Siddaramaiah: ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಬೆನ್ನಲ್ಲೇ ಜಿಲ್ಲಾ ಕುರುಬ ಸಂಘದಲ್ಲಿ ಬಿರುಕೋ ಬಿರುಕು!

Varthur Prakash: ಕೋಲಾರದಲ್ಲಿ ಮೊದಲಿನಿಂದಲೂ ನಮ್ಮ ಕಷ್ಟ ಸುಖದಲ್ಲಿ ಭಾಗಿಯಾಗಿರುವುದು ವರ್ತೂರ್ ಪ್ರಕಾಶ್​. ಸಮುದಾಯದ ಮುಖಂಡನಾಗಿ ವರ್ತೂರ್​ ಪ್ರಕಾಶ್ ಇರುವ ವೇಳೆ, ನಮ್ಮದೇ ಸಮುದಾಯದ ಮುಖಂಡನನ್ನು ಮುಗಿಸುವ ಕೆಲಸಕ್ಕೆ ಕೈಹಾಕಬಾರದು.

Siddaramaiah: ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಬೆನ್ನಲ್ಲೇ ಜಿಲ್ಲಾ ಕುರುಬ ಸಂಘದಲ್ಲಿ ಬಿರುಕೋ ಬಿರುಕು!
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಬೆನ್ನಲ್ಲೇ ಜಿಲ್ಲಾ ಕುರುಬ ಸಂಘದಲ್ಲಿ ಬಿರುಕೋ ಬಿರುಕು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 20, 2023 | 12:43 PM

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೋಲಾರ ಕ್ಷೇತ್ರದಿಂದ ಸ್ಪರ್ಧೆ (Karnataka Assembly Elections 2023) ಮಾಡ್ತೇನೆ ಎಂದು ಘೋಷಣೆ ಮಾಡಿದ ನಂತರದಲ್ಲಿ ಕೋಲಾರದಲ್ಲಿ ಅವರ ಸ್ಪರ್ಧೆಗೆ ಕುರುಬ ಸಮುದಾಯವೇ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದೆ. ಇಷ್ಟು ದಿನ ಒಗ್ಗಟ್ಟಾಗಿದ್ದ ಕೋಲಾರ ಜಿಲ್ಲಾ ಕುರುಬರಲ್ಲಿ (Kuruba) ಒಡಕು ಮೂಡಿದ್ದು, ಸಂಘ ಒಡೆದ ಮನೆಯಾಗಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ.. ಕುರುಬರ ಸಂಘದಲ್ಲಿ ಉಲ್ಭಣವಾದ ಒಡಕು ಒಬ್ಬೊಬ್ಬರದ್ದೂ ಒಂದೊಂದು ವಾದ..! ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರ ನನಗೆ ಸೇಫ್​ ಎಂದುಕೊಂಡು ಕೋಲಾರಕ್ಕೆ ಬಂದಿದ್ದರೆ ಅವರ ಲೆಕ್ಕಾಚಾರವೇ ಉಲ್ಟಾ ಹೊಡೆಯವ ಸಾಧ್ಯತೆ ಹೆಚ್ಚಾಗಿದೆ. ಅದಕ್ಕೆ ಪೂರಕ ಎಂಬಂತೆ ಸಿದ್ದರಾಮಯ್ಯ ಬಂದರೆ ಅತಿ ಹೆಚ್ಚು ಖುಷಿ ಪಟ್ಟು ಸಂಭ್ರಮಿಸಬೇಕಿದ್ದ ಕುರುಬ ಸಮುದಾಯವೇ (Kurubara Sangha) ಇಂದು ಬೇಸರ ಪಡುವಂತಾಗಿದೆ (Varthur Prakash).

ಕುರುಬ ಸಮುದಾಯವನ್ನು ಒಗ್ಗಟ್ಟಾಗಿ ಕರೆದುಕೊಂಡು ಹೋಗಬೇಕಿದ್ದ ಸಂಘದಲ್ಲಿ ಒಡಕು ಮೂಡುತ್ತಿದೆ. ಸದ್ಯ ಜಿಲ್ಲಾ ಕುರುಬ ಸಂಘ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿ ಮೂರು ಪಕ್ಷಗಳಲ್ಲಿ ಹಂಚಿ ಹೋಗಿದೆ. ಸಂಘದ ಕಾರ್ಯಾಧ್ಯಕ್ಷ ಜಯರಾಂ ಹಾಗೂ ಕೆಲವು ಮುಖಂಡರು ಸಿದ್ದರಾಮಯ್ಯರಿಗೆ ಬೆಂಬಲ ನೀಡುತ್ತಿದ್ದು, ಕುರುಬ ಸಮುದಾಯ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಜೆಡಿಎಸ್​ಗೆ ಬೆಂಬಲ ನೀಡಿದ್ದಕ್ಕೆ ಮುಖಂಡರಿಬ್ಬರ ನಡುವೆ ಪೋನ್​ ಟಾಕ್​ ವಾರ್​..!

