AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲೂರು ಯುವಕ ತನ್ನ ಹೊಸ ಮೊಬೈಲಿನಿಂದ ಅಚಾನಕ್ಕಾಗಿ ಯುವತಿಗೆ ಮೆಸೇಜ್ ಮಾಡಿದ್ದೇ ಅವನ ಸಾವಿಗೆ ಕಾರಣವಾಯ್ತಾ?

Kolar: ಬಡ ಕುಟುಂಬದಲ್ಲಿ ಹುಟ್ಟಿ ಕೂಲಿ ಕೆಲಸ ಮಾಡಿಕೊಂಡು ತಂದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದ ಯುವಕ ತಾನು ತೆಗೆದು ಕೊಂಡ ಅದೊಂದು ಆಂಡ್ರಾಯ್ಡ್​ ಫೋನ್​ ಹಾಗೂ ಆ ಫೋನ್​ ನಿಂದ ಅಚಾನಕ್ಕಾಗಿ ಯುವತಿಗೆ ಹೋದ ಮೆಸೇಜ್​ ಅವನ ಸಾವಿಗೆ ಕಾರಣವಾಯ್ತಾ? ಪೊಲೀಸರ ತನಿಖೆಯೇ ಉತ್ತರ ಹೇಳಬೇಕಿದೆ.

ಮಾಲೂರು ಯುವಕ ತನ್ನ ಹೊಸ ಮೊಬೈಲಿನಿಂದ ಅಚಾನಕ್ಕಾಗಿ ಯುವತಿಗೆ ಮೆಸೇಜ್ ಮಾಡಿದ್ದೇ ಅವನ ಸಾವಿಗೆ ಕಾರಣವಾಯ್ತಾ?
ಯುವತಿಗೆ ಮೆಸೇಜ್ ಮಾಡಿದ್ದೇ ಅವನ ಸಾವಿಗೆ ಕಾರಣವಾಯ್ತಾ?
TV9 Web
| Edited By: |

Updated on: Apr 03, 2023 | 3:46 PM

Share

ಅವನು ಚಿಕನ್​ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಮೂರು ದಿನಗಳ ಹಿಂದೆ ಇದ್ದಕ್ಕಿದ್ದಂತೆ ನಿಗೂಢವಾಗಿ ನಾಪತ್ತೆಯಾಗಿ ಹೋಗಿದ್ದ. ಅವನಿಗಾಗಿ ಅವನ ಹೆತ್ತವರು ಎಲ್ಲೆಡೆ ಹುಡುಕಾಡಿದ್ದರು. ಆದರೆ ಅವನ ಸುಳಿವೇ ಸಿಕ್ಕಿರಲಿಲ್ಲ. ಆದರೆ ಇವತ್ತು ಕಾಣೆಯಾಗಿದ್ದ ಯುವಕ (Youth) ಶವವಾಗಿ ಅದೇ ಊರಿನ ಕೆರೆಯಲ್ಲಿ ಪತ್ತೆಯಾಗಿದ್ದಾನೆ. ಜೊತೆಗೆ ಮೃತನ ಕೊಲೆಯಾಗಿರುವ (Murder) ಶಂಕೆ ದಟ್ಟವಾಗಿದೆ. ಮಗನನ್ನು ಕಳೆದುಕೊಂಡು ಹೆತ್ತವರ ಕಣ್ಣೀರು, ಇನ್ನೊಂದೆಡೆ ಕೆರೆಯಲ್ಲಿ ತೇಲುತ್ತಿರುವ ಶವವನ್ನು ಮೇಲೆತ್ತುತ್ತಿರುವ ಸ್ಥಳೀಯರು ಹಾಗೂ ಪೊಲೀಸರು, ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ (Kolar) ಜಿಲ್ಲೆ ಮಾಲೂರು (Malur) ತಾಲ್ಲೂಕು ಕೊಂಡಶೆಟ್ಟಿಹಳ್ಳಿ ಗ್ರಾಮದಲ್ಲಿ. ಹೌದು ಕೊಂಡಶೆಟ್ಟಿ ಹಳ್ಳಿ ಗ್ರಾಮದ ಅಯ್ಯೂಬ್​ ಖಾನ್​ ಎಂಬ ಯುವಕ ಕಳೆದ ಗುರುವಾರ ಅಂದರೆ ಮಾರ್ಚ್ 30 ರಂದು ಮಧ್ಯಾಹ್ನ ಇದ್ದಕ್ಕಿದಂತೆ ನಾಪತ್ತೆಯಾಗಿ ಹೋಗಿದ್ದ. ಮೊಬೈಲ್​ ಕೂಡಾ ಸ್ವಿಚ್​ ಆಫ್​ ಆಗಿ ಹೋಗಿತ್ತು. ಅಯ್ಯೂಬ್​ ಖಾನ್​ ಮನೆಗೆ ಬಾರದ್ದನ್ನು ಕಂಡ ಹೆತ್ತವರು ಎಲ್ಲೆಡೆ ಹುಡುಕಾಡಿದ್ದರು. ಆದರೆ ಎಲ್ಲೂ ಅವನ ಸುಳಿವು ಸಿಗಲಿಲ್ಲ. ಈ ವೇಳೆ ಬೇರೆ ದಾರಿ ಕಾಣದೆ ಹೋದಾಗ ಹೆತ್ತವರು ಅಯ್ಯೂಬ್​ ಖಾನ್​ ನಾಪತ್ತೆಯಾಗಿರುವ ಕುರಿತು ಮಾಸ್ತಿ ಪೊಲೀಸರಿಗೆ ದೂರು ನೀಡಿದರು.

