Kolar: ಪೇಸ್ಬುಕ್​ ಸುಂದರಿ ಹಿಂದೆ ಬಿದ್ದ ಗಂಡ, ಮನನೊಂದು ಪತ್ನಿ ಆತ್ಮಹತ್ಯೆಗೆ ಯತ್ನ

ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದ ಶಶಿಕುಮಾರ್ ಎಂಬಾತ ಪೇಸ್ಬುಕ್​ನಲ್ಲಿ ಪರಿಚಯವಾದ ಹಿಂದೆ ಬಿದ್ದಿದ್ದಾನೆ. ಈ ಸಂಬಂಧ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

Kolar: ಪೇಸ್ಬುಕ್​ ಸುಂದರಿ ಹಿಂದೆ ಬಿದ್ದ ಗಂಡ, ಮನನೊಂದು ಪತ್ನಿ ಆತ್ಮಹತ್ಯೆಗೆ ಯತ್ನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 11, 2023 | 2:59 PM

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದ ಶಶಿಕುಮಾರ್ ಎಂಬಾತ ಕಳೆದ‌ ನಾಲ್ಕೈದು ತಿಂಗಳಿಂದ ಪೇಸ್ಬುಕ್​ನಲ್ಲಿ ಪರಿಚಯವಾದ ಹುಡಗಿಯ ಹಿಂದೆ ಬಿದ್ದಿದ್ದು, ಹುಡುಗಿಯ ಜೊತೆಗಿದ್ದ ಪೋಟೋ ಹಾಕಿ ಚಿತ್ರಹಿಂಸೆ ನೀಡುತ್ತಿದ್ದ ಹಿನ್ನಲೆ ಮನನೊಂದ ಪತ್ನಿ ಆಶಾರಾಣಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಮಹಿಳೆಯನ್ನ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆಗೆ ಯತ್ನ

ಕೋಲಾರ: ಜಿಲ್ಲೆಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಗ್ರಾಮದ ರಾಮರೆಡ್ಡಿ ಎಂಬುವವರಿಗೆ ಸೇರಿದ ಹಸುವಿನ ಕರು ಮೇಲೆ ಷಫೀ ಉಲ್ಲಾ(50) ಎಂಬಾತನು ಅತ್ಯಾಚಾರ ಮಾಡಿದ್ದಾನೆ. ಈ ಹಿಂದೆ ಕೂಡ ಇತ ಹಸುವಿನ ಮೇಲೆ ಅತ್ಯಾಚಾರ ಮಾಡಿ ಸಿಕ್ಕಿ ಬಿದ್ದಿದ್ದನಂತೆ ಅವಾಗ ಗ್ರಾಮಸ್ಥರೆ ಬುದ್ದಿ ಹೇಳಿ ಸುಮ್ಮನಾಗಿದ್ದರು. ಆದರೆ ಮತ್ತೆ ಆತ ಹಳೆ ಚಾಳಿ ಮುಂದುವರೆಸಿದ್ದಾನೆ. ಇದೀಗ ಅರೋಪಿಯನ್ನ ಬೇತಮಂಗಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:Lyme Disease: ಲೈಮ್ ಕಾಯಿಲೆಯು ಮಾನಸಿಕ ಅಸ್ವಸ್ಥತೆ, ಆತ್ಮಹತ್ಯೆ ಅಪಾಯ ಹೆಚ್ಚಿಸುತ್ತದೆ: ಅಧ್ಯಯನ

ಹಾಡುಹಗಲೇ ರಸ್ತೆಯಲ್ಲಿ ಸಾಗಿದ ಒಂಟಿಸಲಗ; ಕಾಡಾನೆ ಹಾವಳಿಯಿಂದ ರೋಸಿ ಹೋದ ಜನ

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದ ಜನರಿಗೆ ತೊಂದರೆ ಕೊಡುತ್ತಿರುವ ಕಾಡಾನೆಯು ಹೆಚ್ಚಾಗಿ ಜನನಿಬಿಡ ಪ್ರದೇಶ, ರಸ್ತೆಗಳಲ್ಲೇ ಕಾಣಸಿಕೊಳ್ಳುತ್ತದೆ. ಸೊಂಡಿಲಿನಿಂದ ಗೇಟ್ ತಳ್ಳಿ ಓಪನ್ ಮಾಡಿಕೊಂಡು ಕಾಫಿ ತೋಟದ ಗೇಟ್‌ ಮೂಲಕ ರಸ್ತೆಗೆ ಬಂದಿದೆ. ಈ ಒಂಟಿಸಲಗಕ್ಕೆ ಭೀಮಾ ಎಂದು ಹೆಸರಿಟ್ಟಿರುವ ಮಲೆನಾಡು ಭಾಗದ ಜನ ಇದುವರೆಗೂ ಯಾವುದೇ ಪ್ರಾಣ ಹಾನಿ ಮಾಡದ ಒಂಟಿಸಲಗ ಭೀಮಾ ಕಾಫಿ ತೋಟ, ಮನೆಗಳ ಗೇಟ್ ಮೂಲಕವೇ ಸಂಚರಿಸುತ್ತದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