ಪೊರಕೆಯಿಂದ ಹೊಡೆದು ಜಾತಿನಿಂದನೆ ಆರೋಪ; ಮನ ನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣು

| Updated By: ಆಯೇಷಾ ಬಾನು

Updated on: Sep 21, 2023 | 8:54 AM

ಸ್ನೇಹಿತರೊಬ್ಬರ ಪತ್ನಿ ಬಗ್ಗೆ ಮೃತ ಶ್ರೀನಿವಾಸ್ ಅಸಭ್ಯವಾಗಿ ಮಾತಾಡಿದ ಎಂಬ ಕಾರಣಕ್ಕೆ ಪೊರಕೆಯಿಂದ ಹೊಡೆದು ನಿಂದಿಸಲಾಗಿದೆ. ಹೀಗಾಗಿ ಮನನೊಂದ ಶ್ರೀನಿವಾಸ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಘಟನೆ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮಾಲೂರು ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.

ಪೊರಕೆಯಿಂದ ಹೊಡೆದು ಜಾತಿನಿಂದನೆ ಆರೋಪ; ಮನ ನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣು
ಶ್ರೀನಿವಾಸ್
Follow us on

ಕೋಲಾರ, ಸೆ.21: ಪೊರಕೆಯಿಂದ ಹೊಡೆದು ಜಾತಿನಿಂದನೆ(Caste Abuse) ಮಾಡಲಾಗಿದೆ ಎಂದು ಆರೋಪಿಸಿ ಹಲ್ಲೆಗೊಳಗಾದ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುರುಳಗೆರೆ ಗ್ರಾಮದಲ್ಲಿ ನಡೆದಿದೆ. ಶ್ರೀನಿವಾಸ್ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸ್ನೇಹಿತರೊಬ್ಬರ ಪತ್ನಿ ಬಗ್ಗೆ ಮೃತ ಶ್ರೀನಿವಾಸ್ ಅಸಭ್ಯವಾಗಿ ಮಾತಾಡಿದ ಎಂಬ ಕಾರಣಕ್ಕೆ ಪೊರಕೆಯಿಂದ ಹೊಡೆದು ನಿಂದಿಸಲಾಗಿದೆ. ಹೀಗಾಗಿ ಮನನೊಂದ ಶ್ರೀನಿವಾಸ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಬುಧವಾರ ಸಂಜೆ ಎಣ್ಣೆ ಪಾರ್ಟಿ ಮಾಡುವಾಗ ತನ್ನ ಸ್ನೇಹಿತರ ಬಳಿ ಮಂಜುಳಾ ಎಂಬುವವರ ಬಗ್ಗೆ ಮೃತ ಶ್ರೀನಿವಾಸ್ ಮಾತನಾಡಿದ್ದ. ಆಗ ತನ್ನ ಹೆಂಡತಿ ಬಗ್ಗೆ ಮಾತನಾಡ್ತೀಯ ಎಂದು ಗಂಡ ಅಶೋಕ್ ಹಾಗೂ ಸ್ನೇಹಿತರಾದ ರಮೇಶ್, ಧರ್ಮಂದ್ರ, ಮಂಜು ಎನ್ನುವವರು ಶ್ರೀನಿವಾಸ್​ನ ಹಿಗ್ಗಾಮುಗ್ಗ ಥಳಿಸಿದ್ದರಂತೆ. ಅಲ್ಲದೆ ನಿನ್ನೆ ಅಶೋಕ್ ನ ಪತ್ನಿ ಮಂಜುಳ ಕೂಡಾ ಪೊರಕೆಯಿಂದ ಥಳಿಸಿ, ಪರಿಶಿಷ್ಟ ಜಾತಿ ಹೆಸರೇಳಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಮನ ನೊಂದ ಶ್ರೀನಿವಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮಾಲೂರು ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಚುರುಕುಗೊಂಡ ಸಿಸಿಬಿ ತನಿಖೆ, ಹಲವರಿಗೆ ನೋಟಿಸ್ ಜಾರಿ

ಕೋಲಾರದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆ

ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಪಾರಂಡಹಳ್ಳಿ ರಸ್ತೆಯಲ್ಲಿ ತಡರಾತ್ರಿ ಗಣೇಶ ವಿಸರ್ಜನೆ ವೇಳೆ ಅವಾಚ್ಯ ಶಬ್ದಗಳಿಂದ‌ ನಿಂದಿಸಿದ್ದಾರೆ ಎಂದು ಆರೋಪಿಸಿ ಪೊಲೀಸರ ವಿರುದ್ದ ಸಾರ್ವಜನಿಕರು ಪ್ರತಿಭಟನೆ‌ ಮಾಡಿದ ಘಟನೆ ನಡೆದಿದೆ. ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಿಂದನೆ ಮಾಡಿದ್ದು ಕೆಲಕಾಲ ಪೊಲೀಸರು ಹಾಗೂ ಸಾರ್ವಜನಿಕರ‌ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂತು. ಸಾರ್ವಜನಿಕವಾಗಿ ಕ್ಷಮೆ ಕೇಳಿದ ಬಳಿಕ ಮೆರವಣಿಗೆ ಮುಂದೆ ಹೋಯ್ತು. ಸ್ಥಳಕ್ಕೆ ಕೆಜಿಎಫ್ ಎಸ್ಪಿ ಶಾಂತರಾಜು, ಡಿವೈಎಸ್ ಪಿ ರಮೇಶ್ ಅವರು ಭೇಟಿ ನೀಡಿ ಜನರನ್ನು ಸಾಮಾಧಾನ ಮಾಡಿ ಕಳಿಸಿದರು. ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೋಲಾರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