ಕುಷ್ಟಗಿ ತಾಲೂಕು ಆಸ್ಪತ್ರೆ ಅವ್ಯವಸ್ಥೆಯ ಆಗರ; ಬೆಡ್ ವ್ಯವಸ್ಥೆ ಸರಿ ಇಲ್ಲದೆ ನೆಲದ ಮೇಲೆಯೇ ಮಲಗುವ ದುಃಸ್ಥಿತಿ

| Updated By: ganapathi bhat

Updated on: Apr 07, 2022 | 2:55 PM

ಬಾಣಂತಿಯರು ಕೂಡ ಆಸ್ಪತ್ರೆಯಲ್ಲಿ ನೆಲದ ಮೇಲೆ ಮಲಗುವ ಸ್ಥಿತಿ ಎದುರಾಗಿದೆ. ನೆಲದ ಮೇಲೆ ಮಲಗಿರುವ ವಿಡಿಯೋಗಳು ವೈರಲ್ ಆಗಿವೆ. ಇಲ್ಲಿ, ಪ್ರತಿ ಬುಧವಾರ ಆಪರೇಷನ್ ಕ್ಯಾಂಪ್ ನಡೆಯುತ್ತದೆ. ಆದರೆ, ಬಳಿಕ ಆಪರೇಷನ್ ಮಾಡಿಸಿಕೊಂಡ ಮಹಿಳೆಯರಿಗೆ ಬೆಡ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.

ಕುಷ್ಟಗಿ ತಾಲೂಕು ಆಸ್ಪತ್ರೆ ಅವ್ಯವಸ್ಥೆಯ ಆಗರ; ಬೆಡ್ ವ್ಯವಸ್ಥೆ ಸರಿ ಇಲ್ಲದೆ ನೆಲದ ಮೇಲೆಯೇ ಮಲಗುವ ದುಃಸ್ಥಿತಿ
ಕುಷ್ಟಗಿ ತಾಲೂಕು ಆಸ್ಪತ್ರೆ
Follow us on

ಕೊಪ್ಪಳ: ಇಲ್ಲಿನ ಕುಷ್ಟಗಿ ತಾಲೂಕು ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿರುವ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೆಡ್ ವ್ಯವಸ್ಥೆ ಸರಿಯಾಗಿಲ್ಲ. ಶಸ್ತ್ರಚಿಕಿತ್ಸೆ ಬಳಿಕ ನೆಲದ ಮೇಲೆ ಮಲಗುವ ದುಃಸ್ಥಿತಿ ಬಂದಿದೆ. ಬಾಣಂತಿಯರು ಕೂಡ ಆಸ್ಪತ್ರೆಯಲ್ಲಿ ನೆಲದ ಮೇಲೆ ಮಲಗುವ ಸ್ಥಿತಿ ಎದುರಾಗಿದೆ. ನೆಲದ ಮೇಲೆ ಮಲಗಿರುವ ವಿಡಿಯೋಗಳು ವೈರಲ್ ಆಗಿವೆ. ಇಲ್ಲಿ, ಪ್ರತಿ ಬುಧವಾರ ಆಪರೇಷನ್ ಕ್ಯಾಂಪ್ ನಡೆಯುತ್ತದೆ. ಆದರೆ, ಬಳಿಕ ಆಪರೇಷನ್ ಮಾಡಿಸಿಕೊಂಡ ಮಹಿಳೆಯರಿಗೆ ಬೆಡ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.

ದಾವಣಗೆರೆ: ಕಳುವಾಗಿದ್ದ ಮಗು ಪತ್ತೆ ಹಿನ್ನೆಲೆ; ಇನ್ನಷ್ಟು ತನಿಖೆಗೆ ಮುಂದಾದ ಪೊಲೀಸರು

ಕಳುವಾಗಿದ್ದ ಮಗು ಪತ್ತೆ ಹಿನ್ನೆಲೆ, ಪೊಲೀಸ್ ಅಧಿಕಾರಿಗಳು ಇನ್ನಷ್ಟು ತನಿಖೆಗೆ ಮುಂದಾಗಿದ್ದಾರೆ. ಮಕ್ಕಳ ಮಾರಾಟ ಜಾಲದ ಶಂಕೆ ವ್ಯಕ್ತವಾದ ಹಿನ್ನೆಲೆ ಆರೋಪಿ ಮಹಿಳೆಯಿಂದ ಮಾಹಿತಿ ಸಂಗ್ರಹ ಮಾಡಲಾಗಿದೆ. ದಾವಣಗೆರೆ ನಗರದ ಕೆ.ಆರ್ ಮಾರ್ಕೆಟ್ ಬಳಿಯ ಸರ್ಕಾರಿ ‌ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಳುವಾಗಿದ್ದ ಮಗು‌ ಪತ್ತೆ ಆಗಿತ್ತು. ಘಟನೆ ಸಂಬಂಧ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಸರ್ಕಾರಿ ಆಸ್ಪತ್ರೆಯಿಂದ ಅನಾಯಾಸವಾಗಿ ಮಗು ಎತ್ತಿಕೊಂಡು ಹೋಗುವಷ್ಟು ಧೈರ್ಯ ಬರಲು ಹೇಗೆ ಸಾಧ್ಯ ಎಂಬ ಬಗ್ಗೆ ಪ್ರಶ್ನೆ ಮೂಡಿದೆ. ಮಗು ಕಳ್ಳತನ ಮಾಡಿದ್ದ ಗುಲ್ಜಾರ್ ಭಾನು ಹಿನ್ನೆಲೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪಿ ಪತಿ ಸಹ ಮಗು ಅಪಹರಿಸಿದ್ದ ಇತಿಹಾಸ ಇದೆ ಎಂದು ತಿಳಿದುಬಂದಿದೆ. ಆರೋಪಿ ಗುಲ್ಜಾರ ಭಾನು ಪತಿ ಸಹ ಮಗು ಅಪಹರಣ ಮಾಡಿ ಪೊಲೀಸರ ಅತಿಥಿ ಆಗಿದ್ದ. 13 ವರ್ಷಗಳ ಹಿಂದಿನ ಈ ಘಟನೆಯನ್ನು ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಗುಲ್ಜಾರ್ ಭಾನು ಪತಿ ಮಗುವೊಂದು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: ತುಮಕೂರು: ತಾಯಿ, ಮಗಳನ್ನು ಕೊಂದಿದ್ದ ಹಂತಕನಿಗೆ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ದಂಡ ವಿಧಿಸಿದ ಸೆಷನ್ಸ್ ಕೋರ್ಟ್

ಇದನ್ನೂ ಓದಿ: ಅಧಿಕಾರಿಗಳು ಗೃಹ ಸಚಿವರಿಗೆ ಹೀಗೆ ಮಾಹಿತಿಯನ್ನೇ ನೀಡಿಲ್ಲ; ಚಂದ್ರು ಕೊಲೆ ಪ್ರಕರಣದಲ್ಲಿ ಆರಗ ಜ್ಞಾನೇಂದ್ರ ಯುಟರ್ನ್!

Published On - 9:58 am, Thu, 7 April 22