KC Valley: ಕೋಲಾರದ ಜೀವನಾಡಿ ಕೆರೆಗಳಿಗೆ ಹರಿದ ಕೆಸಿ ವ್ಯಾಲಿ ನೀರು, ಜನರಲ್ಲಿ ಮನೆ ಮಾಡಿದ ಆತಂಕ
ಕೆಸಿ ವ್ಯಾಲಿ ನೀರಿನಿಂದ ಅಂತರ್ಜಲ ವೃದ್ದಿಯಾಗುತ್ತಿದೆ ಅನ್ನೋದು ಒಂದು ಕಡೆ ಸಂತೋಷದ ವಿಷಯ ಆದರೆ ಮತ್ತೊಂದು ಭಾಗದಲ್ಲಿ ಜನರಲ್ಲಿ ಆತಂಕ ಮನೆ ಮಾಡಿದೆ. ಕೋಲಾರ ನಗರಸಭೆ ವ್ಯಾಪ್ತಿಯಲ್ಲಿನ ಮೂರು ಕೆರೆಗಳಿಲ್ಲಿರುವ ಸುಮಾರು 11 ಕ್ಕೂ ಹೆಚ್ಚು ಬೋರ್ವೆಲ್ಗಳ ಮೂಲಕ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ.
ಕೋಲಾರ ಕೆಸಿ ವ್ಯಾಲಿ ನೀರನ್ನು ಜನರು ಬಳಸಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ನೀಡಿದೆ. ಅದನ್ನು ಪ್ರಾಣಿ ಪಕ್ಷಿಗಳು ನೇರವಾಗಿ ಬಳಸದೆ, ಅದು ಕೇವಲ ಅಂತರ್ಜಲ ವೃದ್ದಿಗಾಗಿ ಮಾಡಿದ ಯೋಜನೆ ಎಂದು ಸರ್ಕಾರ ಮನವರಿಗೆ ಮಾಡಿದೆ. ಆದರೆ ಇದೇ ನೀರು ಸದ್ಯ ಕೋಲಾರದ ಜನರು ಬಳಸುವಂತಾಗಿದ್ದು ಮುಂದೆ ಏನೇನು ರೋಗ ರುಜಿನಗಳು ಬರ್ತಾವೋ ಅನ್ನೋ ಆತಂಕ ಜನರಿಗೆ ಎದುರಾಗಿದೆ.
ಇತ್ತೀಚೆಗೆ ಕೋಲಾರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಕೆರೆಗಳೆಲ್ಲಾ ತುಂಬಿ ಹರಿಯುತ್ತಿವೆ. ಅದರಲ್ಲೂ ಕೋಲಾರ ನಗರಕ್ಕೆ ನೀರು ಹರಿಸುವ ಕೆರೆಗಳು ತುಂಬಿವೆ. ಈ ಪರಿಣಾಮ ಕೆರೆಯಲ್ಲಿ ಹಾಕಲಾಗಿದ್ದ ಬೋರ್ ವೆಲ್ ಮೂಲಕ ನಗರಕ್ಕೆ ನೀರು ಸರಬರಾಜು ಮಾಡುವ ಪೈಪ್ಲೈನ್ ಎಲ್ಲಾ ನೀರಿನಲ್ಲಿ ಮುಳುಗಿದೆ. ಆದರೆ ಕೋಲಾರ ಜಿಲ್ಲೆಗೆ ಬೆಂಗಳೂರು ತ್ಯಾಜ್ಯ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ಹರಿಸುತ್ತಿರುವ ಕೆಸಿ ವ್ಯಾಲಿ ನೀರಾವರಿ ಯೋಜನೆ ಜಿಲ್ಲೆಗೆ ವರದಾನವಿದ್ದಂತೆ ಎಂದು ಎಲ್ಲರೂ ಬಾವಿಸಿದ್ದಾರೆ. ಯಾಕಂದ್ರೆ ಪಾತಾಳ ಸೇರಿದ್ದ ಜಿಲ್ಲೆಯ ಅಂತರ್ಜಲವನ್ನು ವೃದ್ದಿಸುವ ಸಲುವಾಗಿ ಮಾಡಲಾಗಿದ್ದ ಯೋಜನೆ ಅನ್ನೋ ಕಾರಣಕ್ಕೆ. ಇದು ಕೇವಲ ಜಿಲ್ಲೆಯ ಅಂತರ್ಜಲವನ್ನು ವೃದ್ದಿಸುವ ಸಲುವಾಗಿ ಮಾತ್ರ ಬಳಸಬೇಕು. ನೇರವಾಗಿ ಕುಡಿಯಲು ಅಥವಾ ವ್ಯವಸಾಯಕ್ಕಾಗಿ ಬಳಸಬಾರದು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಈ ನಿಯಮದ ಪ್ರಕಾರವೇ ಕೆಸಿ ವ್ಯಾಲಿ ನೀರನ್ನು ಹರಿಸಲಾಗುತ್ತಿದೆ.