ಇನ್ನು ಕೆಲವು ಮುಖಂಡರು ಕಾಂಗ್ರೇಸ್​ ಜೊತೆಗೆ ಇನ್ನು ಕೆಲವರು ಬಿಜೆಪಿ ಹಾಗೂ ಜೆಡಿಎಸ್​ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಈ ನಡುವೆ ಕುರುಬ ಸಂಘದ ಮಾಜಿ ನಿರ್ದೇಶಕ ಅಶೋಕ್​ ಕುಮಾರ್ ಕುರುಬರ ಸಂಘದ ಕಾರ್ಯಾಧ್ಯಕ್ಷ ಜಯರಾಂ ಅವರಿಗೆ ಕುರುಬ ಸಂಘದಲ್ಲಿ ರಾಜಕೀಯ ತರಬೇಡ ಎಂದು ಹೇಳಿದ್ದಾರೆ. ಅದಕ್ಕೆ ಜಯರಾಂ -ಅಶೋಕ್​ ಕುಮಾರ್ ಅವರಿಗೆ ಫೋನ್​ ಮಾಡಿ ಫೋನಲ್ಲೇ ದೊಡ್ಡದಾಗಿಯೇ ಟಗರು ಕಾಳಗ ನಡೆದಿದೆ.

ಸದ್ಯ ಇವರಿಬ್ಬರ ಫೋನ್​ ಟಾಕ್​ ಕಾಳಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ವೈರಲ್​ ಆಗುತ್ತಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಶೋಕ್​ ಕುಮಾರ್​ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಕೋಲಾರಕ್ಕೆ ಬರಬಾರದು, ಬಂದರು ಗೆಲ್ಲೋದಿಲ್ಲ. ಸಮುದಾಯದ ಮುಖಂಡರಾಗಿ ಅವರೇ ಸಮುದಾಯದ ಇನ್ನೊಬ್ಬ ಮುಖಂಡನನ್ನು ಸೋಲಿಸಲು ಬರುವಾಗ… ನಾವು ಬೇರೆ ಪಕ್ಷದಲ್ಲಿ ಗುರುತಿಸಿಕೊಳ್ಳುವುದರಲ್ಲಿ ತಪ್ಪೇನು? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಸಮುದಾಯದ ನಾಯಕ, ಸಮುದಾಯಕ್ಕೆ ಆಲದ ಮರದಂತೆ, ಅವರ ಬಗ್ಗೆ ಗೌರವವಿದೆ. ಅವರಿಗೆ ಎಲ್ಲಿ ಗೌರವ ಕೊಡಬೇಕೊ ಅಲ್ಲಿ ಕೊಡುತ್ತೇವೆ ಎನ್ನುತ್ತಿದ್ದಾರೆ.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರದ್ದೇ ಬೇರೆ ವರಸೆ..!

ಇನ್ನು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ ಬಿಜೆಪಿಯ ವರ್ತೂರು ಪ್ರಕಾಶ್ ಜೊತೆಗೆ ಗುರುತಿಸಿಕೊಂಡಿದ್ದಾರೆ. ಈ ನಡುವೆ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ ಹಾಗೂ ವರ್ತೂರ್ ಪ್ರಕಾಶ್​ ಅವರ ವರಸೆಯೇ ಬೇರೆಯಾಗಿದೆ. ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿರುವ ಕುರುಬ ಮುಖಂಡರೊಟ್ಟಿಗೆ ಸಮುದಾಯದವರು ಬೆರಳೆಣಿಕೆಯಷ್ಟು ಜನರಿದ್ದಾರೆ. ಅವರೆಲ್ಲಾ ಮೊದಲಿನಿಂದಲೂ ಕಾಂಗ್ರೆಸ್ ​ನಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಓಟ್​ ಹಾಕಿಸುವಷ್ಟು ಕೆಪಾಸಿಟಿ ಇಲ್ಲಾ. ಕುರುಬರ ಸಂಘ ಮೊದಲಿನಿಂದಲೂ ನಮ್ಮೊಟ್ಟಿಗಿದೆ ಎನ್ನುತ್ತಿದ್ದಾರೆ ವರ್ತೂರ್ ಪ್ರಕಾಶ್​ ಮತ್ತು ಅಧ್ಯಕ್ಷ ತಂಬಳ್ಳಿ ಮುನಿಯಪ್ಪ. ಸಿದ್ದರಾಮಯ್ಯ ಬಂದರೂ ಕುರುಬರ ಸಂಘ ಹಾಗೂ ಸಮುದಾಯ ನಮ್ಮೊಟ್ಟಿಗೆ ನಿಲ್ಲಲಿದೆ ಎನ್ನುತ್ತಾರೆ.

