ಜಿಲ್ಲಾಡಳಿತ ಆದೇಶ ಮೀರಿ ಕೋಲಾರಕ್ಕೆ ಆಗಮಿಸುತ್ತಿದ್ದ ಪ್ರಮೋದ್ ಮುತಾಲಿಕ್ ಪೊಲೀಸರ ವಶಕ್ಕೆ!

TV9 Digital Desk

| Edited By: sandhya thejappa

Updated on:Nov 18, 2021 | 12:49 PM

ಮುತಾಲಿಕ್ ಬಾರದಂತೆ ಜಿಲ್ಲಾಡಳಿತ ನಿಷೇಧ ಹೇರಿ ಆದೇಶ ಹೊರಡಿಸಿದೆ. ಆದರೆ ಪ್ರಮೋದ್ ಮುತಾಲಿಕ್ ಜಿಲ್ಲಾಡಳಿತ ಆದೇಶವನ್ನು ಮೀರಿ ಕೋಲಾರಕ್ಕೆ ಆಗಮಿಸುತ್ತಿದ್ದರು.

ಜಿಲ್ಲಾಡಳಿತ ಆದೇಶ ಮೀರಿ ಕೋಲಾರಕ್ಕೆ ಆಗಮಿಸುತ್ತಿದ್ದ ಪ್ರಮೋದ್ ಮುತಾಲಿಕ್ ಪೊಲೀಸರ ವಶಕ್ಕೆ!
ಪ್ರಮೋದ್ ಮುತಾಲಿಕ್​ನ ಕೋಲಾರ ಗಡಿಯಲ್ಲಿ ತಡೆಹಿಡಿದಿದ್ದಾರೆ

ಕೋಲಾರ: ದತ್ತಮಾಲಾಧಾರಿಗಳ ಮೇಲೆ ಹಲ್ಲೆ ಖಂಡಿಸಿ ಇಂದು (ನ.18) ಕೋಲಾರ ಬಂದ್ ಮಾಡಲಾಗಿದೆ. ಈಗಾಗಲೇ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯುತ್ತಿದ್ದು, ಬೃಹತ್ ರ್ಯಾಲಿ ಆರಂಭವಾಗಿದೆ. ಈ ಬಂದ್​ಗೆ ಬೆಂಬಲಿಸಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ (Pramod Muthalik) ಕೋಲಾರಕ್ಕೆ ಆಗಮಿಸುತ್ತಿದ್ದರು. ಆದರೆ ಪೊಲೀಸರು ಜಿಲ್ಲಾ ಗಡಿಯಲ್ಲೇ ಪ್ರಮೋದ್ ಮುತಾಲಿಕ್​ರನ್ನು ತಡೆದು ವಶಕ್ಕೆ ಪಡೆದಿದ್ದಾರೆ.

ಮುತಾಲಿಕ್ ಬಾರದಂತೆ ಜಿಲ್ಲಾಡಳಿತ ನಿಷೇಧ ಹೇರಿ ಆದೇಶ ಹೊರಡಿಸಿದೆ. ಆದರೆ ಪ್ರಮೋದ್ ಮುತಾಲಿಕ್ ಜಿಲ್ಲಾಡಳಿತ ಆದೇಶವನ್ನು ಮೀರಿ ಕೋಲಾರಕ್ಕೆ ಆಗಮಿಸುತ್ತಿದ್ದರು. ಕೋಲಾರಕ್ಕೆ ಆಗಮಿಸುತ್ತಿರುವ ಮಾಹಿತಿ ತಿಳಿಸುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿಕೊಂಡಿದ್ದರು.

ಇದೇ ವೇಳೆ ಹೇಳಿಕೆ ನೀಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ನ.13 ರಂದು ನಡೆದ ಕೃತ್ಯ ಅತ್ಯಂತ‌ ಘೋರ ಮತ್ತು ಹೇಯ ಘಟನೆ. ಪೊಲೀಸರು ಸ್ವಲ್ಪ ತಡಮಾಡಿದರೂ ಅಂದು ದತ್ತಮಾಲಾಧಾರಿಗಳು ಭಸ್ಮವಾಗುತ್ತಿದ್ದರು. ಅದಕ್ಕೆ ಪೊಲೀಸರಿಗೆ ಧನ್ಯವಾದ ಹೇಳುವೆ. ಆದರೆ ಬಿಜೆಪಿ ಸರ್ಕಾರ ಇಂದು ನಡೆದುಕೊಳ್ಳುತ್ತಿರುವ ಕ್ರಮ ಸರಿಯಿಲ್ಲ. ಹಿಂದೂ ಸಮಾಜದವರು ಮೇಲೆ ದೌರ್ಜನ್ಯ ಮಾಡಿದವರ ಮೇಲೆ ಪ್ರತಿಭಟನೆ ಮಾಡಲು ಸಹ ಸರ್ಕಾರ ಅವಕಾಶ ಮಾಡಿಕೊಡದ ಬಗ್ಗೆ ನೋವು, ಸಿಟ್ಟು ಆಗುತ್ತಿದೆ ಎಂದು ಹೇಳಿದರು.

ಹಿಂದೂಗಳಿಗೆ ಧೈರ್ಯ ತುಂಬಬೇಕಾಗಿದೆ. ಅದೇ ರೀತಿ ಮುಸ್ಲಿಂ ಕೀಡಿಗೇಡಿಗಳಿಗೆ ಎಚ್ಚರಿಕೆ ಕೊಡಬೇಕಾಗಿದೆ. ಸಂವಿಧಾನ ಮತ್ತು ಕಾನೂನು ಬದ್ಧವಾಗಿ ಹೋರಾಟ ಮಾಡಲಾಗುತ್ತಿದೆ. ಇಡೀ ಹಿಂದೂ ಸಮಾಜ ಈ ಘಟನೆ ಖಂಡಿಸಬೇಕಿದೆ ಎಂದು ಕೋಲಾರ ಗಡಿ ರಾಮಸಂದ್ರದಲ್ಲಿ ಮುತಾಲಿಕ್​ ಹೇಳಿದರು.

ಇದನ್ನೂ ಓದಿ

ಮಠದ ಭೂಮಿಯನ್ನು ಶಿಕ್ಷಣ ಸಂಸ್ಥೆಗಳಿಗೆ ಭೂದಾನ ಮಾಡಿದ್ದ ರಾಚೋಟೇಶ್ವರ ಸ್ವಾಮಿ ಲಿಂಗೈಕ್ಯ, ಸಿಎಂ ಬೊಮ್ಮಾಯಿ ಸಂತಾಪ

ಅಪ್ರಾಪ್ತೆ ಬಟ್ಟೆ ಧರಿಸಿದ್ದಾಗ ಆಕೆಯ ಖಾಸಗಿ ಅಂಗ ಸ್ಪರ್ಶಿಸಿದರೂ ಪೋಕ್ಸೋ ಕಾಯ್ದೆಯಡಿಯೇ ಕೇಸ್​ ದಾಖಲಾಗಬೇಕು: ಸುಪ್ರೀಂಕೋರ್ಟ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada