Tomato: ಟೊಮೆಟೊ ತುಂಬಿಕೊಂಡು ಕೋಲಾರದಿಂದ ಹೊರಟಿದ್ದ ಲಾರಿ ನಾಪತ್ತೆ, ದೂರು ದಾಖಲು

ಜುಲೈ 27ರಂದು ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ 21 ಲಕ್ಷ ಮೌಲ್ಯದ ಟೊಮೆಟೊ ತುಂಬಿದ್ದ ಲಾರಿ ನಾಪತ್ತೆಯಾಗಿದೆ.

Tomato: ಟೊಮೆಟೊ ತುಂಬಿಕೊಂಡು ಕೋಲಾರದಿಂದ ಹೊರಟಿದ್ದ ಲಾರಿ ನಾಪತ್ತೆ, ದೂರು ದಾಖಲು
ಟೊಮೆಟೊ
Edited By: ಆಯೇಷಾ ಬಾನು

Updated on: Jul 30, 2023 | 3:13 PM

ಕೋಲಾರ, ಜುಲೈ 30: ರಾಜ್ಯದಲ್ಲಿ ಟೊಮೆಟೊ ಬೆಲೆ ಆಕಾಶ ಮುಟ್ಟಿದ್ದು ಟೊಮೆಟೊ(Tomato Price Hike) ಕಳ್ಳರ ಹಾವಳಿ ಹೆಚ್ಚಾಗಿದೆ. ಹೀಗಾಗಿ ಅನೇಕ ರೈತರು ತಮ್ಮ ಜಮೀನಿಗೆ ಕಾವಲುಗಾರರನ್ನು ನೇಮಿಸಿದ್ದಾರೆ. ಸಿಸಿಟಿವಿಗಳನ್ನು ಅಳವಡಿಸಿ ಟೊಮೆಟೊ ಬೆಳೆ ಕಾಪಾಡಿಕೊಳ್ಳುತ್ತಿದ್ದಾರೆ. ಆದ್ರೆ ಕೋಲಾರದಲ್ಲಿ ಟೊಮೆಟೊ ತುಂಬಿದ ಲಾರಿ ಕಳ್ಳತನವಾಗಿದ್ದು(Tomato Theft) ರೈತ ಕಂಗಾಲಾಗಿದ್ದಾನೆ.

ಜುಲೈ 27ರಂದು ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ 21 ಲಕ್ಷ ಮೌಲ್ಯದ ಟೊಮೆಟೊ ತುಂಬಿದ್ದ ಲಾರಿ ನಾಪತ್ತೆಯಾಗಿದೆ. ಕೋಲಾರದ ಮೆಹತ್ ಟ್ರಾನ್ಸ್​​ಪೋರ್ಟ್​ಗೆ ಸೇರಿದ ಲಾರಿ ಇದಾಗಿದ್ದು ಇದರಿಲ್ಲಿ ಎ.ಜಿ.ಟ್ರೇಡರ್ಸ್ ಸಕ್ಲೇನ್, ಹಾಗೂ ಎಸ್.ವಿ.ಟಿ ಟ್ರೇಡರ್ಸ್ ಮುನಿರಡ್ಡಿ ಎಂಬುವರಿಗೆ ಸೇರಿದ 21 ಲಕ್ಷ ಮೌಲ್ಯದ ಟೊಮೆಟೊಗಳಿದ್ದವು. ಲಾರಿ ಚಾಲಕ ಮೊಬೈಕ್​ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆ ಮಂಡಿ ಮಾಲೀಕರು ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಇನ್ನು ಟೊಮೆಟೊ ಬೆಲೆ ಏರಿಕೆಯಾಗಿದ್ದು ಕಳ್ಳರು ಕೆಂಪು ರಾಣಿ ಕದಿಯಲು ಹೊಂಚುಹಾಕುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯ INR ಮಂಡಿಯಲ್ಲಿ ಟೊಮೆಟೊ ಕದಿಯುವ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ರಾತ್ರಿ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳ್ಳ ತನ್ನ ಕರಾಮತ್ತು ತೋರಿಸಿದ್ದಾನೆ. ಸುತ್ತಮುತ್ತ ನೋಡಿ ಒಂದು ಬಾಕ್ಸ್ ಟೊಮೆಟೊ ಎಗರಿಸಿದ್ದಾನೆ. ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Tomato Price Hike: ಇಳಿಕೆ ಕಾಣದ ಟೊಮೆಟೊ ದರ, ಇನ್ನೊಂದು ತಿಂಗಳು ಇದೇ ಪರಿಸ್ಥಿತಿ

ಮೈಸೂರಿನಲ್ಲಿ ಶುಂಠಿ ಕಳುವು

ಇನ್ನು ಮತ್ತೊಂದೆಡೆ ಟೊಮೆಟೊ ಮಾತ್ರವಲ್ಲದೇ ಶುಂಠಿ ಬೆಲೆ ಕೂಡ ಏರಿಕೆಯಾಗಿದೆ. ಬೆಲೆ ಏರಿಕೆ ಹಿನ್ನೆಲೆ ಖದೀಮರು ಶುಂಠಿ ಕಳುವು ಮಾಡಿದ್ದಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಟಿಬೇಟಿಯನ್ ಕಾಲೋನಿಯ ಲಾಖಪಾ ಸೇರಿಂಗ್ ತಮ್ಮ ಜಮೀನಿನಲ್ಲಿ ಶುಂಠಿ ಬೆಳದಿದ್ದರು. ಕಳೆದ ರಾತ್ರಿ ತೋಟಕ್ಕೆ ನುಗ್ಗಿದ ಖದೀಮರು ಎಂಟು ಮೂಟೆಯಷ್ಟು ಫಸಲನ್ನು ಕಟಾವು ಮಾಡಿ ಮೂಟೆಯಲ್ಲಿ ತುಂಬಿಕೊಂಡು ಹೋಗಿದ್ದಾರೆ. ಶುಂಠಿ ಕಳೆದುಕೊಂಡ ಟಿಬೆಟಿಯನ್ ರೈತ ಕಂಗಾಲಾಗಿದ್ದಾನೆ. ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:11 pm, Sun, 30 July 23

Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More
Follow Us