ಹೀಗಿರುವಾಗಲೇ ಭಾನುವಾರ ಬೆಳಗ್ಗೆ ಕಾಣೆಯಾಗಿದ್ದ ಅಯ್ಯೂಬ್​ ಖಾನ್​ ಗ್ರಾಮದ ಹೊರಗಿನ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಅಯ್ಯೂಬ್​ ಖಾನ್​ ಶವದ ಮೇಲೆ ಗಾಯಗಳಾಗಿವೆ. ಜೊತೆಗೆ ಕುತ್ತಿಗೆಯನ್ನು ಕಬ್ಬಿಣದ ಚೈನ್ ನಿಂದ​ ಬಿಗಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಶವ ಪತ್ತೆಯಾಗಿರುವ ಕೆರೆಯ ಬಳಿ ಬಿಯರ್ ಬಾಟಲಿಗಳು, ಕುತ್ತಿಗೆ ಬಿಗಿದು ಸಾಯಿಸಿರುವ ಚೈನ್​ ಪತ್ತೆಯಾಗಿದೆ. ಸದ್ಯ ಮೃತ ಅಯ್ಯೂಬ್​ ಖಾನ್​ ಸಂಬಂಧಿಕರು ಹೇಳುವಂತೆ ಇದು ಸಹಜ ಸಾವಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕೊಲೆ ಎಂದು ಹೇಳುತ್ತಿದ್ದಾರೆ.

ಅಷ್ಟಕ್ಕೂ ಅಯ್ಯೂಬ್​ ಖಾನ್​ ಕೊಲೆಯಾಗಿ ಹೋಗಿದ್ದಾನೆ ಎಂದು ಹೇಳೋದಕ್ಕೆ ಕಾರಣವೂ ಇದೆ. ಕೊಂಡಶೆಟ್ಟಿಹಳ್ಳಿ ಗ್ರಾಮದ ಸರ್ವರ್​ ಖಾಸ್ ಹಾಗೂ ಗುಲ್ನಾಜ್ ಅವರ ಏಕೈಕ ಪುತ್ರ ಅಯ್ಯೂಬ್​ ಖಾನ್​ ಸುಮಾರು 26 ವರ್ಷದ ಯುವಕ. ಗ್ರಾಮದಲ್ಲೇ ಚಿಕನ್​ ಅಂಗಡಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಐದನೇ ತರಗತಿ ಓದಿದ್ದ ಅಯ್ಯೂಬ್​ ಖಾನ್​ ಇತ್ತೀಚೆಗೆ ಆಂಡ್ರಾಯ್ಡ್​ ಪೋನ್ ತೆಗೆದುಕೊಂಡಿದ್ದ. ಆ ಪೋನ್​ ನಿಂದ ಕಳೆದ ಎರಡು ತಿಂಗಳ ಹಿಂದೆ ಪನಮನಹಳ್ಳಿ ಗ್ರಾಮದ ಯುವತಿಯೊಬ್ಬಳಿಗೆ ಮೆಸೇಜ್​ ಹೋಗಿತ್ತಂತೆ. ಆ ವಿಚಾರವಾಗಿ ಅವರ ಕಡೆಯವರು ಬಂದು ಗಲಾಟೆ ಮಾಡಿ ಹೋಗಿದ್ದಾರೆ.

