ಕುಸಿದು ಬಿದ್ದ ಸರಕಾರಿ ಶಾಲೆಯ ಕೊಠಡಿಯ ಮೇಲ್ಛಾವಣಿ
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದಲ್ಲಿನ ಸರ್ಕಾರಿ ಉರ್ದು ಹಾಗೂ ಇಂಗ್ಲಿಷ್ ಮಾಧ್ಯಮಿಕ ಶಾಲೆಯ ಕೊಠಡಿಯ ಮೇಲ್ಛಾವಣಿ ಕುಸಿದು ಬಿದ್ದಿದೆ.
ವಿಜಯಪುರ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದಲ್ಲಿನ ಸರ್ಕಾರಿ ಉರ್ದು ಹಾಗೂ ಇಂಗ್ಲಿಷ್ ಮಾಧ್ಯಮಿಕ ಶಾಲೆಯ ಕೊಠಡಿಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಅದೃಷ್ಟಾವಶಾತ್ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಪಾರ್ಥನೆಗಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೊರಗಿದ್ದ ವೇಳೆ ಶಾಲಾ ಕೊಠಡಿಯ ಮೇಲ್ಛಾವಣಿ ಕುಸಿದು ಬಿದ್ದಿದೆ. ನಿನ್ನೆ (ಮೇ 26) ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಲಾ ಕಟ್ಟಡ ಹಳೆಯದಾಗಿದ್ದರಿಂದ ಕೊಟಡಿಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಸ್ಥಳಕ್ಕೆ ಪುರಸಭೆ ಸದಸ್ಯರು ಹಾಗೂ ಕೆಲ ಪೋಷಕರ ಭೇಟಿ ನೀಡಿದ್ದಾರೆ. ಶಾಲಾ ಕಟ್ಟಡವನ್ನು ದುರಸ್ಥಿ ಮಾಡಬೇಕು ಅಥವಾ ನೂತನ ಕಟ್ಟಡ ನಿರ್ಮಾಣ ಮಾಡಬೇಕು. ಶಾಲಾ ಶಿಕ್ಷಕರ ಹಾಗೂ ಮೇಲಾಧಿಕಾರಿಗಳ ವಿರುದ್ದ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಕಾರವಾರದ ಸೀಬರ್ಡ್ ನೌಕಾನೆಲೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೇಟಿ: ನೌಕಾಪಡೆಯೊಂದಿಗೆ ಯೋಗಾಸನ
ಪೈಪ್ ಲೈನ್ ತೆರವಿಗೆ ಬಂದಿದ್ದ ಮಹಾನಗರ ಪಾಲಿಕೆ ಸಿಬ್ಬಂದಿ ವಿರುದ್ಧ ಜನರ ಆಕ್ರೋಶ
ವಿಜಯಪುರ: ವಿಜಯಪುರ ಮಹಾನಗರದಲ್ಲಿ ರಸ್ತೆಯಲ್ಲಿದ್ದ ಒಳಚರಂಡಿ, ವಿದ್ಯುತ್ ಕಂಬಗಳು ಕುಡಿಯೋ ನೀರಿನ ಪೈಪ್ ಲೈನ್ ತೆರವಿಗೆ ಬಂದಿದ್ದ ಮಹಾನಗರ ಪಾಲಿಕೆ ಸಿಬ್ಬಂದಿಗೆ ಸ್ಥಳಿಯರು ತಡೆದಿದ್ದಾರೆ. ವಿಜಯಪುರ ನಗರದ ಇಬ್ರಾಹಿಂಪುರದ ಸಾರ್ವಜನಿಕರು ಮಾಹಾನಗರ ಪಾಲಿಕೆಯ ತೆರವು ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವಿಜಯಪುರದ ಸಿವಿಲ್ ಕೋರ್ಟ್ ಆದೇಶದಂತೆ ಸರ್ವೇ ನಂಬರ 9999 ನಲ್ಲಿರೋ ಯುಜಿಡಿ, ಲೈಟ್ ಕಂಬಗಳು ಹಾಗೂ ನೀರಿನ ಪೈಪ್ ಲೈನ್ ತೆರವುಗೊಳಿಸಲು ತೆರವು ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ಮಾಡಲು ಆಗಮಿಸಿದ್ದರು.
ಇದನ್ನು ಓದಿ: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ: ಬಂಧನದಿಂದ ಎನ್ಸಿಬಿ ಕ್ಲೀನ್ ಚಿಟ್ವರೆಗೆ ಏನೇನಾಯ್ತು?
ಆದರೆ ಇಡೀ ಇಬ್ರಾಹಿಂಪುರ ಸರ್ವೇ ನಂಬರ್ 309 ರಲ್ಲಿದೆ. ಈ ಭಾಗಕ್ಕೆ ಸಂಪರ್ಕ ಕಲ್ಪಿಸೋ ಸರ್ವೇ ನಂಬರ್ 9999 ಎಲ್ಲಿಂದ ಬರುತ್ತದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಭೂದಾಖಲೆಗಳ ಇಲಾಖೆ ಆಧಿಕಾರಿಗಳು ಸಹ ಸರ್ವೇ ನಂಬರ್ 9999 ಇಲ್ಲಾ ಎಂದು ದಾಖಲೆ ನೀಡಿದ್ದಾರೆ. ಸೂಕ್ತ ದಾಖಲಾತಿಗಳನ್ನು ನೀಡಿ ತೆರವು ಮಾಡಬೇಕೆಂದು ಸ್ಥಳಿಯರ ಪಟ್ಟು ಹಿಡದಿದ್ದಾರೆ. ಸರಿಯಾದ ದಾಖಲಾತಿಗಳು ಇಲ್ಲದ ಕಾರಣ ಗೊಂದಲ ಸೃಷ್ಟಿಯಾಗಿತ್ತು. ಮಹಾನಗರ ಪಾಲಿಕೆಯ ಆಯಕ್ತ ವಿಜಯಕುಮಾರ ಮೆಕ್ಕಳಕಿ ಹಾಗೂ ಆಧಿಕಾರಿಗಳ ಜೊತೆಗೆ ಜನರು ವಾಗ್ವಾದ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ತೆರೆವು ಕಾರ್ಯ ಮಾಡಲು ಬಿಡಲ್ಲಾ ಎಂದು ಜನರು ಪಟ್ಟು ಹಿಡದಿದ್ದಾರೆ. ದಾಖಲಾತಿ ಕೊರತೆಯಿಂದ ತೆರವು ಕಾರ್ಯ ಬಿಟ್ಟು ಮಹಾನಗರ ಪಾಲಿಕೆಯ ಆಧಿಕಾರಿಗಳು, ಸಿಬ್ಬಂದಿ ವಾಪಸ್ ತೆರಳಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Fri, 27 May 22