ಈ ನಡುವೆ ಕೋಲಾರ ನಗರಕ್ಕೆ ನೀರಿ ಒದಗಿಸುವ ಜಿಲ್ಲೆಯ ಜೀವನಾಡಿ ಕೆರೆಗಳಾದ ಅಮ್ಮೇರಹಳ್ಳಿ ಕೆರೆ, ಕೋಲಾರಮ್ಮ ಕೆರೆ ಹಾಗೂ ಮಡೇರಹಳ್ಳಿ ಕೆರೆಗಳಿಗೂ ಇದೇ ಕೆಸಿ ವ್ಯಾಲಿ ನೀರು ತುಂಬಿಸಿದ್ದು, ಈ ಕೆರೆಗಳಲ್ಲಿರುವ ಬೋರ್ ವೆಲ್ಗಳು ಸದ್ಯ ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿವೆ. ಇದೇ ಬೋರ್ವೆಲ್ಗಳ ಮೂಲಕ ಕೋಲಾರ ನಗರಕ್ಕೆ ನಗರಸಭೆ ನೀರು ಸರಬರಾಜು ಮಾಡುತ್ತಿದೆ. ಸದ್ಯ ನಗರದ ಜನರ ಆತಂಕ ಒಂದೇ ನೇರವಾಗಿ ಬಳಸಬಾರದು ಎಂದು ಹೇಳಲಾಗಿದ್ದ ನೀರನ್ನು ನಗರಸಭೆ ಕೋಲಾರ ನಗರದ ಜನರಿಗೆ ಬಳಕೆಗೆ ಸರಬರಾಜು ಮಾಡುತ್ತಿದ್ದು, ಸದ್ಯಕ್ಕೆ ಏನು ಸಮಸ್ಯೆ ಕಂಡು ಬಂದಿಲ್ಲ ಆದರೆ ಈ ನೀರು ಮುಂದೊಂದು ದಿನ ಸಮಸ್ಯೆಯಾಗುವ ಆತಂಕ ಕೋಲಾರ ನಗರದ ಜನರನ್ನು ಕಾಡುತ್ತಿದೆ.
