ಆಸ್ಪತ್ರೆಗೆ ನುಗ್ಗಿ ಮಹಿಳೆಯ ಸರ ದೋಚಲು ಯತ್ನ: ಸ್ಥಳಿಯರ ಆಕ್ರೋಶ
ಡ್ರಿಪ್ ಹಾಕಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತಿದ್ದ ಅಕ್ಷತಾ ಎಂಬುವವರ ಸರವನ್ನು ಕದಿಯಲು ಕಳ್ಳ ಯತ್ನಿಸಿದ್ದ.

ಮೂಡಿಗೆರೆ ಸರ್ಕಾರಿ ಆಸ್ಪತ್ರೆ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ನುಗ್ಗಿ ಮಹಿಳೆಯ ಸರ ಕಸಿದು ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ. ಆಸ್ಪತ್ರೆಯಲ್ಲೇ ಕಳ್ಳತನ ನಡೆಯುತ್ತಿರುವುದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡ್ರಿಪ್ ಹಾಕಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಅಕ್ಷತಾ ಎಂಬುವವರ ಸರವನ್ನು ಕದಿಯಲು ಕಳ್ಳ ಯತ್ನಿಸಿದ್ದ. ಅಕ್ಷತಾ ಕೂಗಿಕೊಂಡಾಗ ಮೊಬೈಲ್ ತೆಗೆದುಕೊಂಡು ಓಡಿಹೋಗಿದ್ದಾನೆ. ಕಳ್ಳನನ್ನು ಜನರು ಬೆನ್ನಟ್ಟಿದರು. ಆಗ ಮೊಬೈಲ್ ಎಸೆದು ಪರಾರಿಯಾಗಿದ್ದಾನೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಮೋಟ್ ಕೀ ಹ್ಯಾಕ್ ಮಾಡಿ ಕಾರ್ ಕಳ್ಳತನ.. ಖಾಕಿಗೆ ತಲೆನೋವಾದ ಹೈ-ಟೆಕ್ ಖದೀಮರು



