Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಇಸ್ಪೀಟ್ ಅಡ್ಡೆ ಮೇಲೆ‌ ಪೊಲೀಸರ ಭರ್ಜರಿ ದಾಳಿ, ಹಣದ ಬ್ಯಾಗ್ ಹಿಡಿದು ಪೊದೆಯಲ್ಲಿ ಅಡಗಿ ಕುಳಿತಿದ್ದವರು ಅರೆಸ್ಟ್

ಸ್ಥಳೀಯರ ಖಚಿತ ಮಾಹಿತಿ ಮೆರೆಗೆ ಇಸ್ಪೀಟ್ ಅಡ್ಡೆ ಮೇಲೆ‌ ಪೊಲೀಸರು ದಾಳಿ ನಡೆಸಿದ ವಿಡಿಯೋ ವೈರಲ್ ಆಗಿದೆ. ದಾಳಿ ವೇಳೆ ಇಸ್ಪೀಟ್ ದಂಧೆಕೋರರು ಹಣದ ಬ್ಯಾಗ್ ಹಿಡಿದು ಪೊದೆಯಲ್ಲಿ ಅಡಗಿ ಕುಳಿತಿದ್ದರು. ಖಾಕಿ ಖದೀಮರನ್ನು ಹುಡುಕಿ ಹೊರಗಡೆ ಎಳೆತಂದು ಬ್ಯಾಗ್ ವಶಕ್ಕೆ ಪಡೆದಿದ್ದಾರೆ. ಎರಡು ಹಣದ ಬ್ಯಾಗ್, ಒಂದು ಕಾರು, 7 ಜನರನ್ನು ಪೊಲೀಸರು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕೊಪ್ಪಳ: ಇಸ್ಪೀಟ್  ಅಡ್ಡೆ ಮೇಲೆ‌ ಪೊಲೀಸರ ಭರ್ಜರಿ ದಾಳಿ, ಹಣದ ಬ್ಯಾಗ್ ಹಿಡಿದು ಪೊದೆಯಲ್ಲಿ ಅಡಗಿ ಕುಳಿತಿದ್ದವರು ಅರೆಸ್ಟ್
ಹಣದ ಬ್ಯಾಗ್ ಹಿಡಿದು ಪೊದೆಯಲ್ಲಿ ಅಡಗಿ ಕುಳಿತಿದ್ದವರು ಅರೆಸ್ಟ್
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಆಯೇಷಾ ಬಾನು

Updated on: Aug 24, 2023 | 9:34 AM

ಕೊಪ್ಪಳ, ಆ.24: ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ‌ ಪೊಲೀಸರು ಭರ್ಜರಿ ದಾಳಿ ನಡೆಸಿದ್ದು 15,33,660 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ. ಗಂಗಾವತಿ ತಾಲೂಕಿನ ತಿರಮಲಾಪುರದ ಹೊರವಲಯದಲ್ಲಿ ರಾಯಚೂರು, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಚಿತ್ರದುರ್ಗ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಬಂದಿದ್ದ ಸುಮಾರು 200ಕ್ಕೂ ಹೆಚ್ಚು ಜನ ಅಕ್ರಮವಾಗಿ ಇಸ್ಟೀಟ್ ಆಡುತ್ತಿದ್ದ ಜೂಜುಕೋರರ ಮೇಲೆ ಗಂಗಾವತಿ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಇಸ್ಪೀಟ್ ದಂಧೆಕೋರರು ದಿಕ್ಕಾಪಾಲಾಗಿ ಓಡಿ ಪೊದೆಗಳಲ್ಲಿ ಬಚ್ಚಿಟ್ಟುಕೊಂಡಿದ್ದರು. ಸದ್ಯ ದಂಧೆಕೋರರನ್ನು ಹಿಡಿದು ಮಟ್ಟ ಹಾಕಲಾಗಿದೆ.

