್ನ ಪತಿಯ ಕನಸು ನನಸು ಮಾಡಲು ರೈತಳಾದ ಮಹಿಳೆ. ಕೃಷಿಯಿಂದ ಆದಾಯವಿಲ್ಲದಿದ್ದರೂ, ಹೈನುಗಾರಿಕೆಯಿಂದಲೂ ಲಾಭದ ನಿರೀಕ್ಷೆಯನ್ನು ಬಿಟ್ಟು ಬೇಸಾಯ ಮಾಡುತ್ತಾ, ಕೃಷಿಯಲ್ಲಿ ಖುಷಿ ಕಂಡುಕೊಂಡಿರುವ ಆ ಮಹಿಳೆಯ ತನ್ನ ಇಳಿ ವಯಸ್ಸಿನಲ್ಲೂ ವ್ಯವಸಾಯವನ್ನೇ ತನ್ನ ಉಸಿರಾಗಿಸಿಕೊಂಡಿದ್ದಾರೆ.
ವ್ಯವಸಾಯ ಮಾಡಬೇಕೆಂಬ ಹಂಬಲ ಆಸೆಯಿಂದ ಕೃಷಿ ಜಮೀನು ಖರೀದಿ..! ಸಮೃದ್ದವಾಗಿ ಬೆಳೆದು ನಿಂತಿರುವ ಮಾವು, ಕ್ಯಾಪ್ಸಿಕಂನ್ನು ವೀಕ್ಷಣೆ ಮಾಡುತ್ತಿರುವ ಮಹಿಳೆ, ಮತ್ತೊಂದೆಡೆ ತನ್ನ ಅಚ್ಚುಮೆಚ್ಚಿನ ಹಸುಗಳನ್ನ ಖುಷಿಯಾಗಿ ಪೋಷಣೆ ಮಾಡುತ್ತಿರುವ ಆಂಧ್ರ ಮೂಲದ ಈ ಮಹಿಳೆ ಹೆಸರು ಪದ್ಮಾವತಿ. ಹೌದು ಕೋಲಾರ ತಾಲ್ಲೂಕಿನ ಕಾಕಿನತ್ತ ಗ್ರಾಮದ ಬಳಿ 17 ವರ್ಷದ ಹಿಂದೆ 7 ಎಕರೆ ಜಮೀನು ಖರೀದಿ ಮಾಡಿರುವ ಆಂಧ್ರ ಪ್ರದೇಶದ ಕರ್ನೂಲು ಮೂಲದ ಪದ್ಮಾವತಿಯ ಗಂಡ ಪಶ್ಚಿಮ ಬಂಗಾಳದಲ್ಲಿ ಇಂಜಿನಿಯರ್ ಆಗಿದ್ದಾರೆ.
ಆದರೆ ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ತನ್ನ ಪತಿಗೆ ವ್ಯವಸಾಯ ಮಾಡಬೇಕು, ಹೈನುಗಾರಿಕೆ ಮಾಡಬೇಕು ಅನ್ನೋದು ಬಯಕೆ ಆದರೆ ಅವರಿಗೆ ಅದು ಸಾಧ್ಯವಾಗದ ಹಿನ್ನೆಲೆ ತನ್ನ ಗಂಡನ ಆಸೆಯಂತೆ ವ್ಯವಸಾಯದಲ್ಲಿ ಲಾಭ ಇಲ್ಲದಿದ್ರು, ಪತಿಯ ಸಂತೋಷಕ್ಕಾಗಿ ಕೋಲಾರದ ಬಳಿ ಜಮೀನು ಖರೀದಿ ಮಾಡಿ ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ.
ತನ್ನ ಪತಿಯ ಆಸೆ ಈಡೇರಿಸಲು ತಾನು ಕೃಷಿ ಮಾಡಲು ನಿಂತ ರೈತ ಮಹಿಳೆ..! ತನ್ನ ಪತಿಯ ಆಸೆಯಂತ ತಾವು ಖರೀದಿ ಮಾಡಿದ 7 ಎಕರೆ ಭೂಮಿಯಲ್ಲಿ ಟೊಮ್ಯಾಟೊ, ಕ್ಯಾಪ್ಸಿಕಂ, ಮಾವು, ನಿಂಬೆಯಂತಹ ವಾಣಿಜ್ಯ ಬೆಳೆಗಳನ್ನ ಬೆಳೆದಿದ್ದಾರೆ. ತನ್ನ ಭೂಮಿಯಲ್ಲಿ 10 ಬೋರ್‌ವೆಲ್ ಕೊರೆಸಿದ್ದು, ಅದರಲ್ಲಿ ಎರಡರಲ್ಲಿ ಮಾತ್ರ ನೀರು ಸಿಗುತ್ತಿದ್ದು ದೊಡ್ಡ ಕೃಷಿ ಹೊಂಡ ಮಾಡಿಕೊಂಡು ಇದೆ ನೀರನ್ನ ಬಳಿಸಿಕೊಂಡು ವಿವಿಧ ಬೆಳೆಗಳನ್ನ ಬೆಳೆಯುತ್ತಿದ್ದಾರೆ.
ದೂರದೂರಿನಿಂದ ಬರದ ನಾಡಿಗೆ ಬಂದು ಸಮಗ್ರ ವ್ಯವಸಾಯ ಮಾಡುತ್ತಾ ಎಲ್ಲವೂ ಸಾಧ್ಯ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ ಈ ಪದ್ಮಾವತಿ. ವ್ಯವಸಾಯದಿಂದ ಲಾಭ ನಷ್ಟ ಏರು ಪೇರುಗಳಿರುತ್ತವೆ ಆದರೆ ಛಲಬಿಡದೆ ಹಠದಿಂದ ಕೃಷಿಯನ್ನು ಖುಷಿಯಾಗಿ ಮಾಡುತ್ತಿರುವ ಮಹಿಳೆ ಕಾರ್ಯ ನಿಜಕ್ಕೂ ವಿಭಿನ್ನ.
ಪ್ರಗತಿಪರ ರೈತರಿಗೂ ಕಡಿಮೆ ಇಲ್ಲದಂತೆ ಪ್ರಾಯೋಗಿಕ ಕೃಷಿ ಮಾಡುತ್ತಾರೆ ಪದ್ಮಾವತಿ..! ಇನ್ನು ತಮ್ಮ 7 ಎಕರೆ ಭೂಮಿಯಲ್ಲಿ ನಾನಾ ಬಗೆಯ ತರಕಾರಿ ಬೆಳೆಗಳ ಜೊತೆಗೆ ಹೈನುಗಾರಿಕೆ ಮಾಡುತ್ತಾ ಯಶಸ್ವಿ ರೈತ ಮಹಿಳೆಯಾಗಿದ್ದಾರೆ. ರಾಜಾಸ್ಥಾನ, ಬಿಹಾರ ಸೇರಿದಂತೆ ಸ್ಥಳೀಯ 10 ರಿಂದ 15 ಜನ ಕೆಲಸಗಾರರನ್ನು ಇಟ್ಟುಕೊಂಡು ಕೆಲಸ ಮಾಡುತ್ತಾ ಕೃಷಿಯಲಿ ಖುಷಿಯಾಗಿರುವ ಪದ್ಮಾವತಿ, ಸುಮಾರು 30 ಹಸುಗಳನ್ನ ಸಕಾಣಿಕೆ ಮಾಡುತ್ತಿದ್ದಾರೆ.
ಇದರಿಂದ ಪ್ರತಿನಿತ್ಯ 200 ರಿಂದ 300 ಲೀಟರ್ ಹಾಲು ಉತ್ಪಾದನೆ ಮಾಡುತ್ತಾ ಬರುವ ಹಣದಲ್ಲಿ ಕೆಲಸಗಾರರನ್ನ ಪೋಷಣೆ ಮಾಡುತ್ತಿದ್ದಾರೆ. ಪತಿಯ ಇಚ್ಚೆ ಹಾಗೂ ಐಡಿಯಾದಂತೆ ಪ್ರತಿಯೊಂದು ಕೆಲಸವನ್ನು ತಾನೇ ನಿಂತು ಮಾಡುವ ಪದ್ಮಾವತಿ ಇಳಿ ವಯಸ್ಸಿನಲ್ಲೂ ಅಸಾದ್ಯವಾದ ಕೃಷಿಯನ್ನ ಬೆರಗಾಗುವಂತೆ ಮಾಡುತ್ತಿದ್ದಾರೆ. ಅಪರೂಪಕ್ಕೆ ಪತಿ ಫಾರ್ಮ್ ಬಳಿ ಬರುವುದಾದ್ರು ದೃತಿಗೆಡದೆ ಕೃಷಿ ಮಾಡಲುನಿಂತ ಮಹಿಳೆ ಇಂದು ಯಾವ ಪ್ರಗತಿ ಪರ ರೈತರಿಗೂ ಕಡಿಮೆ ಇಲ್ಲದಂತೆ ವ್ಯವಸಾಯ ಮಾಡಿ ಸ್ಥಳೀಯರಿಂದಲೂ ಶಹಬ್ಬಾಶ್ ಗಿರಿ ಪಡೆದುಕೊಂಡಿದ್ದಾರೆ.
ಒಟ್ಟಾರೆ ಕಷ್ಟಪಟ್ಟು ವ್ಯವಸಾಯ ಮಾಡಿ ಚೆನ್ನಾಗಿ ಬದುಕೋದೆ ಕಷ್ಟ ಇಂತಹ ದಿನಗಳಲ್ಲಿ ಪತಿಯ ಕನಸು ನನಸಾಗಿಸುಲು ಕೃಷಿಯಲ್ಲಿ ಖುಷಿಯಾಗಿರುವ ಈಕೆ ಕೃಷಿಗೆಲ್ಲಾ ಒಬ್ಬಳೆ ಪದ್ಮಾವತಿ. ಮನಸ್ಸಿದ್ದರೆ ನಿಜಕ್ಕೂ ಕೃಷಿಯಲ್ಲಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು ಜೊತೆಗೆ ಬದುಕನ್ನು ಖುಷಿ ಖುಷಿಯಾಗಿಟ್ಟುಕೊಳ್ಳಬಹುದು ಅನ್ನೋದಕ್ಕೆ ಪದ್ಮಾವತಿಯವರು ಉತ್ತಮ ಉದಾಹರಣೆ. – ರಾಜೇಂದ್ರ ಸಿಂಹ
Published On - 8:04 pm, Sat, 7 May 22