AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರಿಗೆ ಕೊಡಲು ಹಣ ಇಲ್ಲ, ಜಾಹೀರಾತಿಗೆ 200 ಕೋಟಿ ಅನುದಾನ: ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್​ಡಿಕೆ ಆಕ್ರೋಶ

ಕೋಲಾರದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಹೆಚ್​ಡಿ ಕುಮಾರಸ್ವಾಮಿಯವರು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ರಾಜ್ಯದಿಂದ ಕಾಂಗ್ರೆಸ್ ತೆಗೆದುಹಾಕಬೇಕು ಎಂದಿದ್ದಾರೆ. ರೈತರು ನಷ್ಟದಲ್ಲಿದ್ದಾರೆ, ಪರಿಹಾರ ಕೊಡೋಕೆ ಹಣ ಇಲ್ಲ. ಆದರೆ ಜಾಹೀರಾತು ಕೊಡೋಕೆ 200 ಕೋಟಿ ಹಣ ಬಜೆಟ್​ನಲ್ಲಿ ಅನುದಾನ ಪಡೆದಿದ್ದಾರೆ ಎಂದು ಕಿಡಿಕಾರಿದ್ದಾರೆ.

ರೈತರಿಗೆ ಕೊಡಲು ಹಣ ಇಲ್ಲ, ಜಾಹೀರಾತಿಗೆ 200 ಕೋಟಿ ಅನುದಾನ: ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್​ಡಿಕೆ ಆಕ್ರೋಶ
ಹೆಚ್​ಡಿ ಕುಮಾರಸ್ವಾಮಿ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಆಯೇಷಾ ಬಾನು|

Updated on:Feb 26, 2024 | 1:42 PM

Share

ಕೋಲಾರ, ಫೆ.26: ರಾಜ್ಯದ ಜನತೆ ಕಾಂಗ್ರೆಸ್​ನ (Congress) ಕೆಟ್ಟ ಸರ್ಕಾರ ತೆಗೆಯಬೇಕಿದೆ. ಜಾಹೀರಾತು ಕೊಡೋಕೆ ಬಜೆಟ್​ನಲ್ಲಿ 200 ಕೋಟಿ ಅನುದಾನ ಪಡೆಯುತ್ತಾರೆ. ರೈತರು ನಷ್ಟದಲ್ಲಿದ್ದಾರೆ, ಪರಿಹಾರ ಕೊಡೋಕೆ ಹಣ ಇಲ್ಲ. ಜಾಹೀರಾತು ಕೊಡೋಕೆ 200 ಕೋಟಿ ಹಣ ಪಾಸ್ ಮಾಡ್ತಾರೆ. ಜಾಹೀರಾತಿನಲ್ಲಿ ಇರುವ ಕಲರ್ ಫೋಟೋ ನೋಡಿದ್ರೆ ಹೇಸಿಗೆ ಆಗುತ್ತೆ. ಸರ್ಕಾರ ಯಾರಪ್ಪನ ದುಡ್ಡಲ್ಲಿ ಜಾಹೀರಾತು ಕೊಡ್ತಿದ್ದಾರೆ ಎಂದು ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಲೋಕಸಭಾ ಚುನಾವಣೆ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆ ಜೆಡಿಎಸ್ ಭರ್ಜರಿ ತಯಾರಿ ಶುರು ಮಾಡಿದೆ. ಈ ನಡುವೆ ಇಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರು ಕೋಲಾರದಲ್ಲಿ ನಡೆಯುತ್ತಿರುವ ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಅವರ ಸಿರಿಸಮೃದ್ದಿ ಗೋಲ್ಡ್ ಪ್ಯಾಲೇಸ್ ಎರಡನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಹೆಸರು ಸಹ ಕೇಳಿ ಬರ್ತಿದೆ. ಈ ಬಾರಿ ಕೋಲಾರ ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದಾರೆ. ಸೀಟ್ ಹಂಚಿಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಆಗಬೇಕು. ಸಂಸದ ಮುನಿಸ್ವಾಮಿ ಸಹ ನಿರೀಕ್ಷೆ ಇಟ್ಟಿದ್ದಾರೆ, ಅಂತಿಮವಾಗಿ ಪಟ್ಟಿ ಬರಲಿದೆ. ಮುನಿಸ್ವಾಮಿ ಸಹ ಸಮರ್ಥರಿದ್ದಾರೆ ಎಂದರು.

ರಾಜ್ಯ ಕಾಂಗ್ರೆಸ್​ನ ಕೆಟ್ಟ ಸರ್ಕಾರ ತೆಗೀಬೇಕಾಗಿದೆ. ಬಜೆಟ್​ನಲ್ಲಿ ಜಾಹೀರಾತು ಕೊಡೋಕೆ 200 ಕೋಟಿ ಅನುದಾನ ಪಡೆಯುತ್ತಾರೆ. ರೈತರು ನಷ್ಟದಲ್ಲಿದ್ದಾರೆ, ಪರಿಹಾರ ಕೊಡೋಕೆ ಹಣ ಇಲ್ಲ. ರೈತರಿಗೆ ತಲಾ 2 ಸಾವಿರ ಕೊಡ್ತೀವಿ ಅಂತ 620 ಕೋಟಿ ಮೀಸಲಿಟ್ಟಿದ್ದಾರೆ. ಅದರಲ್ಲಿ 75 ಪರ್ಸೆಂಟ್ ಕೇಂದ್ರದ್ದು, 25 ಪರ್ಸೆಂಟ್ ರಾಜ್ಯದ್ದು. ಜಾಹೀರಾತು ಕೊಡೋಕೆ 200 ಕೋಟಿ ಹಣ ಪಾಸ್ ಮಾಡ್ತಾರೆ. ಜಾಹಿರಾತಿನಲ್ಲಿ ಇರುವ ಕಲರ್ ಫೋಟೋ ನೋಡಿದ್ರೆ ಹೇಸಿಗೆ ಆಗುತ್ತೆ. ಸರ್ಕಾರ ಯಾರಪ್ಪನ ದುಡ್ಡಲ್ಲಿ ಜಾಹೀರಾತು ಕೊಡ್ತಿದ್ದಾರೆ. ರೈತರ ಸಾಲಮನ್ನ ಮಾಡಿದ ಬಳಿಕ ನಾನು ಜಾಹೀರಾತು ಎಲ್ಲೂ ಹಾಕಿಲ್ಲ. ಗೃಹಲಕ್ಷ್ಮಿ ಯೋಜನೆಯಲ್ಲಿ ಬೇಕಾದ್ರೆ ಇನ್ನು 2 ಸಾವಿರ ಹೆಚ್ಚಿಗೆ ಕೊಡಲಿ. ಸರ್ಕಾರ ಗ್ಯಾರಂಟಿ ಬಗ್ಗೆ ಕನವರಿಕೆ ಮಾಡಿ ಖಜಾನೆ ಖಾಲಿ ಮಾಡಿಕೊಳ್ತಿದ್ದಾರೆ ಎಂದು ಹೆಚ್​ಡಿಕೆ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Karnataka Budget Session: ರಾಜಾ ವೆಂಕಟಪ್ಪ ನಾಯಕ್ ಜನಪರ ಕಾಳಜಿಯುಳ್ಳ ನಾಯಕರಾಗಿದ್ದರು: ಸಿದ್ದರಾಮಯ್ಯ, ಸಿಎಂ

ಜೆಡಿಎಸ್ ಶಾಸಕರು ಕಾಂಗ್ರೆಸ್​ಗೆ ಹೋಗ್ತಾ ಇರ್ತಾರೆ, ಬರ್ತಾರೆ ತಲೆ ಏಕೆ ಕೆಡಿಸಿಕೊಳ್ಳಬೇಕು. ಡಿಕೆಶಿಗೆ ಹಣ ಹಾಗೂ ಧಮ್ಕಿ ನಲ್ಲಿ ಪೈಪೋಟಿ ಕೊಡೋಕೆ ಆಗುತ್ತಾ? ಯಾರಾದ್ರೂ ಶಾಸಕರು ಆ ರೀತಿ ಹೇಳಿದ್ದಾರ? ಸೆಟಲ್ಮೆಂಟ್ ರಾಜಕಾರಣದಲ್ಲಿ ಪೈಪೋಟಿ ಕೊಡೋಕೆ ನಮ್ಮಿಂದ ಆಗಲ್ಲ. ಗಿಫ್ಟ್ ಹಂಚೋರು ಎಲ್ಲಾ ಬಿಟ್ಟಿದ್ದಾರೆ ಅದರ ಬಗ್ಗೆ ಮಾತಾಡಲ್ಲ. ಚೈನಾದಿಂದ ಖರೀದಿ ಮಾಡಿರುವ ಕುಕ್ಕರ್ ಹಾಗೂ ಡೈನಿಂಗ್ ಸೆಟ್ ಹಂಚುತ್ತಿದ್ದಾರೆ. ಕಾಂಗ್ರೆಸ್ ನವ್ರು 55 ವರ್ಷಗಳಿಂದ ಇದೆ ಪರಿಸ್ಥಿತಿಯಲ್ಲಿಟ್ಟಿದ್ದಾರೆ. ಲೂಟಿ ಹೊಡೆದಿರುವ ಗಿಫ್ಟ್ ಹಂಚಲಾಗ್ತಿದೆ. ಒಳ್ಳೆ ಕೆಲಸ ಮಾಡಿದ್ರೆ ಗಿಫ್ಟ್ ಕೊಡ್ಬೇಕಾ? ಎಂದು ಡಿಸಿಎಂ ಡಿಕೆ ಶಿವಕುಮಾರ್​ಗೆ ಹೆಚ್​ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಇನ್ನು ಕೋಲಾರಕ್ಕೆ ಎತ್ತಿನಹೊಳೆ ಯೋಜನೆ ಕೊಡುವ ವಿಚಾರ ಸಂಬಂಧ ಮಾತನಾಡಿದ ಹೆಚ್​ಡಿಕೆ, ಸಿಎಂ ಸಿದ್ದರಾಮಯ್ಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಟೋಪಿ ಹಾಕಿದ್ದಾರೆ. ಅರಸಿಕೆರಿಗೆ ಕೊಡೋಕೆ ಇನ್ನು 2 ವರ್ಷ ಆಗುತ್ತೆ ಅಂತ ಸಿಎಂ ಹೇಳ್ತಿದ್ದಾರೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:24 pm, Mon, 26 February 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