ಒಂದೆಡೆ ನಯನ ಮನೋಹರವಾಗಿರುವ ಪ್ರಕೃತಿ ಸೌಂದರ್ಯದ ಹಸಿರು ಕಾಡು. ಸೂರ್ಯನಿಗೆ ಅಡ್ಡಲಾಗಿ ಮೋಡಗಳು ನಿಂತಿದ್ದರೆ, ಇನ್ನೊಂದಡೆ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯ ಆರ್ಭಟ. ಇದರ ನಡುವೆ ಹಾಲಿನ ಹೊಳೆಯಂತೆ ಧುಮ್ಮಿಕ್ಕಿ ಬೀಳ್ತಿರೋ ಜಲಪಾತದ ಸೊಬಗು. ಇಂತಹ ಮನಮೋಹಕ ದೃಶ್ಯಗಳು ಯಾರಿಗೇ ಕಂಡರೂ ಕೂಡಾ ಅವರ ಮನಸು ಹಗರಾಗುತ್ತದೆ. ನೀರಲ್ಲಿ ಹೋಗಿ ಸಂಭ್ರಮಿಸಬೇಕು ಅಂತ ಅನಿಸುತ್ತಿದೆ. ಹೀಗಾಗಿ ದುಮ್ಮುಕ್ಕುತ್ತಿರುವ ಜಲಪಾತದ ಆಟವಾಡ್ತಾ ಎಂಜಾಯ್ ಮಾಡಿಕೊಂಡು, ಫೋಟೊಗೆ ಫೋಸ್ ಕೊಡ್ತಿರೋ ಪ್ರವಾಸಿಗರ ದಂಡು. ಈ ಎಲ್ಲ ದೃಶ್ಯಗಳನ್ನು ಕಂಡು ನೀವು ಇದ್ಯಾವುದೋ ಮಲೆನಾಡಿನ ಪ್ರದೇಶ ಇರಬೇಕು ಅಂತಾ ಅಂದುಕೊಂಡರೆ ಅದು ತಪ್ಪು. ಈ ಪಾಲ್ಸ್, ಈ ಹಸಿರು ಪರಿಸರ ಇರೋದು, ಬರ-ಬಿಸಿಲು ನಾಡು ಅಂತಾ ಕರೆಸಿಕೊಳ್ಳುವ ಕೊಪ್ಪಳ ಜಿಲ್ಲೆಯಲ್ಲಿ.