ಪೊದೆಯಲ್ಲಿ ಅಡಗಿದ್ದ ದಂಧೆಕೋರರನ್ನು ಖಾಕಿ ಹಿಡಿದ ವಿಡಿಯೋ ವೈರಲ್

ಇನ್ನು ಸ್ಥಳೀಯರ ಖಚಿತ ಮಾಹಿತಿ ಮೆರೆಗೆ ಇಸ್ಪೀಟ್ ಅಡ್ಡೆ ಮೇಲೆ‌ ಪೊಲೀಸರು ದಾಳಿ ನಡೆಸಿದ ವಿಡಿಯೋ ವೈರಲ್ ಆಗಿದೆ. ದಾಳಿ ವೇಳೆ ಇಸ್ಪೀಟ್ ದಂಧೆಕೋರರು ಹಣದ ಬ್ಯಾಗ್ ಹಿಡಿದು ಪೊದೆಯಲ್ಲಿ ಅಡಗಿ ಕುಳಿತಿದ್ದರು. ಖಾಕಿ ಖದೀಮರನ್ನು ಹುಡುಕಿ ಹೊರಗಡೆ ಎಳೆತಂದು ಬ್ಯಾಗ್ ವಶಕ್ಕೆ ಪಡೆದಿದ್ದಾರೆ. ಎರಡು ಹಣದ ಬ್ಯಾಗ್, ಒಂದು ಕಾರು, 7 ಜನರನ್ನು ಪೊಲೀಸರು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿದ್ದಾರೆ. ರಾಯಚೂರಿನ ಮಸ್ಕಿ ಮೂಲದ ವ್ಯಕ್ತಿಯಿಂದ ಹಣದ ಬ್ಯಾಗ್ ವಶಕ್ಕೆ ಪಡೆಯಲಾಗಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂತಾರಾಷ್ಟ ಮಟ್ಟದ ಮೋಸ್ಟ್ ವಾಂಟೆಡ್​ ಕ್ರಿಮಿನಲ್​ಗಳ ಬಂಧನ, ಭಾರತಕ್ಕೆ ನುಸುಳಿದ್ದೇ ರೋಚಕ

ಕುಡಿದು ಕೆಎಸ್​ಆರ್​ಟಿಸಿ ಬಸ್ ಚಲಾಯಿಸಿದಕ್ಕೆ ಚಾಲಕ, ನಿರ್ವಾಹಕ ಅಮಾನತು

ಕಂಠ ಪೂರ್ತಿ ಕುಡಿದು ಹೆಚ್.ಡಿ ಕೋಟೆಯಿಂದ ಮೈಸೂರಿಗೆ ಹೋಗುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಚಾಲಕನನ್ನು ಅಮಾನತು ಮಾಡಲಾಗಿದೆ. ಕೆಎಸ್​ಆರ್​ಟಿಸಿ ಚಾಲಕ ಗೋಪಾಲ ಕೃಷ್ಣ, ನಿರ್ವಾಹಕ ಪ್ರಕಾಶ್​ನನ್ನು ಅಮಾನತು ಮಾಡಿ ಕೆಎಸ್​ಆರ್​ಟಿಸಿ ಡಿಪೋ ಮ್ಯಾನೇಜರ್ ಆದೇಶ ಹೊರಡಿಸಿದ್ದಾರೆ. ಬಸ್ ಚಲಾಯಿಸಲು ಸಾಧ್ಯವಾಗದೆ ದಾರಿ ಮಧ್ಯೆಯೇ ಚಾಲಕ ಬಸ್ ನಿಲ್ಲಿಸಿದ್ದ. ಚಾಲಕನ ನಡವಳಿಕೆಯಿಂದ ಎಚ್ಚೆತ್ತಿದ್ದ ಪ್ರಯಾಣಿಕರು ಬಸ್ ನಿಲ್ಲಿಸುತ್ತಿದಂತೆ ಚಾಲಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ನಾನು ಮುಂಜಾನೆ ಕುಡಿದಿದ್ದು ಈಗ ಅಲ್ಲ. ನಾನು ಕೆಲಸಕ್ಕೆ ಬರಲ್ಲ ಅಂದೆ ಎಂದು ಸಾರ್ವಜನಿಕರಿಗೆ ಉತ್ತರಿಸಿದ್ದಾರೆ. ಪ್ರಯಾಣಿಕರ ಪ್ರಶ್ನೆಗೆ ಉತ್ತರಿಸಲು ಪರದಾಡಿದ್ದ ಚಾಲಕ ಗೋಪಾಲಕೃಷ್ಣರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