AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಕೋಲಾರದ ಸರ್ಕಾರಿ ಕಾಲೇಜು ಆವರಣದಲ್ಲಿ ಪಿಂಕ್ ರೂಂಗೆ ಚಾಲನೆ ಕೊಟ್ಟ ಹೃದಯ ಫೌಂಡೇಶನ್

ಬಾಲಕಿಯರಿಗೆ ತಿಂಗಳ ಋತು ಸಮಯದಲ್ಲಿ ಮನೆಗಳಿಗೆ ಹೋಗುವ ಬದಲು ಶಾಲೆಯಲ್ಲಿಯೇ ಪಿಂಕ್ ರೂಮ್ ಬಳಸಿಕೊಂಡು ಓದಿನ ಮೇಲೆ ಗಮನಹರಿಸಬಹುದು. ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ದೆಹಲಿಯಲ್ಲಿ ಪಿಂಕ್ ರೂಮ್ ಸ್ಥಾಪನೆ ಮಾಡಲಾಗಿದೆ.

ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಕೋಲಾರದ ಸರ್ಕಾರಿ ಕಾಲೇಜು ಆವರಣದಲ್ಲಿ ಪಿಂಕ್ ರೂಂಗೆ ಚಾಲನೆ ಕೊಟ್ಟ ಹೃದಯ ಫೌಂಡೇಶನ್
ಪಿಂಕ್ ರೂಂ
Follow us
TV9 Web
| Updated By: ಆಯೇಷಾ ಬಾನು

Updated on:Nov 27, 2022 | 7:40 AM

ಕೋಲಾರ: ಗ್ರಾಮೀಣ ಪ್ರದೇಶದ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಪಿಂಕ್ ರೂಂಗೆ(Pink Room) ಚಾಲನೆ ನೀಡಲಾಗಿದೆ. ಕೋಲಾರ ತಾಲೂಕಿನ ಮದನಹಳ್ಳಿ ಕ್ರಾಸ್ ಬಳಿಯಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಪ್ರೌಢಶಾಲಾ ವಿಭಾಗದ ಬಾಲಕಿಯರ ವಿಶ್ರಾಂತಿ ಗೃಹ ಅಥವಾ ಪಿಂಕ್ ರೂಂ ಅನ್ನು ಹೃದಯ ಫೌಂಡೇಶನ್(Hrudaya Foundation) ಸಂಸ್ಥಾಪಕ ಆಂಥೋಣಿ ಸುಜ್ಜಿತ್ ಉದ್ಘಾಟಿಸಿದ್ದಾರೆ.

ಗ್ರಾಮೀಣ ಶಾಲೆಗಳಿಗೆ ದೂರದಿಂದ ಬರುವ ಬಾಲಕಿಯರಿಗೆ ತಿಂಗಳ ಋತು ಸಮಯದಲ್ಲಿ ಮನೆಗಳಿಗೆ ಹೋಗುವ ಬದಲು ಶಾಲೆಯಲ್ಲಿಯೇ ಪಿಂಕ್ ರೂಮ್ ಬಳಸಿಕೊಂಡು ಓದಿನ ಮೇಲೆ ಗಮನಹರಿಸಬಹುದು. ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ದೆಹಲಿಯಲ್ಲಿ ಪಿಂಕ್ ರೂಮ್ ಸ್ಥಾಪನೆ ಮಾಡಿದ್ದು, ಆ ರೀತಿಯಲ್ಲಿ ಹೃದಯ ಫೌಂಡೇಶನ್ ವತಿಯಿಂದ ಈ ಭಾಗದಲ್ಲಿ ಪಿಂಕ್ ರೂಂ ನಿರ್ಮಾಣ ಮಾಡಲಾಗಿದೆ. ಇದರ ಸೇವೆಯನ್ನು ಬಾಲಕಿಯರು ಬಳಸಿಕೊಂಡು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಫೌಂಡೇಶನ್ ಸಂಸ್ಥಾಪಕರು ತಿಳಿಸಿದ್ರು. ಗ್ರಾಮದ ಶಾಲೆಗಳನ್ನು ದತ್ತು ಪಡೆದುಕೊಂಡು ಬೇಕಾದ ಎಲ್ಲಾ ರೀತಿಯ ಸೌಲಭ್ಯ, ಸಹಕಾರ ನೀಡಲು ಮುಂದಾಗಿದ್ದೇವೆ, ಹಂತ ಹಂತವಾಗಿ ಶೈಕ್ಷಣಿಕ ಪ್ರಗತಿಗೆ ನಮ್ಮ ಅಳಿಲು ಸೇವೆ ಮುಂದುವರೆಸುವ ಭರವಸೆ ಅವರದ್ದಾಗಿತ್ತು.

ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ

Pink Room

Published On - 7:40 am, Sun, 27 November 22