ಸಿದ್ದರಾಮಯ್ಯ ಅವರಿಗೆ ನಿಲ್ಲೋದಕ್ಕೆ ಬೇರೆ ಕ್ಷೇತ್ರವಿದೆ, ವರ್ತೂರ್​ ಪ್ರಕಾಶ್ ಅವರಿಗೆ ಅವಕಾಶ ಕೊಡಿ..!​

ಕೋಲಾರದಲ್ಲಿ ಮೊದಲಿನಿಂದಲೂ ನಮ್ಮ ಕಷ್ಟ ಸುಖದಲ್ಲಿ ಭಾಗಿಯಾಗಿರುವುದು ವರ್ತೂರ್ ಪ್ರಕಾಶ್​. ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ಎಲ್ಲಿ ಬೇಕಾದ್ರು ನಿಂತು ಗೆಲ್ಲುವ ಅವಕಾಶ ಇದೆ. ಹಾಗಾಗಿ ಇಲ್ಲೊಬ್ಬ ಸಮುದಾಯದ ಮುಖಂಡನಾಗಿ ವರ್ತೂರ್​ ಪ್ರಕಾಶ್ ಇರುವ ವೇಳೆ ನಮ್ಮದೇ ಸಮುದಾಯದ ಮುಖಂಡನನ್ನು ಮುಗಿಸುವ ಕೆಲಸಕ್ಕೆ ಕೈಹಾಕಬಾರದು.

ಈಗಾಗಲೇ ಜಿಲ್ಲೆಯ ಕೆಲವು ಕುರುಬ ಸಮುದಾಯದ ಜನರು ಬೆಂಗಳೂರಿಗೆ ಬೈಕ್​ ರ್ಯಾಲಿ ಮಾಡಿ ಸಿದ್ದರಾಮಯ್ಯ ಅವರ ಮನೆಗೆ ಮುತ್ತಿಗೆ ಹಾಕಿ ಕೋಲಾರಕ್ಕೆ ಬರದಂತೆ ಪ್ರತಿಭಟನೆ ಮಾಡಲು ಸಿದ್ದರಿದ್ದರು. ಆದರೆ ಅವರನ್ನು ಸಮಾಧಾನ ಪಡಿಸಿದ್ದೇವೆ ಎನ್ನುವ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬರಬಾರದು ಎಂದು ನೇರವಾದ ನುಡಿಗಳನ್ನು ಹೇಳುವ ಮೂಲಕ ಕುರುಬರೇ ಕೋಲಾರದಲ್ಲಿ ಸಿದ್ದು ಸ್ಪರ್ಧೆ ಮಾಡೋದನ್ನ ವಿರೋಧಿಸುತ್ತಿದ್ದಾರೆ ಎಂಬಂತಾಗಿದೆ.

ಒಟ್ಟಾರೆ ಸಿದ್ದರಾಮಯ್ಯ ಕೋಲಾರಕ್ಕೆ ಬರುತ್ತೇನೆ ಎಂದು ಹೇಳುತ್ತಿದ್ದಂತೆ ಕೋಲಾರದಲ್ಲಿ ಕುರುಬ ಸಮುದಾಯದಲ್ಲಿ ಒಡಕು ಮೂಡಿದ್ದು, ಒಂದು ಗುಂಪು ವರ್ತೂರ್ ಪ್ರಕಾಶ್​ ಎಂದರೆ, ಮತ್ತೊಂದು ಗುಂಪು ಸಿದ್ದರಾಮಯ್ಯ ಎನ್ನುತ್ತಿದೆ. ಇನ್ನೂ ಒಂದು ಗುಂಪು ಜೆಡಿಎಸ್ ಎನ್ನುವ ಮೂಲಕ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಿದ್ದ ನಾಯಕರಿಂದಲೇ ಸಮುದಾಯದಲ್ಲೇ ಬಿರುಕು ಉಂಟಾಗುತ್ತಿರುವುದು ಮಾತ್ರ ವಿಪರ್ಯಾಸ.

ವರದಿ: ರಾಜೇಂದ್ರ ಸಿಂಹ, ಟಿವಿ9, ಕೋಲಾರ 

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