Medical negligence| ಹೆರಿಗೆಗೆ ಅಂತಾ ಆಸ್ಪತ್ರೆಗೆ ಹೋಗಿದ್ಲು, ವೈದ್ಯರು ಕೊಟ್ಟ ಇಂಜೆಂಕ್ಷನ್​​ನಿಂದ ಪ್ರಜ್ಞೆ ತಪ್ಪಿದ್ಲು.. 4 ವರ್ಷದಿಂದ ಕೋಮಾದಲ್ಲಿರುವ ಪತ್ನಿಗೆ ಪತಿಯೇ ಸರ್ವಸ್ವ

ಪೋಷಕರ ವಿರೋಧದ ನಡುವೆಯೂ ಇಲ್ಲೊಂದು ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಸಹಜವಾಗೇ ಆರಂಭವಾದ ಅವರ ಪ್ರೀತಿ ಇತರರ ಕಣ್ಣು ಕುಕ್ಕುವಂತ್ತಿತ್ತು. ಆದ್ರೆ ಅದ್ಯಾರ ವಕ್ರ ದೃಷ್ಟಿ ಬಿತ್ತೋ ಗೊತ್ತಿಲ್ಲ, ಇದಕ್ಕಿದ್ದಂತೆ ದಂಪತಿ ಬಾಳಲ್ಲಿ ಅಲ್ಲೋಲ ಕಲ್ಲೋಲವೇ ಎದುರಾಗಿತ್ತು. ಕಳೆದ 4 ವಷಗಳಿಂದಲೂ ಪತ್ನಿ ಕೋಮಾ ಸ್ಥಿತಿಯಲ್ಲಿದ್ದರೆ, ಆಕೆಯನ್ನ ಅಂಗೈಯಲ್ಲಿ ಇಟ್ಟು ಸಾಕುತ್ತಿದ್ದಾನೆ ರಿಯಲ್ ಹೀರೋ ಆ ಪತಿ.

Medical negligence| ಹೆರಿಗೆಗೆ ಅಂತಾ ಆಸ್ಪತ್ರೆಗೆ ಹೋಗಿದ್ಲು, ವೈದ್ಯರು ಕೊಟ್ಟ ಇಂಜೆಂಕ್ಷನ್​​ನಿಂದ ಪ್ರಜ್ಞೆ ತಪ್ಪಿದ್ಲು.. 4 ವರ್ಷದಿಂದ ಕೋಮಾದಲ್ಲಿರುವ ಪತ್ನಿಗೆ ಪತಿಯೇ ಸರ್ವಸ್ವ
ಕೋಮಾದಲ್ಲಿರುವ ಪತ್ನಿಯ ಹಾರೈಕೆ ಮಾಡುತ್ತಿರುವ ರಘು
Follow us
ಆಯೇಷಾ ಬಾನು
|

Updated on:Feb 14, 2021 | 2:49 PM

ಕೋಲಾರ: ಜಿಲ್ಲೆಯ ಮಾಲೂರು ತಾಲೂಕು ದೊಡ್ಡಕಡತೂರು ಗ್ರಾಮದ ರಘು ಮತ್ತು ದಿವ್ಯಾ ಎಂಬ ದಂಪತಿ 8 ವರ್ಷದ ಹಿಂದೆ ಹೆತ್ತವರ ವಿರೋಧದ ನಡುವೆಯೂ ಮದುವೆಯಾಗಿದ್ರು. ನೂರಾರು ಕನಸು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ರು. ಪತ್ನಿಗಾಗಿ ಪತಿ ರಘು ಎಲ್ಲವನ್ನೂ ತ್ಯಾಗ ಮಾಡಿದ್ದ. ಪತ್ನಿಯನ್ನ ಅಂದುಕೊಂಡಂತೆ ಓದಿಸಿದ್ದ ಕೂಡ. ಆದ್ರೆ ಆಸ್ಪತ್ರೆ ಸಿಬ್ಬಂದಿ ಮಾಡಿದ್ದ ಎಡವಟ್ಟಿನಿಂದ ರಘು ಪತ್ನಿ ದಿವ್ಯಾ ಸುಮಾರು 4 ವರ್ಷದಿಂದಲೂ ಕೋಮಾದಲ್ಲಿ ನರಳುವಂತಾಗಿದೆ.

2013 ಮೇ 24 ರಂದು ಧರ್ಮಸ್ಥಳದಲ್ಲಿ ಮದುವೆಯಾಗಿದ್ದ ದಿವ್ಯಾ ಮತ್ತು ರಘು ಬೆಂಗಳೂರಿನ ವರ್ತೂರಿನಲ್ಲಿ ಸಂಸಾರ ನಡೆಸುತ್ತಿದ್ದರು. ನಂತರ ದಿವ್ಯಾಳ ಆಸೆಯಂತೆ ಚೆನ್ನಾಗಿ ಓದಿಸಬೇಕೆಂದು ರಘು ಕಾಲೇಜಿಗೆ ಕಳಿಸಿದ್ರು. ಬಿಎಸ್ಸಿ ಮುಗಿಸಲು ಬೆಂಬಲವಾಗಿ ನಿಂತಿದ್ರು. ಈ ವೇಳೆ ಗರ್ಭಿಣಿಯಾದ ದಿವ್ಯಾಳ ಸಂಸಾರದಲ್ಲಿ ಮತ್ತಷ್ಟು ಸಂತಸ ಹೆಚ್ಚಾಗಿತ್ತು, 2017 ರ ಮಾರ್ಚ್​ 31 ರಂದು ದಿವ್ಯಾ ಹೆರಿಗೆಗೆ ಅಂತಾ ಮಾಲೂರಿನ ಸೇಂಟ್​ ಮೇರಿಸ್​ ಆಸ್ಪತ್ರೆಗೆ ದಾಖಲಾಗಿದ್ರಂತೆ. ಆದರೆ ಈ ವೇಳೆ ಆಸ್ಪತ್ರೆ ಸಿಬ್ಬಂದಿ ಮಾಡಿದ ಎಡವಟ್ಟು ದೊಡ್ಡ ಗಂಡಾಂತರ ಸೃಷ್ಟಿಸಿದೆ. ಅರವಳಿಕೆಯನ್ನ ನೀಡುವಾಗ ಮಾಡಿದ ಎಡವಟ್ಟಿನಿಂದ ಅಂದು ಕೋಮಾ ಸ್ಥಿತಿ ತಲುಪಿದ ದಿವ್ಯಾಗೆ ಇಂದಿಗೂ ಪ್ರಜ್ಞೆ ಬಂದಿಲ್ಲ.

Kolar Medical negligence Leaves woman in coma Lead

ರಘು ಮತ್ತು ದಿವ್ಯಾ

4 ವರ್ಷಗಳ ಹಿಂದೆ ಕೋಮಾ ಸ್ಥಿತಿಗೆ ತಲುಪಿದ ದಿವ್ಯಾಳಿಗಾಗಿ ರಘು ಹಾಗೂ ದಿವ್ಯಾಳ ಪೊಷಕರು ಮಾಡದ ಕೆಲಸವಿಲ್ಲ, ಬೇಡದ ದೇವರಿಲ್ಲ, ಸುತ್ತದ ಆಸ್ಪತ್ರೆಗಳಿಲ್ಲ ಆದರೂ ಪ್ರಯೋಜನವಾಗಿಲ್ಲ. ಹೀಗಿದ್ದರೂ ಪತ್ನಿ ದಿವ್ಯಾಳನ್ನು ಮಗುವಂತೆ ನೋಡಿಕೊಳ್ಳುತ್ತಿರುವ ರಘು ಕಾರ್ಯಕ್ಕೆ ಅಕ್ಕಪಕ್ಕದವರು ಕಂಬನಿ ಮಿಡಿಯುತ್ತಾರೆ.

ಒಟ್ನಲ್ಲಿ ಯಾರೋ ಮಾಡಿದ ತಪ್ಪಿಗೆ ದಂಪತಿ ದಿನವೂ ನರಳುವಂತಾಗಿದೆ. ಒಂದು ಕಡೆ ಪ್ರಜ್ಞೆ ಇಲ್ಲದೆ ನಿತ್ಯವೂ ಒದ್ದಾಡುತ್ತಿರುವ ಪತ್ನಿ. ಮತ್ತೊಂದ್ಕಡೆ ಪತ್ನಿಗೆ ಎದುರಾದ ಸ್ಥಿತಿ ಕಂಡು ಕೊರಗುತ್ತಿರುವ ಪತಿ. ಆದಷ್ಟು ಬೇಗ ದಿವ್ಯಾ ಗುಣಮುಖರಾಗಲಿ, ಮತ್ತೆ ಹಿಂದಿನಂತೆ ಓಡಾಡಲಿ ಎಂಬುದೇ ಎಲ್ಲರ ಆಶಯ.

Kolar Medical negligence Leaves woman in coma Lead

ಕೋಮಾದಲ್ಲಿರುವ ಪತ್ನಿಯ ಹಾರೈಕೆ ಮಾಡುತ್ತಿರುವ ರಘು

ಇದನ್ನೂ ಓದಿ: ಎಲ್ಲರಿಗೂ ಮಾದರಿ ಈ ದಂಪತಿ; ಮದುವೆಯ ದಿನವೇ ಇವರು ಮಾಡಿದ್ದೇನು ಗೊತ್ತಾ?

Published On - 2:47 pm, Sun, 14 February 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್