ಅಕ್ರಮ ಸಂಬಂಧದ ಹಿನ್ನೆಲೆ ಕೋಲಾರದಲ್ಲಿ ಯೂತ್ ಕಾಂಗ್ರೆಸ್ ಮುಖಂಡನ ಬರ್ಬರ ಕೊಲೆ

ಸೊಣ್ಣಪ್ಪ ಕಳೆದ ಕೆಲವುದಿನಗಳಿಂದ ಹೊಂಚು ಹಾಕಿ ಬುಧವಾರ ರಾತ್ರಿ ಟೇಕಲ್ ರಸ್ತೆಯ ನಂದಿನಿ ಬಾರ್ನಲ್ಲಿ ಚರಣ್ ಸ್ನೇಹಿತರ ಜೊತೆಗೆ ಕುಡಿಯುತ್ತಿದ್ದಾಗ ಅಲ್ಲಿಗೆ ಚರಣ್ ಫೋನ್ನಲ್ಲಿ ಮಾತನಾಡಲು ಬಾರ್ ನಿಂದ ಹೊರ ಬಂದಾಗ ಚಾಕುವಿನಿಂದ ಇರಿದು ಆತನನ್ನು ಕೊಲೆ ಮಾಡಲಾಗಿದೆ.

ಅಕ್ರಮ ಸಂಬಂಧದ ಹಿನ್ನೆಲೆ ಕೋಲಾರದಲ್ಲಿ ಯೂತ್ ಕಾಂಗ್ರೆಸ್ ಮುಖಂಡನ ಬರ್ಬರ ಕೊಲೆ
ಯೂತ್ ಕಾಂಗ್ರೆಸ್ನ ಜಿಲ್ಲಾ ಕಾರ್ಯದರ್ಶಿ ಚರಣ್ ರಾಜ್
Edited By:

Updated on: May 27, 2022 | 3:36 PM

ಕೋಲಾರ: ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಬುಧವಾರ ರಾತ್ರಿ ಕೋಲಾರ ನಗರದ ಟೇಕಲ್ ರಸ್ತೆಯಲ್ಲಿನ ನಂದಿನಿ ಬಾರ್ ಎದುರು ಹತ್ಯೆ ಮಾಡಲಾಗಿದೆ. ಯೂತ್ ಕಾಂಗ್ರೆಸ್ನ ಜಿಲ್ಲಾ ಕಾರ್ಯದರ್ಶಿ ಚರಣ್ರಾಜ್ ಕೊಲೆಯಾದವರು. ಘಟನೆ ಸಂಬಂಧ ಕೋಲಾರ ನಗರ ಠಾಣಾ ಪೊಲೀಸರು ಹಾಗೂ ಕೋಲಾರ ಎಸ್ಪಿ ಡಿ.ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಸಂಬಂಧ ಶ್ರೀಕಾಂತ್ ಎಂಬುವವನನ್ನು ಬಂಧಿಸಿದ್ದು, ಮತ್ತೊಬ್ಬ ಪ್ರಮುಖ ಆರೋಪಿ ಸೊಣ್ಣಪ್ಪನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೊಲೆಯಾದ ಚರಣ್, ರತ್ನ ಹಾಗೂ ಪ್ರಮೀಳ ಇಬ್ಬರನ್ನು ಮದುವೆಯಾಗಿದ್ದ ಎನ್ನಲಾಗಿದ್ದು ಕೆಲವು ತಿಂಗಳುಗಳ ಹಿಂದೆ ಕೋಲಾರ ತಾಲೂಕು ಮೇಡ್ತಂಬಳ್ಳಿ ಗ್ರಾಮದ ಸೊಣ್ಣಪ್ಪ ಎಂಬುವವರ ಮನೆಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆ ರಾಜಿ ಪಂಚಾಯ್ತಿ ಮಾಡಲು ಹೋಗಿದ್ದ ಚರಣ್, ಸೊಣ್ಣಪ್ಪನಿಂದ ಪತ್ನಿಯನ್ನು ಬೇರೆ ಮಾಡಿ ಆಕೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದರಿಂದ ನೊಂದ ಸೊಣ್ಣಪ್ಪ ಕಳೆದ ಕೆಲವುದಿನಗಳಿಂದ ಹೊಂಚು ಹಾಕಿ ಬುಧವಾರ ರಾತ್ರಿ ಟೇಕಲ್ ರಸ್ತೆಯ ನಂದಿನಿ ಬಾರ್ನಲ್ಲಿ ಚರಣ್ ಸ್ನೇಹಿತರ ಜೊತೆಗೆ ಕುಡಿಯುತ್ತಿದ್ದಾಗ ಅಲ್ಲಿಗೆ ಚರಣ್ ಫೋನ್ನಲ್ಲಿ ಮಾತನಾಡಲು ಬಾರ್ ನಿಂದ ಹೊರ ಬಂದಾಗ ಚಾಕುವಿನಿಂದ ಇರಿದು ಆತನನ್ನು ಕೊಲೆ ಮಾಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಯಾಗಿದೆ ಅನ್ನೋ ಮಾಹಿತಿ ನೀಡಿರುವ ಕೋಲಾರ ಎಸ್ಪಿ ಡಿ.ದೇವರಾಜ್ ಎಲ್ಲಾ ಆರೋಪಿಗಳನ್ನು ಬಂಧಿಸಿದ ನಂತರ ನಿಖರವಾದ ಚಿತ್ರಣ ಸಿಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕುಸಿದು ಬಿದ್ದ ಸರಕಾರಿ ಶಾಲೆಯ ಕೊಠಡಿಯ ಮೇಲ್ಛಾವಣಿ

ವರದಿ: ರಾಜೇಂದ್ರ ಸಿಂಹ, ಕೋಲಾರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