ಕೋಲಾರ ನಗರಕ್ಕೆ ಹರಿಸಲಾಗುತ್ತಿದೆ ಕೆಸಿ ವ್ಯಾಲಿ ನೀರು ಕೆಸಿ ವ್ಯಾಲಿ ನೀರಿನಿಂದ ಅಂತರ್ಜಲ ವೃದ್ದಿಯಾಗುತ್ತಿದೆ ಅನ್ನೋದು ಒಂದು ಕಡೆ ಸಂತೋಷದ ವಿಷಯ ಆದರೆ ಮತ್ತೊಂದು ಭಾಗದಲ್ಲಿ ಜನರಲ್ಲಿ ಆತಂಕ ಮನೆ ಮಾಡಿದೆ. ಕೋಲಾರ ನಗರಸಭೆ ವ್ಯಾಪ್ತಿಯಲ್ಲಿನ ಮೂರು ಕೆರೆಗಳಿಲ್ಲಿರುವ ಸುಮಾರು 11 ಕ್ಕೂ ಹೆಚ್ಚು ಬೋರ್ವೆಲ್ಗಳ ಮೂಲಕ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಇದೇ ನೀರನ್ನು ಜನರು ಬಳಸುತ್ತಿದ್ದಾರೆ. ಸದ್ಯ ಈ ಮೂರು ಕೆರೆಗಳು ಕೆಸಿ ವ್ಯಾಲಿ ನೀರನಿಂದ ತುಂಬಿ ಹರಿಯುತ್ತಿದ್ದು, ಬೋರ್ ವೆಲ್ಗಳಿಗೆ ನೀರು ನೇರವಾಗಿ ಒಳಹೋಗುವ ಸಾಧ್ಯತೆ ಇದೆ, ಯೋಜನೆಯ ಪ್ರಕಾರ ನೈಸರ್ಗಿಕವಾಗಿ ನೀರು ಹಿಂಗುವ ಮೂಲಕ ಅಂತರ್ಜಲ ಸೇರುತ್ತಿಲ್ಲ ಹಾಗಾಗಿ ಈ ನೀರನ್ನು ಬಳಸಿದ್ರೆ ಮುಂದೆ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಧ್ಯತೆ ಇದೆ ಅನ್ನೋದು ನಾಗರೀಕರ ಆತಂಕ.
ನೀರು ಕಲುಷಿತ ಎಂದಾದರೆ ನೀರು ಹರಿಸಲ್ಲ ಎಂದ ಸಚಿವ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೂಡಾ ಇತ್ತೀಚೆಗೆ ಕೋಲಾರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ನೀರನ್ನು ನೇರವಾಗಿ ಬಳಸಬೇಡಿ ಒಮ್ಮೆ ಅಂತರ್ಜಲ ಸೇರಿ ನಂತರ ಮೇಲೆ ಬಂದರೆ ನೀರು ಬಳಸಲು ಯೋಗ್ಯವಾಗುತ್ತದೆ. ಆದ್ರೆ ಕೆಲವರು ಈ ನೀರು ಸರಿ ಇಲ್ಲ ಎಂದು ಆಗಾಗ ಕೋರ್ಟ್ ಮೆಟ್ಟಿಲೇರುತ್ತಾರೆ. ನಾವು ಒಮ್ಮೆ ಇದು ಅಶುದ್ಧ ನೀರು ಎಂದು ಗೊತ್ತಾದರೆ ನೀರನ್ನು ಹರಿಸೋದಿಲ್ಲ ಎಂದು ತಿಳಿಸಿದ್ದಾರೆ.
ಮೂರನೇ ಹಂತದ ಶುದ್ದೀಕರಣ ಮಾಡಿ ಗೊಂದಲ ಹಾಗೂ ಆತಂಕ ನಿವಾರಿಸಿ ಸದ್ಯ ಎರಡು ಹಂತಗಳಲ್ಲಿ ಶುದ್ದೀಕರಣ ಮಾಡಿ ಹರಿಸಲಾಗುತ್ತಿರುವ ಕೆಸಿ ವ್ಯಾಲಿ ನೀರನ್ನು ಮೂರು ಹಂತಗಳಲ್ಲಿ ಶುದ್ದೀಕರಿಸಿ ಹರಿಸಿ ಆಗ ನಮ್ಮ ಎಲ್ಲಾ ಗೊಂದಲ ಹಾಗೂ ಆತಂಕ ದೂರವಾಗುತ್ತದೆ ಎಂದು ಜಿಲ್ಲೆಯ ಜನರ ಬೇಡಿಕೆಯಾಗಿದೆ.
ವರದಿ: ರಾಜೇಂದ್ರಸಿಂಹ
ಇದನ್ನೂ ಓದಿ: ಅಂತರ್ಜಲ ವೃದ್ದಿಸುವ ಕೆಸಿ ವ್ಯಾಲಿ ಯೋಜನೆಯಿಂದ 84 ಕೆರೆಗಳು ಭರ್ತಿ; ನೀರಿನ ಮಟ್ಟ ಹೆಚ್ಚಾಗಲು ಮಳೆರಾಯನ ಸಾಥ್