ಈ ವಿಚಾರವಾಗಿಯೇ ರಾಜಿ ಪಂಚಾಯ್ತಿ ಕೂಡಾ ಆಗಿದ್ದು ಆ ಮೆಸೇಜ್​ ಮಾಡಿದ್ದು ನಾನಲ್ಲ, ನನಗೆ ಮೆಸೇಜ್​ ಮಾಡಲು ಬರೋದಿಲ್ಲ. ನನ್ನ ಮೊಬೈಲ್​ ನಿಂದ ಬೇರೆ ಯಾರೋ ಮೆಸೇಜ್​ ಮಾಡಿದ್ದಾರೆ. ನನಗೇನೂ ಗೊತ್ತಿಲ್ಲ ಎಂದು ಅಯ್ಯೂಬ್​ ಖಾನ್​ ಹೇಳಿದ್ದನಂತೆ. ಆದರೂ ಅವರು ನಿನ್ನ ಎತ್ತಿಬಿಡ್ತೀನಿ ನಿನ್ನ ಮಾತ್ರ ಬಿಡೋದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿದ್ದರಂತೆ. ಅಲ್ಲದೆ ಅಯ್ಯೂಬ್​ ಖಾನ್​ ತಂದೆ ಹೇಳುವಂತೆ ಮಾಲೂರಿನ ಗಂಗರಾಜು, ಸಿಕಂದರ್, ಆದಿಲ್​ ಎಂಬುವರು ಮನೆ ಬಳಿ ಬಂದು ಗಲಾಟೆ ಮಾಡಿ ಹೋಗಿದ್ದಾರೆ.

ಅಲ್ಲದೆ ಅಯ್ಯೂಬ್​ ಖಾನ್​ ಅವನನ್ನು ಕೊಲೆ ಮಾಡೋದಕ್ಕೆ ಸುಪಾರಿ ತೆಗೆದುಕೊಂಡು ಬಂದಿದ್ದರು. ಅವನು ನಾಪತ್ತೆಯಾಗುವ ದಿನದಂದು ಕೂಡಾ ಯಾರೋ ಇಬ್ಬರು ಹುಡುಗರು ಬಂದು ಅಯ್ಯೂಬ್​ ಖಾನ್​ನನ್ನು ಕರೆದುಕೊಂಡು ಹೋಗಿದ್ದಾರೆ. ಅವರೇ ಕೊಲೆ ಮಾಡಿದ್ದಾರೆ ಅನ್ನೋ ಆರೋಪ ಮಾಡುತ್ತಿದ್ದು, ಪೊಲೀಸರಿಗೆ ಹೆಸರು ಸಹಿತ ದೂರು ಕೂಡಾ ನೀಡಲಾಗಿದ್ದು ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ.

ಒಟ್ಟಾರೆ ಬಡ ಕುಟುಂಬದಲ್ಲಿ ಹುಟ್ಟಿ ಕೂಲಿ ಕೆಲಸ ಮಾಡಿಕೊಂಡು ತಂದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದ ಯುವಕ ತಾನು ತೆಗೆದು ಕೊಂಡ ಅದೊಂದು ಆಂಡ್ರಾಯ್ಡ್​ ಫೋನ್​ ಹಾಗೂ ಆ ಫೋನ್​ ನಿಂದ ಅಚಾರನಕ್ಕಾಗಿ ಹೋದ ಮೆಸೇಜ್​ ಅವನ ಸಾವಿಗೆ ಕಾರಣವಾಯ್ತಾ? ಅಥವಾ ಇದರ ಹಿಂದೆ ಬೇರೆ ಏನಾದರೂ ರಹಸ್ಯ ಅಡಗಿದ್ಯಾ ಅನ್ನೋ ಹಲವು ಅನುಮಾನಗಳಿಗೆ ಪೊಲೀಸರ ತನಿಖೆಯೇ ಉತ್ತರ ಹೇಳಬೇಕಿದೆ.

ವರದಿ: ರಾಜೇಂದ್ರ ಸಿಂಹ, ಟಿವಿ9, ಕೋಲಾರ 

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು