ಎಲ್ಲರಿಗೂ ಮಾದರಿ ಈ ದಂಪತಿ; ಮದುವೆಯ ದಿನವೇ ಇವರು ಮಾಡಿದ್ದೇನು ಗೊತ್ತಾ?

ಮದುವೆ ಅಂದರೆ ಅದ್ಧೂರಿಯಾಗಿ ಸಂಭ್ರಮದಿಂದ ದಾಂಪತ್ಯ ಜೀವನಕ್ಕೆ ಕಾಲಿಡುವುದು. ಅದರ ಜೊತೆಗೆ ಮದುವೆಗೆ ಬಂದವರಿಗೆ ಭರ್ಜರಿ ಊಟ ಹಾಕಿಸಿ ಸಂಭ್ರಮ ಆಚರಿಸುವುದು ಮಾತ್ರವಲ್ಲ. ಅದರಲ್ಲಿ ಏನಾದರೊಂದು ಸಮಾಜ ಜಾಗೃತಿಯ ಕೆಲಸ‌‌ ಆಗಬೇಕು ಎಂಬುದನ್ನು ಷಣ್ಮುಖ ಸಸಿ‌ ನೆಟ್ಟು ಪರಿಸರ‌ ಕಾಳಜಿ ಸಂದೇಶ ಸಾರುವ ಮೂಲಕ ತೋರಿಸಿಕೊಟ್ಟಿದ್ದಾನೆ. ಇದೊಂದು ಮಾದರಿ ಕೆಲಸ ಎಂದಿದ್ದಾರೆ ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ

ಎಲ್ಲರಿಗೂ ಮಾದರಿ ಈ ದಂಪತಿ; ಮದುವೆಯ ದಿನವೇ ಇವರು ಮಾಡಿದ್ದೇನು ಗೊತ್ತಾ?
ಸಸಿ ನೆಡುತ್ತಿರುವ ದಂಪತಿ
preethi shettigar

| Edited By: Lakshmi Hegde

Dec 26, 2020 | 12:23 PM

ಹಾವೇರಿ: ಮದುವೆ ಎಂದರೆ ಸಾಕು ಸಡಗರಸಂಭ್ರಮ, ಗಂಡು ಮತ್ತು ಹೆಣ್ಣಿನ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯುವ ಹತ್ತು-ಹಲವು ಶಾಸ್ತ್ರಗಳೇ ಕಣ್ಣೆದುರು ಬರುತ್ತವೆ.. ಆದರೆ ಇಂತಹ ಮದುವೆಗಳಲ್ಲೂ ಸಮಾಜಕ್ಕೆ ಮಾದರಿ ಆಗುವ ಕೆಲವೊಂದು ಸಾಮಾಜಿಕ ಕಾರ್ಯಗಳು ಇತ್ತೀಚೆಗೆ ನಡೆಯುತ್ತಿವೆ ಎನ್ನುವುದು ವಿಶೇಷ. ಇಂತಹದ್ದೇ ಒಂದು ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದಿದೆ.

ರಾಣೆಬೆನ್ನೂರು ನಗರದ ಕುಂಬಾರ ಓಣಿಯ ಷಣ್ಮುಖ ಸಾಲಿಮನಿ ಮತ್ತು ಕಾವ್ಯಳ ಮದುವೆ ಕುಂಬಾರ ಓಣಿಯ ಮದುವೆ ಮಂಟಪದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು. ಸಂಪ್ರದಾಯದಂತೆ ಮಂತ್ರ ಘೋಷಗಳ‌ ಸಮೇತ ಷಣ್ಮುಖ ಮತ್ತು ಕಾವ್ಯ ಸತಿಪತಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಆದರೆ ಮದುವೆ ಮುಗಿಸಿ ಬಾಸಿಂಗದ ಸಮೇತ ಮದುವೆ ಮಂಟಪದ ಉದ್ಯಾನವನದಲ್ಲಿ ಸಸಿ ನೆಟ್ಟು ಪರಿಸರ ಜಾಗೃತಿ ಸಂದೇಶವನ್ನು ಸಾರಿ ಮಾದರಿಯಾಗಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ಅಭಿಮಾನಿ ಷಣ್ಮುಖ! ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಅಪ್ಪಟ ಅಭಿಮಾನಿಯಾಗಿರುವ ಷಣ್ಮುಖ ಅವರ ಜನ್ಮ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯ ಸಮಯದಲ್ಲಿ ಏನಾದರೊಂದು ಸಾಮಾಜಿಕ ಸಂದೇಶ ನೀಡಬೇಕು ಎಂಬ ಉದ್ದೇಶದಿಂದ, ಮಂಟಪದ ಸಮೀಪದಲ್ಲಿರುವ ಉದ್ಯಾನವನದಲ್ಲಿ ಸಸಿ ನೆಟ್ಟು ಪರಿಸರ ಉಳಿಸಿ, ಬೆಳೆಸುವಂತೆ ಸಂದೇಶ  ನೀಡಿದ್ದಾರೆ. ಈ ಕಾರ್ಯಕ್ಕೆ ಷಣ್ಮುಖನಿಗೆ ಪತ್ನಿ ಕಾವ್ಯ ಹಾಗೂ ಅವರ ಮನೆಯವರು ಕೂಡ ಸಾಥ್ ನೀಡಿದ್ದಾರೆ.

ಮಾದರಿಯಾದ ಷಣ್ಮುಖ ಸಾಲಿಮನಿ ಜೋಡಿ

ನಾನು ಅಟಲ್‌ಜೀ ಅವರ ಅಪ್ಪಟ ಅಭಿಮಾನಿ. ಅವರ ವೈಚಾರಿಕತೆ, ವ್ಯಕ್ತಿತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಂಡಿದ್ದೇನೆ. ಆದ್ದರಿಂದ ಅವರ ಜನ್ಮದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ. ಅವರ ನೆನಪಿಗಾಗಿ ದಂಪತಿ ಸಮೇತರಾಗಿ ಸಸಿ ನೆಟ್ಟು ವಾಜಪೇಯಿಯವರ ಜನ್ಮದಿನ ಆಚರಿಸಿದ್ದೇವೆ. ಅವರ ಜನ್ಮದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಕ್ಕೆ ಹೆಮ್ಮೆ‌ ಎನಿಸುತ್ತಿದೆ ಎಂದು ಷಣ್ಮುಖ ಸಾಲಿಮನಿ ಸಂತಸ ವ್ಯಕ್ತಪಡಿಸಿದ್ದಾರೆ.

ಮದುವೆ ಅಂದರೆ ಅದ್ಧೂರಿಯಾಗಿ ಸಂಭ್ರಮದಿಂದ ದಾಂಪತ್ಯ ಜೀವನಕ್ಕೆ ಕಾಲಿಡುವುದು. ಅದರ ಜೊತೆಗೆ ಮದುವೆಗೆ ಬಂದವರಿಗೆ ಭರ್ಜರಿ ಊಟ ಹಾಕಿಸಿ ಸಂಭ್ರಮ ಆಚರಿಸುವುದು ಮಾತ್ರವಲ್ಲ, ಅದರಲ್ಲಿ ಏನಾದರೊಂದು ಸಮಾಜ ಜಾಗೃತಿಯ ಕೆಲಸ‌‌ ಆಗಬೇಕು ಎಂಬುದನ್ನು ಷಣ್ಮುಖ ಸಸಿ‌ ನೆಟ್ಟು ಪರಿಸರ‌ ಕಾಳಜಿ ಸಂದೇಶ ಸಾರುವ ಮೂಲಕ ತೋರಿಸಿಕೊಟ್ಟಿದ್ದಾನೆ. ಇದೊಂದು ಮಾದರಿ ಕೆಲಸ ಎಂದು ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ

ಕುಂಬಾರ ಓಣಿಯ ಮದುವೆ ಮಂಟಪಕ್ಕೆ ಬಂದಿದ್ದವರು ನೂತನ ದಂಪತಿಗಳಿಗೆ ಅಕ್ಷತೆ ಹಾಕಿ ಶುಭ ಹಾರೈಸಿದ್ದು, ಜೊತೆಗೆ ಸಸಿ ನೆಡುವ ಕಾರ್ಯದಲ್ಲಿ ಭಾಗಿಯಾದರು. ಮದುವೆ ಸಂಭ್ರಮದ ಜೊತೆಗೆ ಮದುವೆಗೆ ಬಂದಿದ್ದವರು ಪರಿಸರ ಕಾಳಜಿಯ ಸಂದೇಶವನ್ನು ಹೊತ್ತುಕೊಂಡು ಹೋಗಿದ್ದಾರೆ. ಒಟ್ಟಿನಲ್ಲಿ‌ ಮದುವೆ ಅಕ್ಷತೆ, ಹಾರ ಬದಲಾಯಿಸಿಕೊಂಡು ದಾಂಪತ್ಯಕ್ಕೆ ಕಾಲಿಡುವುದಕ್ಕೆ ಮಾತ್ರ ಸೀಮಿತವಾಗಿರದೆ ಈ ಮದುವೆ ಸಸಿ ನೆಟ್ಟು ಪರಿಸರ ಪ್ರೇಮದ ಸಂದೇಶ ಸಾರಿದ್ದು ವಿಶೇಷವಾಗಿತ್ತು.

ಹನಿಮೂನ್​ಗೆ ಹೋಗದೆ.. ಬೀಚ್​ ಕ್ಲೀನ್ ಮಾಡ್ತಾ ಸಮಾಜ ಸೇವೆ ಮಾಡಿದ ನವ ವಧು-ವರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada